Video: ಸ್ವಾರಿ ಗರ್ಲ್ಸ್, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು; ಸ್ಕೂಟಿ ಹಿಂಬದಿ ಬರೆದ ಸಾಲುಗಳು ವೈರಲ್

ಆಟೋ, ಸ್ಕೂಟರ್‌ಗಳ ಹಿಂಬದಿಯಲ್ಲಿ ಬರೆಯಲಾದ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ಜೀವನ ಪಾಠಗಳನ್ನು ಒಳಗೊಂಡರೆ, ಇನ್ನು ಕೆಲವು ತಮಾಷೆಭರಿತ ಸಾಲುಗಳಾಗಿರುತ್ತದೆ. ಇಲ್ಲೊಬ್ಬನು ತನ್ನ ಸ್ಕೂಟಿ ಹಿಂಭಾಗದಲ್ಲಿ ತಮಾಷೆ ಭರಿತ ಸಾಲುಗಳನ್ನು ಬರೆದಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸ್ವಾರಿ ಗರ್ಲ್ಸ್, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು; ಸ್ಕೂಟಿ ಹಿಂಬದಿ ಬರೆದ ಸಾಲುಗಳು ವೈರಲ್
ವೈರಲ್‌ ವಿಡಿಯೋ
Image Credit source: Instagram

Updated on: Nov 26, 2025 | 12:19 PM

ಮದ್ವೆ (Marriage) ಆದ್ಮೇಲೆ ಗಂಡು ಮಕ್ಕಳ ಕಥೆ ಮುಗಿತು. ಮದ್ವೆ ಆದ ಗಂಡ್ಮಕ್ಕಳು ಹೀಗೆನ್ನುವುದನ್ನು ನೀವು ಕೇಳಿರಬಹುದು. ಹೌದು, ಈ ಗಂಡು ಮಕ್ಕಳು ಯಾರಿಗೆ ಹೆದರಿಲ್ಲ ಅಂದ್ರು ತಮ್ಮ ತಮ್ಮ ಹೆಂಡ್ತಿಯರಿಗೆ ಭಯ ಪಡುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಹೌದು, ವ್ಯಕ್ತಿಯೊಬ್ಬ ತನ್ನ ಸ್ಕೂಟರ್ (scooter) ಹಿಂಬದಿಯಲ್ಲಿ ಬರೆದ ಸಾಲುಗಳು ಸಖತ್ ವೈರಲ್ ಆಗಿದೆ. ಹುಡುಗಿಯರಿಗೆ ಕ್ಷಮೆ ಕೇಳಿದ್ದು, ತನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು ಎಂದು ಇಲ್ಲಿ ಉಲ್ಲೇಖಿಸಿದ್ದು, ಇದನ್ನು ನೋಡಿದ್ದು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ರೇನೋಲ್ಡ್ (Renold) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಟಿಯಲ್ಲಿ ಕುಳಿತು ವ್ಯಕ್ತಿಯ ವಾಹನದ ಹಿಂಬದಿಯಲ್ಲಿ ಬರೆದ ಸಾಲುಗಳನ್ನು ನೋಡಬಹುದು. ಗರ್ಲ್ಸ್‌ ಕ್ಷಮಿಸಿ, ನನ್ನ ಹೆಂಡ್ತಿ ಸಿಕ್ಕಾಪಟ್ಟೆ ಸ್ಟ್ರಿಕ್ಟು ಎಂದಿದೆ.  ವಾಹನ ಸವಾರನೊಬ್ಬ ಈ ಸ್ಕೂಟರ್ ಹಿಂಭಾಗದಲ್ಲಿ ಬರೆಯಲಾದ ಸಾಲುಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ‘ನನ್ನನ್ನು ಭಯ್ಯಾ ಎಂದು ಕರೆಯಬೇಡಿ’: ಕ್ಯಾಬ್‌ನಲ್ಲಿ ಕಠಿಣ ನಿಯಮಾವಳಿ ರೂಪಿಸಿದ ಡ್ರೈವರ್

ಈ ವಿಡಿಯೋ ಮೂವತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸೂಪರ್ ಲೈನ್ ಎಂದರೆ, ಇನ್ನೊಬ್ಬರು ಇಂತಹ ಹುಡುಗನೇ ನಮಗೆ ಬೇಕಾಗಿರೋದು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮ್ಮ ಪರಿಸ್ಥಿತಿ ನನಗೆ ಅರ್ಥ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