Viral News: ಹೆಂಡತಿ ಟೀ ಮಾಡೋದಿಲ್ಲ ಎಂದು ವಿಚ್ಛೇದನ ಕೇಳಿದ ಗಂಡ; ಕೋರ್ಟ್ ನೀಡಿದ ತೀರ್ಪು ಏನು?

ಚಿತ್ರರಂಗದ ಸೆಲಬ್ರಿಟಿಗಳ ಡೈವೋರ್ಸ್ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೇ ಚಂಡೀಗಢದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನಗೆ ಹೆಂಡತಿ ಟೀ ಮಾಡಿಕೊಡುವುದಿಲ್ಲವೆಂದು ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಕೋರ್ಟ್ ನೀಡಿದ ತೀರ್ಪು ಏನೆಂದು ಗೊತ್ತಾ?

Viral News: ಹೆಂಡತಿ ಟೀ ಮಾಡೋದಿಲ್ಲ ಎಂದು ವಿಚ್ಛೇದನ ಕೇಳಿದ ಗಂಡ; ಕೋರ್ಟ್ ನೀಡಿದ ತೀರ್ಪು ಏನು?
ಚಹಾ
Follow us
|

Updated on: Jun 11, 2024 | 6:42 PM

ಹರಿಯಾಣ: ಪ್ರೇಮ ವಿವಾಹವೇ ಆಗಿರಲಿ (Love Marriage) ಅಥವಾ ಅರೇಂಜ್ ಮದುವೆಯೇ (Arrange Marriage) ಆಗಿರಲಿ, ಮದುವೆಯಾದ ನಂತರ ಪತಿ-ಪತ್ನಿಯರ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು ಸಾಮಾನ್ಯ. ಕೆಲವೊಮ್ಮೆ ಈ ಜಗಳಗಳು ಬೇಗ ಬಗೆಹರಿಯುತ್ತವೆ ಮತ್ತು ಕೆಲವೊಮ್ಮೆ ಜಗಳಗಳು ವಿಚ್ಛೇದನಕ್ಕೆ (Divorce)  ಕಾರಣವಾಗುವ ಮಟ್ಟಿಗೆ ಉಲ್ಬಣಗೊಳ್ಳುತ್ತವೆ. ಈ ಜಗಳಗಳನ್ನು ಕೊನೆಗೊಳಿಸುವುದು ಮತ್ತು ಸಂಬಂಧಗಳನ್ನು ಸುಧಾರಿಸುವುದು ಉತ್ತಮ ದಾಂಪತ್ಯದ ಸಂಕೇತವಾಗಿದೆ. ಆದರೆ ಪಂಜಾಬ್​ನ ಚಂಡೀಗಢದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗಂಡ ತನ್ನ ಹೆಂಡತಿಯಿಂದ ವಿಚ್ಛೇದನ ಬಯಸಿದ್ದಾನೆ. ಆದರೆ ಹೆಂಡತಿಗೆ ಅವನನ್ನು ಬಿಡಲು ಇಷ್ಟವಿರಲಿಲ್ಲ. ಅವರ ಜಗಳಕ್ಕೆ ಕಾರಣ ಚಹಾ. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಪತಿಯ ಅರ್ಜಿ ತಿರಸ್ಕೃತವಾಯಿತು.

ಪಂಜಾಬ್-ಹರಿಯಾಣ ಹೈಕೋರ್ಟ್ ಮುಂದೆ ವಿಚ್ಛೇದನದ ವಿಶಿಷ್ಟ ಪ್ರಕರಣವೊಂದು ಬಂದಿದೆ. ತನ್ನ ಹೆಂಡತಿ ಟೀ ಮಾಡುವುದಿಲ್ಲ ಎಂದು ಪತಿ ವಿಚ್ಛೇದನ ಕೋರಿದ್ದಾರೆ. ಈ ಕುರಿತು ಪತ್ನಿಯ ಮಾತನ್ನೂ ಹೈಕೋರ್ಟ್ ಆಲಿಸಿದೆ. ಆಗ ಗಂಡನಿಗೆ ಶಾಕ್ ಆಗುವಂಥ ತೀರ್ಪನ್ನು ಹೈಕೋರ್ಟ್ ಕೊಟ್ಟಿದೆ.

