Viral Video: ಉಸಿರುಗಟ್ಟುತ್ತಿದ್ದ ಮಗುವಿನ ಜೀವವನ್ನು ದೇವರಂತೆ ಬಂದು ಕಾಪಾಡಿದ ಪೊಲೀಸ್

ಪೊಲೀಸ್‌ ಅಧಿಕಾರಿಯೊಬ್ಬರು ಪ್ರಥಮ ಚಿಕಿತ್ಸೆಯ ಮೂಲಕ ಹಾಲು ಕುಡಿಯುವಾಗ ಉಸಿರುಗಟ್ಟಿ ಸಾಯುವ ಸ್ಥಿತಿಯಲ್ಲಿದ್ದ  ನವಜಾತ ಶಿಶುವಿನ ಪ್ರಾಣ ಉಳಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ವೈರಲ್‌ ಆಗಿದ್ದು, ಪೊಲೀಸ್‌ ಅಧಿಕಾರಿಯ ಈ  ಮಾನವೀಯ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Viral Video: ಉಸಿರುಗಟ್ಟುತ್ತಿದ್ದ ಮಗುವಿನ ಜೀವವನ್ನು ದೇವರಂತೆ ಬಂದು ಕಾಪಾಡಿದ ಪೊಲೀಸ್
ವೈರಲ್​​ ವಿಡಿಯೋ
Edited By:

Updated on: Jun 12, 2024 | 3:04 PM

ಕೆಲವೊಮ್ಮೆ ದೇವರು ಕಷ್ಟಕಾಲದಲ್ಲಿ ಸಹಾಯ ಮಾಡಲು ಮನುಷ್ಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹಿರಿಯರು ಹೇಳುವ ಮಾತೊಂದಿದೆ. ಈ ಮಾತು ಅಕ್ಷರಶಃ ನಿಜ. ಕೆಲವರು ದೇವರ ರೂಪದಲ್ಲಿ ಬಂದು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ. ಹೀಗೆ  ಮನುಷ್ಯರೇ ದೇವರಂತೆ ಬಂದು ಜೀವ ಉಳಿಸಿದಂತಹ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಹಾಲು ಕುಡಿಯುತ್ತಿದ್ದ ವೇಳೆ ಉಸಿರುಗಟ್ಟಿ ಸಾಯುವ ಸ್ಥಿತಿಯಲ್ಲಿದ್ದ ಪುಟ್ಟ ಕಂದಮ್ಮನನ್ನು ಪೊಲೀಸ್‌ ಅಧಿಕಾರಿಯೊಬ್ಬರು ದೇವರಂತೆ ಬಂದು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಈ ಘಟನೆ ಅಮೇರಿಕಾದ ಮಿಚಿಗನ್‌ನಲ್ಲಿ  ನಡೆದಿದ್ದು, ಹಾಲು ಕುಡಿಯುತ್ತಿದ್ದ ವೇಳೆ ನವಜಾತ ಹೆಣ್ಣುಮಗುವಿಗೆ  ಉಸಿರುಗಟ್ಟುತ್ತದೆ. ಗಾಬರಿಗೊಂಡ ಕುಟುಂಬಸ್ಥರು ಏನು ಮಾಡಬೇಕೆಂದು ತೋಚದೆ ಅಲ್ಲೇ ರಸ್ತೆ ಬದಿಯಲ್ಲಿದ್ದ ಪೊಲೀಸರ ಬಳಿ ಓಡಿ ಬಂದು ಮಗುವನ್ನು ಅವರ ಕೈಗೆ ನೀಡುತ್ತಾರೆ. ಪೊಲೀಸ್‌ ಅಧಿಕಾರಿ ತಮ್ಮ ಸಮಯಪ್ರಜ್ಞೆಯಿಂದ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಆ ಮಗುವಿನ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ 2020 ರಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು TheFigen ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮೂರು ವಾರದ ನವಜಾತ ಶಿಶುವಿನ ಪ್ರಾಣ ರಕ್ಷಿಸಿದ ಪೊಲೀಸ್‌ ಅಧಿಕಾರಿ” ಎಂಬ ಶೀರ್ಷಿಕೆನ್ನು ಬರೆದುಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಕುಟುಂಬವೊಂದು ಗಾಬರಿಗೊಂಡು ತಮ್ಮ ಉಸಿರುಗಟ್ಟಿದ ನವಜಾತ ಶಿಶುವನ್ನು ಪೊಲೀಸ್‌ ಅಧಿಕಾರಿಯ ಬಳಿ ಕರೆತರುತ್ತಿರುವ ದೃಶ್ಯವನ್ನು ಕಾಣಬಹುದು. ಮಗುವಿನ ತಾಯಿ ಹೇಗಾದರೂ ಮಾಡಿ ತನ್ನ ಕಂದನನ್ನು ಉಳಿಸಿ ಎಂದು ಪೊಲೀಸರ ಬಳಿ ಗೋಗರೆಯುತ್ತಾರೆ. ಆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡುವ ಮೂಲಕ ಮಗುವಿನ ಜೀವ ರಕ್ಷಿಸಿ ಪೊಲೀಸ್‌ ಅಧಿಕಾರಿ ರಿಯಲ್‌ ಹೀರೋ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: ಇದು ಕರ್ಮದ ಫಲ, ತುಂಡುಡುಗೆ ತೊಟ್ಟು ದೇವಸ್ಥಾನದಲ್ಲಿ ಸಿಗರೇಟ್‌ ಸೇದುತ್ತಾ ನಿಂತ ಯುವತಿ, ಮುಂದೆನಾಯ್ತು ನೋಡಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.9 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮಗುವಿನ ಪ್ರಾಣ ರಕ್ಷಿಸಿದ ಪೊಲೀಸ್‌ ಅಧಿಕಾರಿಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

 

Published On - 2:53 pm, Wed, 12 June 24