AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ವಿರುದ್ಧ ಪೊಲೀಸರಿಗೆ ಸಿಕ್ಕಿವೆ ಈ ಸಾಕ್ಷಿಗಳು

ನಾಲ್ಕು ಆರೋಪಿಗಳು ಬಂದು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡರು. ಯಾವ ವಿಚಾರಕ್ಕೆ ಹತ್ಯೆ ಮಾಡಿದ್ದೀರಿ ಎಂದು ಪೊಲೀಸರು ಪ್ರಶ್ನಿಸಿದಾಗ ಅಸಲಿ ವಿಚಾರ ಹೊರಗೆಬಂದಿದೆ. ಅವರ ಹೇಳಿಕೆಯಿಂದ ನಟ ದರ್ಶನ್​ ಇರುವುದು ಖಚಿತವಾಗಿದೆ. ಕೊಲೆ ನಡೆದ ಸ್ಥಳದಲ್ಲೇ ದರ್ಶನ್​ ಫೋನ್​ ಇದಿದ್ದು ಖಚಿತವಾಗಿದೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ವಿರುದ್ಧ ಪೊಲೀಸರಿಗೆ ಸಿಕ್ಕಿವೆ ಈ ಸಾಕ್ಷಿಗಳು
ರೇಣುಕಾ ಸ್ವಾಮಿ, ದರ್ಶನ್​
Follow us
Kiran HV
| Updated By: ಮದನ್​ ಕುಮಾರ್​

Updated on: Jun 11, 2024 | 4:07 PM

ಆಪ್ತರ ಹೇಳಿಕೆಯಿಂದಲೇ ನಟ ದರ್ಶನ್​ (Darshan) ಅರೆಸ್ಟ್ ಆಗಿದೆ. ಶನಿವಾರ (ಜೂನ್​ 8) ಚಿತ್ರದುರ್ಗದಿಂದ ಬೆಳಿಗ್ಗೆ ರೇಣುಕಾ ಸ್ವಾಮಿಯನ್ನು (Renuka Swamy)  ರಾಘವೇಂದ್ರ ಕರೆದುಕೊಂಡು ಬಂದಿದ್ದ. ಶನಿವಾರ 1 ಗಂಟೆಗೆ ಬೆಂಗಳೂರಿಗೆ ಬಂದಿರುವುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಬೆಂಗಳೂರಿಗೆ ಬಂದಿದ್ದ ರೇಣುಕಾ ಸ್ವಾಮಿಯನ್ನು ಮಧ್ಯಾಹ್ನ 2.30ಕ್ಕೆ ಶೆಡ್​ಗೆ ಕರೆದುಕೊಂಡು ಹೋಗಿದ್ದರು. 3 ಗಂಟೆ ನಂತರ ದರ್ಶನ್ ಆ ಶೆಡ್​ ಎಂಟ್ರಿ ನೀಡಿದ್ದು ಗೊತ್ತಾಗಿದೆ. ದರ್ಶನ್ ಸಮ್ಮುಖದಲ್ಲೇ ಹಲ್ಲೆ ನಡೆದಿದೆ. ಶನಿವಾರ ರಾತ್ರಿ ಶವವನ್ನು ಆರೋಪಿಗಳು ಎಸೆದು ಹೋಗಿದ್ದರು.

ರೇಣುಕಾ ಸ್ವಾಮಿ ಶವ ಪತ್ತೆ ಆಗುತ್ತಿದ್ದಂತೆಯೇ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದವರು ತನಿಖೆ ಆರಂಭಿಸಿದರು. ಶವದ ಮೇಲಿನ ಗಾಯಗಳಿಂದ ಇದು ಕೊಲೆ ಎಂಬುವುದು ಪೊಲೀಸರಿಗೆ ಖಚಿತವಾಯಿತು. ಭಾನುವಾರ (ಜೂನ್​ 9) ಶವ ಪತ್ತೆಯ ನಂತರ ಆರೋಪಿಗಳಿಗೆ ಭಯ ಹುಟ್ಟಿದೆ. 4 ಆರೋಪಿಗಳು ಬಂದು ತಾವೇ ಕೊಲೆ ಮಾಡಿದ್ದು ಎಂದು ಹೇಳಿದರು. ಯಾವ ವಿಚಾರಕ್ಕೆ ಕೊಲೆ ಮಾಡಿದ್ದೀರಿ ಎಂದು ಪೊಲೀಸರು ಪ್ರಶ್ನೆ ಮಾಡಿದಾಗ ಅಸಲಿ ವಿಷಯ ಹೊರಬಂದಿದೆ.

