ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ 1, ದರ್ಶನ್ ಎ 2; ನಟನಿಗೆ ಹೆಚ್ಚಿದ ಸಂಕಷ್ಟ
ರೇಣುಕಾ ಸ್ವಾಮಿಯ ಕೊಲೆ ಕೇಸ್ನಲ್ಲಿ ನಟಿ ಪವಿತ್ರಾ ಗೌಡ ಎ 1 ಆಗಿದ್ದು, ನಟ ದರ್ಶನ್ ಎ 2 ಹಾಗೂ ಸಹಚರ ಕೆ. ಪವನ್ ಎ 3 ಆಗಿದ್ದಾನೆ. ಬೌರಿಂಗ್ ಆಸ್ಪತ್ರೆಯಲ್ಲಿ ಎಲ್ಲ 13 ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್ 11) ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ. ತನಿಖೆಯ ತೀವ್ರತೆ ಹೆಚ್ಚಾಗಿದೆ.
ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು (Renuka Swamy) ಕೊಲೆ ಮಾಡಿದ ಆರೋಪ ದರ್ಶನ್ ಮೇಲಿದೆ. ಈ ಪ್ರಕರಣದ ತನಿಖೆ ಚುರುಕಾಗಿದೆ. ಕೇಸ್ನಲ್ಲಿ ಪವಿತ್ರಾ ಗೌಡ (Pavithra Gowda) ಎ1 ಆಗಿದ್ದು, ದರ್ಶನ್ ಎ2 ಹಾಗೂ ಕೆ. ಪವನ್ ಎ3 ಆಗಿದ್ದಾನೆ. ಎಲ್ಲರ ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್ 11) ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ದರ್ಶನ್ (Darshan) ಬದುಕಿನಲ್ಲಿ ಈ ಪ್ರಕರಣ ಕಪ್ಪು ಚುಕ್ಕಿ ಆಗಿದೆ. ಈಗ ದರ್ಶನ್ ಜೈಲುಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆಲ್ಲ ಶಾಕಿಂಗ್ ವಿಚಾರಗಳು ಬಹಿರಂಗ ಆಗುತ್ತಿವೆ. ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರ ವಿರುದ್ಧ ಅನೇಕ ಸಾಕ್ಷಿಗಳು ಸಿಗುತ್ತಿವೆ. ಕೊಲೆ ನಡೆದ ಶೆಡ್ಗೆ ಅದೇ ರಾತ್ರಿ ದರ್ಶನ್ ಕಾರು ಬಂದಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಪ್ರಾಥಮಿಕ ತನಿಖೆ ನಡೆದಿದೆ. ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್, ಪವಿತ್ರಾ ಸೇರಿ 13 ಜನರ ಬಂಧನ; ಇಲ್ಲಿದೆ ಎಲ್ಲರ ವಿವರ
ರೇಣುಕಾ ಸ್ವಾಮಿ ಅವರ ಮೃತ ದೇಹ ಸಿಕ್ಕ ನಂತರ ಪೊಲೀಸರು ತನಿಖೆ ಶುರು ಮಾಡಿದರು. ಆ ವೇಳೆ ದರ್ಶನ್ ಹೆಸರು ಹೊರಬಂದಿತ್ತು. ಕೂಡಲೇ ದರ್ಶನ್ರನ್ನು ಮೈಸೂರಲ್ಲಿ ಪೊಲೀಸರು ಅರೆಸ್ಟ್ ಮಾಡಿದರು. ಬಳಿಕ ಅವರನ್ನು ಬೆಂಗಳೂರಿಗೆ ಕರೆದುಕೊಂಡು ತನಿಖೆ ಚುರುಕುಗೊಳಿಸಲಾಯಿತು. ನಂತರ ಬೌರಿಂಗ್ ಆಸ್ಪತ್ರೆಯಲ್ಲಿ ಪವಿತ್ರಾ ಗೌಡ, ದರ್ಶನ್, ಕೆ. ಪವನ್ ಸೇರಿದಂತೆ ಎಲ್ಲ 13 ಆರೋಪಿಗಳನ್ನು ಮೆಡಿಕಲ್ ಟೆಸ್ಟ್ಗೆ ಒಳಪಡಿಸಲಾಯಿತು. ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:28 pm, Tue, 11 June 24