Video: ಇದು ಕರ್ಮದ ಫಲ, ತುಂಡುಡುಗೆ ತೊಟ್ಟು ದೇವಸ್ಥಾನದಲ್ಲಿ ಸಿಗರೇಟ್ ಸೇದುತ್ತಾ ನಿಂತ ಯುವತಿ, ಮುಂದೆನಾಯ್ತು ನೋಡಿ
ಕರ್ಮ ಯಾರನ್ನೂ ಸುಮ್ಮನೆ ಬಿಡೋಲ್ಲ ಎಂಬ ಮಾತಿದೆ. ಇಲ್ಲೊಬ್ಬ ಯುವತಿಯ ವಿಚಾರದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಹೌದು ಯುವತಿಯೊಬ್ಬಳು ತುಂಡುಗುಡೆ ತೊಟ್ಟು ದೇವಾಲಯಕ್ಕೆ ಬಂದದ್ದು ಮಾತ್ರವಲ್ಲದೆ, ಅಲ್ಲಿ ಸಿಗರೇಟ್ ಸೇದಿ ಅನಾಚಾರ ಮೆರೆದಿದ್ದಾಳೆ. ಹೀಗೆ ಸಿಗರೇಟ್ ಸೇದುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವ ಸಂದರ್ಭದಲ್ಲಿ ಆಕೆ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ. ಈ ಇನ್‌ಸ್ಟೆಂಟ್ ಕರ್ಮದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೇವಸ್ಥಾನಗಳಿಗೆ ಹೋಗುವಾಗ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಉಡುಪುಗಳನ್ನು ಧರಿಸುವುದು ಚೆಂದ. ಜೊತೆಗೆ ದೇವಾಲಯಗಳಿಗೆ ಬರುವ ಭಕ್ತರು ಸಭ್ಯ ರೀತಿಯ ಉಡುಪು ಧರಿಸಬೇಕೆಂಬ ವಸ್ತ್ರ ಸಂಹಿತೆ ಕೂಡಾ ಹಲವಾರು ದೇವಲಾಯಗಳಲ್ಲಿ ಜಾರಿಯಲ್ಲಿದೆ. ಹೀಗಿದ್ದರೂ ಕೆಲವೊಬ್ಬರೂ ಮಡರ್ನ್ ಡ್ರೆಸ್ ತೊಟ್ಟು ದೇವಾಲಯಕ್ಕೆ ಬರುವುದುಂಟು. ಅದೇ ರೀತಿ ಇಲ್ಲೊಬ್ಬ ಯುವತಿ ತುಂಡುಡುಗೆ ತೊಟ್ಟು ದೇವಾಲಯಕ್ಕೆ ಬಂದಿದ್ದು ಮಾತ್ರವಲ್ಲದೆ, ಪವಿತ್ರ ಜಾಗದಲ್ಲಿ ಸಿಗರೇಟ್ ಸೇದುವ ಮೂಲಕ ಅನಾಚಾರ ಮೆರೆದಿದ್ದಾಳೆ. ಕರ್ಮದ ಫಲ ಎನ್ನುವ ಹಾಗೆ ಆಕೆ ಸಿಗರೇಟ್ ಸೇದುತ್ತಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುವ ಸಂದರ್ಭದಲ್ಲಿ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾಳೆ. ಈ ದೃಶ್ಯ ದೇವಾಲಯದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇನ್‌ಸ್ಟೆಂಟ್ ಕರ್ಮದ ಈ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋವನ್ನು ಶುಭಾಂಗಿ ಪಂಡಿತ್ (Babymishra_) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಯುವತಿಯೊಬ್ಬಳು ತುಂಡುಡುಗೆ ತೊಟ್ಟು ದೇವಾಲಯದಲ್ಲಿ ಸಿಗರೇಟ್ ಸೇದುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ದೇವಾಲಯ ಒಂದಕ್ಕೆ ತಾಯಿ ಮಗಳಿಬ್ಬರು ಬರುತ್ತಾರೆ. ತಾಯಿ ದೇವರಿಗೆ ಭಕ್ತಿಯಿಂದ ಕೈ ಮುಗಿದು ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ತುಂಡುಡುಗೆ ತೊಟ್ಟು ಬಂದ ಮಗಳು ತಾನು ಎಲ್ಲಿದ್ದೇನೆ ಎಂಬ ಅರಿವಿಲ್ಲದೆ, ದೇವಾಲಯದಲ್ಲಿದ್ದ ದೀಪದಲ್ಲಿ ಸಿಗರೇಟ್ ಹೊತ್ತಿಸಿ ಅದನ್ನು ಸೇದುತ್ತಾ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿರುತ್ತಾಳೆ. ಇದನ್ನು ಕಂಡ ತಾಯಿ ಆಕೆಗೆ ಒಂದೇಟು ಕೊಟ್ಟು ಹೊಗರೆ ದಬ್ಬುತ್ತಾಳೆ. ಹೀಗೆ ಓಡುತ್ತಾ ಹೊರ ಬರುವ ಸಂದರ್ಭದಲ್ಲಿ ಆ ಯುವತಿ ಜಾರಿ ಬಿದ್ದು ಸೊಂಟ ಮುರಿದುಕೊಳ್ಳುತ್ತಾಳೆ. ನಂತರ ಅಲ್ಲಿದ್ದ ಪುರೋಹಿತರು ಮತ್ತು ಭಕ್ತಾದಿಗಳು ಆಕೆಯನ್ನು ಮೇಲಕ್ಕೆತ್ತುತ್ತಾರೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿದ ಕಾರು ; ನಡುರಸ್ತೆಯಲ್ಲೇ 3 ವಾಹನಗಳಿಗೆ ಡಿಕ್ಕಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बॉयफ्रेंड से मोबाइल पर बात करते हुए, मंदिर में रखी आरती से सिगरेट जलाकर मंदिर में ही पीने लगी।
फिसलकर गिरी तो हड्डी टूट गई।
क्या किसी अन्य धार्मिक स्थल पर, इस तरह का TRRISM फैलाती तो सुरक्षित होती?
घटना – मंदिर CC-TV FOOTAGE में केद pic.twitter.com/jzjtDW85LA
— Shubhangi Pandit (@Babymishra_) June 11, 2024
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕೆಲವರು ಇದು ಸ್ಕ್ರಿಪ್ಟೆಡ್ ವಿಡಿಯೋ ಅಂತಾ ಹೇಳಿದ್ರೆ, ಇನ್ನೂ ಕೆಲವರು ಆ ಯುವತಿಯ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: