Video: ಮೊದಲ ಬಾರಿಗೆ ಬಾದಾಮಿ ತಿಂದು ಕ್ಯೂಟ್​ ಎಕ್ಸ್​ಪ್ರೆಶನ್​ ಕೊಟ್ಟ ಅಳಿಲು; ಬಳಿಕ ಎಲ್ಲವೂ ಗುಳುಂ !

Buitengebieden ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಈ ವಿಡಿಯೋ ಶೇರ್ ಆಗಿದೆ.  ಅದರಲ್ಲಿ ಮಹಿಳೆಯೊಬ್ಬರು ತಮ್ಮ ಅಂಗೈನಲ್ಲಿ ಬಾದಾಮಿ ಹಿಡಿದು ಅಳಿಲಿಗೆ ಕೊಡುತ್ತಾರೆ. ಆ ಅಳಿಲು ಲಗುಬಗೆಯಿಂದ ಒಂದು ಬಾದಾಮಿಯನ್ನು ಕೈಯಿಗೆ ತೆಗೆದುಕೊಂಡು ಬಾಯಿಗೆ ಹಾಕುತ್ತದೆ.

Video: ಮೊದಲ ಬಾರಿಗೆ ಬಾದಾಮಿ ತಿಂದು ಕ್ಯೂಟ್​ ಎಕ್ಸ್​ಪ್ರೆಶನ್​ ಕೊಟ್ಟ ಅಳಿಲು; ಬಳಿಕ ಎಲ್ಲವೂ ಗುಳುಂ !
ಬಾದಾಮಿ ತಿಂದ ಅಳಿಲು
Follow us
TV9 Web
| Updated By: Lakshmi Hegde

Updated on: May 02, 2022 | 4:53 PM

ನೀವು  ಯಾವುದೋ ಒಂದು ಹಣ್ಣನ್ನೋ, ತಿಂಡಿಯನ್ನೋ ಮೊದಲ ಬಾರಿಗೆ ತಿಂದಾಗ ಹೇಗಿರುತ್ತದೆ? ಆ ರುಚಿಯ ಬಗ್ಗೆ ನೀವೇನಾದರೂ ಕಮೆಂಟ್ ಕೊಟ್ಟೇ ಕೊಡುತ್ತೀರಿ. ಚೆನ್ನಾಗಿದ್ದರೆ, ಸೂಪರ್​, ವ್ಹಾ ಎಂದು ಹೇಳುತ್ತೀರಿ ಇಲ್ಲದಿದ್ದರೆ, ಅಯ್ಯೋ ಚೆನ್ನಾಗಿಲ್ಲ, ಸ್ವಲ್ಪವೂ ರುಚಿಯಾಗಿಲ್ಲ ಎನ್ನುತ್ತೀರಿ. ಒಟ್ಟಾರೆ ಮಾತಿನ ಮೂಲಕವೋ, ಭಾವ ವ್ಯಕ್ತಪಡಿಸುವ ಮೂಲಕವೋ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ.  ನಾವು ಮನುಷ್ಯ, ಬಾಯಿ, ಕೈಯಿ ಎಲ್ಲವೂ ಇದೆ..ಅಂದುಕೊಂಡಿದ್ದನ್ನು ಹೇಳಬಹುದು, ಕೈ ಮೂಲಕ ಸನ್ನೆ ಮಾಡಬಹುದು. ಆದರೆ ಮೂಕ ಪ್ರಾಣಿಗಳು ಏನನ್ನಾದರೂ ಮೊದಲ ಬಾರಿಗೆ ತಿಂದಾಗ, ಅವುಗಳಿಗೆ ಆಗುವ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತವೆ? ಇಲ್ನೋಡಿ ಈ ಅಳಿಲು ಮೊದಲ ಬಾರಿಗೆ ಬಾದಾಮಿ ತಿಂದು ಏನು ಮಾಡಿತೆಂದು ! 

Buitengebieden ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಈ ವಿಡಿಯೋ ಶೇರ್ ಆಗಿದೆ.  ಅದರಲ್ಲಿ ಮಹಿಳೆಯೊಬ್ಬರು ತಮ್ಮ ಅಂಗೈನಲ್ಲಿ ಬಾದಾಮಿ ಹಿಡಿದು ಅಳಿಲಿಗೆ ಕೊಡುತ್ತಾರೆ. ಆ ಅಳಿಲು ಲಗುಬಗೆಯಿಂದ ಒಂದು ಬಾದಾಮಿಯನ್ನು ಕೈಯಿಗೆ ತೆಗೆದುಕೊಂಡು ಬಾಯಿಗೆ ಹಾಕುತ್ತದೆ. ಅದಾದ ಬಳಿಕ ಅಳಿಲಿನ ಮುಖದಲ್ಲಿ ಮೂಡಿದ ಭಾವ ಇದೆಯಲ್ಲ, ಥೇಟ್ ಮನುಷ್ಯರು ಮಾಡುವ ಹಾಗೇ ಇದೆ. ಆ ಅಳಿಲು ತನ್ನ ಮುಂದಿನ ಕಾಲಿನಿಂದ ಮಹಿಳೆಯ ಕೈಯನ್ನು ಕ್ಯೂಟ್ ಆಗಿ ಹಿಡಿದುಕೊಳ್ಳುವುದನ್ನೂ ವಿಡಿಯೋದಲ್ಲಿ ನೋಡಬಹುದು. ಕಡೆಗಂತೂ ಅದು ಒಂದರ ಮೇಲೊಂದರಂತೆ ಬಾದಾಮಿಯನ್ನು ತಿಂದಿದ್ದೇ ತಿಂದಿದ್ದು !. ಅಳಿಲು ಮೊದಲ ಬಾರಿಗೆ ಬಾದಾಮಿ ತಿನ್ನುತ್ತಿದೆ ಎಂದು ಕ್ಯಾಪ್ಷನ್ ಬರೆಯಲಾಗಿದೆ.

ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು ನೆಟ್ಟಿಗರಂತೂ ಬಹುವಾಗಿ ಮೆಚ್ಚಿಕೊಂಡಿದ್ದಾರೆ. 6 ಮಿಲಿಯನ್​ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ. ನೆಟ್ಟಿಗರು ಒಬ್ಬೊಬ್ಬರು ಒಂದೊಂದು ವಿಧದ ಕಮೆಂಟ್ ಹಾಕಿದ್ದಾರೆ. ಕೆಲವು ಅಳಿಲಿಗೆ ಬಾದಾಮಿ ಕೊಡಬೇಡಿ. ಅದರಲ್ಲಿ ಹೈಡ್ರೋಸಯಾನಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ಅಳಿಲುಗಳ ಆರೋಗ್ಯ ಹದಗೆಡಬಹುದು ಎಂದು ಸಲಹೆಯನ್ನೂ ನೀಡಿದ್ದಾರೆ.

ಇದನ್ನೂ ಓದಿ: Viral Video: ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಪೊಲೀಸರಿಗೆ ಬೆದರಿಕೆಯೊಡ್ಡಿದ ಮಹಿಳಾ ಅಧಿಕಾರಿ; ವಿಡಿಯೋ ವೈರಲ್

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್