Birds: ಅನ್ಯವರ್ಗದ ಪ್ರಾಣಿ ಪಕ್ಷಿಗಳನ್ನು ತಮ್ಮವೇ ಮರಿಗಳಂತೆ ಪೋಷಿಸುವ ಪ್ರಾಣಿ ಪಕ್ಷಿಗಳ ಅದೆಷ್ಟೋ ವಿಡಿಯೋಗಳನ್ನು ನೋಡಿದ್ದೀರಿ. ನಾಯಿ ಬೆಕ್ಕಿನಮರಿಯನ್ನು, ಗೋರಿಲ್ಲಾ ಹುಲಿಮರಿಯನ್ನು, ಬೆಕ್ಕು (Cat) ಕೋಳಿಮರಿಯನ್ನು… ಹೇಳುತ್ತ ಹೋದರೆ ಒಂದೇ ಎರಡೇ. ಆದರೆ ಇದೆಲ್ಲದಕ್ಕೆ ತದ್ವಿರುದ್ಧವೆಂಬಂಥ ಘಟನೆ ನಡೆದಿದೆ. ಕೊಕ್ಕರೆಯೊಂದು ತನ್ನ ಮಗುವನ್ನೇ ಕುಕ್ಕಿ ಕುಕ್ಕಿ ಮೇಲಿನಿಂದ ಕೆಳಕ್ಕೆ ಎಸೆದು ಸಾಯಿಸಿದೆ (?). ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು ತಾಯಿಕೊಕ್ಕೆರೆಯ ವರ್ತನೆಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ ಇದು ಹೀಗೆ ಮಾಡುತ್ತಿದೆ ಎಂದು ಯೋಚಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ
ತಾಯಿಕೊಕ್ಕರೆ ತನ್ನ ಕೊಕ್ಕಿನಿಂದ ಸತತವಾಗಿ ಕುಡಿಯುತ್ತ ಗೂಡಿನಿಂದಲೇ ಮರಿಯನ್ನು ಕೆಳಕ್ಕೆ ಎಸೆದುಬಿಡುತ್ತದೆ. ಈ ಆಘಾತಕಾರಿ ವಿಡಿಯೋ ಅನ್ನು ಆ. 18ರಂದು X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 7.5 ಲಕ್ಷ ಜನರು ನೋಡಿದ್ದಾರೆ. ಸುಮಾರು 400 ಜನರು ರೀಪೋಸ್ಟ್ ಮಾಡಿದ್ದಾರೆ. ಸಾವಿರಾರು ಜನರು ಈ ಬಗ್ಗೆ ಚರ್ಚಸಿದ್ದಾರೆ.
A mother stork throwing her weakest chick out of the nest 🫨 pic.twitter.com/WGhKzxH7DM
— Terrifying Nature (@TerrifyingNatur) August 18, 2023
ಈ ವಿಡಿಯೋದಲ್ಲಿ ತಾಯಿಕೊಕ್ಕರೆ ತನ್ನ ಐದು ಮರಿಗಳೊಂದಿಗೆ ಗೂಡಿನೊಳಗಿದೆ. ನಾಲ್ಕು ಮರಿಗಳು ಒಂದೆಡೆ ಕುಳಿತಿವೆ. ಇನ್ನೊಂದನ್ನು ಮಾತ್ರ ತನ್ನ ಚೂಪಾದ ಕೊಕ್ಕಿನಿಂದ ಕುಕ್ಕಿ ಅದನ್ನು ಗೂಡಿನಿಂದ ಓಡಲು ಪ್ರಯತ್ನಿಸುತ್ತಿದೆ ತಾಯಿಕೊಕ್ಕರೆ. ಮುಂದೆ ಅದನ್ನು ಗೂಡಿನಿಂದ ಹೊರಗೂ ಬೀಳಿಸುತ್ತದೆ. ಕೆಳಗೆ ಬಿದ್ದ ಅದು ಏನಾಯಿತೋ? ತಾಯಿ ತನ್ನ ಮಗುವಿಗೆ ಹೀಗೇಕೆ ಮಾಡಿದಳೋ? ಆರೋಗ್ಯವಂತ ಮಗುವನ್ನು ಮಾತ್ರ ಚೆನ್ನಾಗಿ ಬೆಳೆಸಬೇಕೆಂದು ಆಕೆ ಹೀಗೆ ತೀರ್ಮಾನಿಸಿದಳೋ? ಅಶಕ್ತವಾದ ಮರಿಯೆಡೆ ಲಕ್ಷ್ಯಕೊಟ್ಟರೆ ಉಳಿದ ಮರಿಗಳನ್ನು ಪೋಷಿಸಲು ಸಾಧ್ಯವಾಗದು ಎಂಬ ನಿರ್ಧಾರಕ್ಕೆ ಬಂದಳೇ?
ಇದನ್ನೂ ಓದಿ : Viral Video: ಅದು ವಿದ್ವಾನ್ ಬಾತುಕೋಳಿಯವರ ಬೀಟ್ಬಾಕ್ಸ್; ಎಡಿಟಿಂಗ್ ವೇಳೆ ಗೊತ್ತಾದ ಸತ್ಯ
ಚಾರ್ಲ್ಸ್ ಡಾರ್ವಿನ್ನ ‘ದಿ ಸರ್ವೈವಲ್ ಆಫ್ ದಿ ಫಿಟೆಸ್ಟ್ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋ ನೋಡಬಹುದೆ? ತಾನಿದ್ದ ಪರಿಸರಕ್ಕೆ ಹೊಂದಿಕೊಳ್ಳುವ ಜೀವಿಗಳು ಮಾತ್ರ ಜೀವಿಸಲು ಮತ್ತು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಸಶಕ್ತ ಎನ್ನುವುದು ಇವುಗಳಿಗೂ ಅನ್ವಯಿಸುತ್ತದೆಯೆ?
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:00 pm, Thu, 7 September 23