ಅವರ ಮನೆಗೆ ಸಂಬಂಧಿಕರು ಅಥವಾ ಸ್ನೇಹಿತರು ಬಂದಾಗಲೆಲ್ಲಾ ಅವರ ಹೆಂಡತಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಪತಿ ಹೇಳಿದ್ದಾರೆ. ಅವರಿಗೆ ತಿಂಡಿ ಮಾಡಿಕೊಡುವುದನ್ನು ಮರೆತುಬಿಡಿ, ಚಹಾವನ್ನು ಸಹ ಕೇಳುವುದಿಲ್ಲ. ಈ ಕಾರಣದಿಂದಾಗಿ, ಅವರ ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧವು ಹದಗೆಟ್ಟಿದೆ. ನಮ್ಮ ಮನೆಗೆ ಯಾರೂ ಬರುವುದಿಲ್ಲ ಎಂದಿದ್ದಾರೆ. ಮೊದಲಿಗೆ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ವಿಷಯ ಕೈಗೂಡದೇ ಇದ್ದಾಗ ಅವರು ಪಂಜಾಬ್ ಹರ್ಯಾಣ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಖ್ಯಾತ ನಟಿ ಜೊತೆ ಹೆಚ್ಚಿತಾ ಆಪ್ತತೆ? ಯುವ ರಾಜ್​ಕುಮಾರ್​ ವಿಚ್ಛೇದನಕ್ಕೆ ಇದೇ ಕಾರಣ ಆಯ್ತಾ?

ಇಲ್ಲಿಯೂ ಆತನಿಗೆ ನಿರಾಸೆಯಾಯಿತು. ಇಂತಹ ಸಣ್ಣ ವಿಚಾರಕ್ಕೆ ನಾವು ವಿಚ್ಛೇದನ ಅರ್ಜಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪತಿ ಮಾಡುವ ಎಲ್ಲ ಆರೋಪಗಳು ಸುಳ್ಳು ಎಂದು ಪತ್ನಿ ಹೇಳಿದ್ದಾರೆ. ನಾನು ಆ ರೀತಿಯಾಗಿ ಎಂದೂ ನಡೆದುಕೊಂಡಿಲ್ಲ. ಇತ್ತೀಚೆಗೆ ಗಂಡನ ವರ್ತನೆ ಬದಲಾಗಿದೆ. ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಲೇ ಇರುತ್ತಾನೆ. ಆದರೂ ನನಗೆ ಅವನನ್ನು ಬಿಡಲು ಇಷ್ಟವಿಲ್ಲ. ಗಂಡನ ಈ ವರ್ತನೆಯಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ.

ಇನ್ನು ಮುಂದೆ ಒಂದೇ ಸೂರಿನಡಿ ಪತ್ನಿಯೊಂದಿಗೆ ಇರಲು ಸಾಧ್ಯವಿಲ್ಲ ಎಂದು ಪತಿ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಪತಿಯ ವಾದಗಳನ್ನು ಹೈಕೋರ್ಟ್ ಒಪ್ಪಿಲ್ಲ. ಇಂತಹ ಸಣ್ಣ ವಿಚಾರಕ್ಕೆ ನಾವು ಈ ವಿಚ್ಛೇದನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ತೀರ್ಪನ್ನು ಕೇಳಿ ಪತಿಗೆ ಆಘಾತವಾಯಿತು.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ವಿರುದ್ಧ ಪೊಲೀಸರಿಗೆ ಸಿಕ್ಕಿವೆ ಈ ಸಾಕ್ಷಿಗಳು

ಹೈಕೋರ್ಟ್ ತೀರ್ಪಿನಲ್ಲಿ ಏನಿದೆ?:

ಪತಿ-ಪತ್ನಿಯರ ನಡುವಿನ ಸಣ್ಣ ಜಗಳ ವಿಚ್ಛೇದನಕ್ಕೆ ಆಧಾರವಾಗುವುದಿಲ್ಲ ಎಂದು ಪಂಜಾಬ್ ಹರ್ಯಾಣ ಹೈಕೋರ್ಟ್ ಹೇಳಿದೆ. ಹೈಕೋರ್ಟ್ ಪ್ರಕಾರ, ಪತ್ನಿ ಪತಿಯ ಸಂಬಂಧಿಕರು ಅಥವಾ ಸ್ನೇಹಿತರಿಗೆ ಚಹಾ ನೀಡದಿದ್ದರೆ ಅದನ್ನು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ. ಇಂತಹ ವಿಷಯಗಳು ದಾಂಪತ್ಯದ ಭಾಗವಾಗಿದ್ದು, ಇದಕ್ಕಾಗಿ ಪತಿ-ಪತ್ನಿ ಸಿದ್ಧರಾಗಿರಬೇಕು ಎಂದು ಪೀಠ ಹೇಳಿದೆ. ಪತಿಯ ವಿಚ್ಛೇದನದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್