ಸಿಸಿಟಿವಿಯಲ್ಲಿ ಆರೋಪಿಗಳು ಸೆರೆಯಾಗಿದ್ದಾರೆ. ಫೋನ್​ಗಳ ನೆಟ್​ವರ್ಕ್​ ಲೊಕೇಶನ್ ಪತ್ತೆ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ರೇಣುಕಾ ಸ್ವಾಮಿಯ ಮೊಬೈಲ್​ ಲೊಕೇಶನ್​ ಕೂಡ ಪತ್ತೆ ಆಗಿದೆ. ಪ್ರಮುಖ ಆರೋಪಿಗಳ ಹೇಳಿಕೆಯಲ್ಲಿ ದರ್ಶನ್​ ಇರುವುದು ಖಚಿತವಾಗಿದೆ. ಕೊಲೆ ನಡೆದಿರುವ ಸ್ಥಳದ ಲೊಕೇಶನ್​ನಲ್ಲೇ ದರ್ಶನ್​ ಫೋನ್​ ಕೂಡ ಇದಿದ್ದು ಖಚಿತವಾಗಿದೆ. ಅಲ್ಲದೇ, ಕೊಲೆ ಮಾಡಿದ ಆರೋಪಿಗಳ ಫೋನ್​ ಕರೆಗಳ ದಾಖಲೆಗಳು ಲಭ್ಯವಾಗಿದೆ. A2 ಆರೋಪಿಗೆ ಕರೆ ಮಾಡಿರುವ ದಾಖಲೆ ಪೊಲೀಸರಿಗೆ ಲಭ್ಯವಾಗಿದೆ. ಹಲ್ಲೆ ನಡೆಸಿದ ಸ್ಥಳದಲ್ಲಿ ಕೆಲವು ವಸ್ತುಗಳು ಪತ್ತೆ ಆಗಿವೆ.

ಇದನ್ನೂ ಓದಿ: ಆರೋಪಿ ಬದಲು ಸಾಕ್ಷಿ ಮಾಡುವಂತೆ ದರ್ಶನ್ ಪ್ರಕರಣದಲ್ಲಿ ರಾಜಕಾರಣಿಗಳ ಒತ್ತಡ

ದರ್ಶನ್‌ಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ದರ್ಶನ್ ಸೇರಿ 13 ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ನಡೆಯುತ್ತಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಆಗಿದೆ. ಹೆಚ್ಚುವರಿ ಎರಡು ಕೆಎಸ್​ಆರ್​ಪಿ ತುಕಡಿಗಳ ಸಹ ನಿಯೋಜನೆಗೊಂಡಿವೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​, ಪವಿತ್ರಾ ಸೇರಿ 13 ಜನರ ಬಂಧನ; ಇಲ್ಲಿದೆ ಎಲ್ಲರ ವಿವರ

ರೇಣುಕಾ ಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಗಾಯ ಆಗಿರುವುದು ಕಂಡುಬಂದಿದೆ. ಆರೋಪಿಗಳು 15 ಭಾಗಗಳಲ್ಲಿ ಹಲ್ಲೆ ಮಾಡಿರುವುದು ಪತ್ತೆಯಾಗಿದೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿ 15 ಕಡೆ ಗಾಯ ಗಾಯ ಆಗಿದೆ. ರೇಣುಕಾ ಸ್ವಾಮಿಗೆ ಕಟ್ಟಿಗೆ ಮುಂತಾದ ಬಲವಾದ ವಸ್ತುವಿನಿಂದ ಹಲ್ಲೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ವಸತಿ ಯೋಜನೆ ಮೀಸಲಾತಿ, ಸದನದಲ್ಲಿ ಪ್ರಶ್ನೆ ಕೇಳಲಿ, ಉತ್ತರಿಸುವೆ: ಶಿವಕುಮಾರ್
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ದೆಹಲಿ ಮೆಟ್ರೋದೊಳಗೆ ಬಂದಿತ್ತೇ ಹಾವು?
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಜನ ನನಗೆ ಬಟ್ಟೆ ಕೊಡುತ್ತಾರೆ, ಪಾಪದ ಹಣದ ಬಟ್ಟೆ ಯಾರಿಗೆ ಬೇಕು? ಕುಮಾರಸ್ವಾಮಿ
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಉಡುಪಿ ಜನ ಶಾಂತಿಪ್ರಿಯರು, ಅದನ್ನು ಕದಡುವ ಪ್ರಯತ್ನ ಬೇಡ: ಹೆಬ್ಬಾಳ್ಕರ್
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್