Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!

| Updated By: ಸುಷ್ಮಾ ಚಕ್ರೆ

Updated on: May 20, 2022 | 2:49 PM

ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆನ್ಜ್ ವಸ್ತುಸಂಗ್ರಹಾಲಯದಲ್ಲಿ ಮೇ 5ರಂದು ನಡೆದ ರಹಸ್ಯ ಹರಾಜಿನಲ್ಲಿ ಈ ಕಾರನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲಾಗಿದೆ.

Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!
ಮರ್ಸಿಡಿಸ್ ಬೆಂಜ್
Follow us on

ನವದೆಹಲಿ: ಈ ತಿಂಗಳ ಆರಂಭದಲ್ಲಿ 1955ರ ಮರ್ಸಿಡಿಸ್ ಬೆಂಜ್ (Mercedes-Benz) ಕಾರನ್ನು ಹರಾಜು ಹಾಕಲಾಗಿತ್ತು. ಈ ಕಾರು ಇದುವರೆಗಿನ ಎಲ್ಲ ದಾಖಲೆಗಳನ್ನು ಮುರಿದು ಹರಾಜಿನಲ್ಲಿ 1,100 ಕೋಟಿ ರೂ.ಗೆ (143 ಮಿಲಿಯನ್)ಮಾರಾಟವಾಗಿದೆ. ಈ ಮೂಲಕ ಇದುವರೆಗೆ ಮಾರಾಟವಾದ ವಿಶ್ವದ ಅತ್ಯಂತ ದುಬಾರಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೆನಡಾ ಮೂಲದ ಹರಾಜು ಕಂಪನಿ ಆರ್‌ಎಂ ಸೋಥೆಬಿ ತಿಳಿಸಿದೆ.

“1955ರಿಂದ 1955ರ ಮರ್ಸಿಡಿಸ್ ಬೆಂಜ್ 300 ಎಸ್​ಎಲ್​ಆರ್​ ಉಹ್ಲೆನ್‌ಹಾಟ್ ಕೂಪ್ (Mercedes-Benz 300 SLR Uhlenhaut Coup) ಕಾರನ್ನು ಖಾಸಗಿ ಕಲೆಕ್ಟರ್‌ಗೆ EUR135,000,000 ದಾಖಲೆ ಬೆಲೆಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ” ಎಂದು ತಿಳಿಸಲಾಗಿದೆ. ಈ ಮಾರಾಟವು ಎಲ್ಲಾ ರೀತಿಯಲ್ಲಿಯೂ ವಿಶೇಷವಾಗಿದೆ. ಏಕೆಂದರೆ, ಇದು ಹಿಂದಿನ ದಾಖಲೆಯನ್ನು ಹಿಂದಿಕ್ಕಿ, 95 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾದ ಅತ್ಯಂತ ದುಬಾರಿ ಕಾರಿಗಿಂತ ಹೆಚ್ಚು ಬೆಲೆಗೆ ಮಾರಾಟವಾಗಿದೆ.

ಇದನ್ನೂ ಓದಿ: Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!

ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿರುವ ಮರ್ಸಿಡಿಸ್-ಬೆನ್ಜ್ ವಸ್ತುಸಂಗ್ರಹಾಲಯದಲ್ಲಿ ಮೇ 5ರಂದು ನಡೆದ ರಹಸ್ಯ ಹರಾಜಿನಲ್ಲಿ ಈ ಕಾರನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಮರ್ಸಿಡಿಸ್ ಬೆಂಜ್ ಅಧ್ಯಕ್ಷ ಓಲಾ ಕೆಲೆನಿಯಸ್ ಖಚಿತಪಡಿಸಿದ್ದಾರೆ. ಅತ್ಯಂತ ಅಪರೂಪದ ಬಾಣದ ಆಕಾರದ ಈ ಮರ್ಸಿಡಿಸ್ ಬೆಂಜ್ ಕೂಪ್ ಕಾರಿನ ಖಾಸಗಿ ಮಾಲೀಕತ್ವವವನ್ನು ಇದುವರೆಗೆ ಯಾರೂ ಹೊಂದಿಲ್ಲ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