Viral Video: ರಾಹುಲ್​​​ ಗಾಂಧಿ ಪ್ರಧಾನಿಯಾಗುವರೆಗೆ ಇಲ್ಲಿ ಸಾಲ ನೀಡುವುದಿಲ್ಲ, ದಯವಿಟ್ಟು ಗಮನಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2024 | 10:00 AM

ಬೀದಿಬದಿ ಪ್ಯಾಪಾರಿಯೊಬ್ಬರು ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆ ತಾನು ಯಾರಿಗೂ ಸಾಲಕ್ಕೆ ಇಲ್ಲಿ ಫುಡ್ ಕೊಡುವುದಿಲ್ಲ ಎಂಬ ಬರಹವನ್ನು ಬರೆದಿರುವ   ಬೋರ್ಡ್ ಒಂದನ್ನು ತಮ್ಮ ಅಂಗಡಿಯ ಮುಂದೆ ನೇತು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Viral Video: ರಾಹುಲ್​​​ ಗಾಂಧಿ ಪ್ರಧಾನಿಯಾಗುವರೆಗೆ ಇಲ್ಲಿ ಸಾಲ ನೀಡುವುದಿಲ್ಲ, ದಯವಿಟ್ಟು ಗಮನಿಸಿ
ವೈರಲ್​​ ವಿಡಿಯೋ
Follow us on

ಕೆಲವೊಬ್ಬರು  ಹೆಚ್ಚಾಗಿ ಸಾಲ ಮಾಡಿ ದಿನಸಿ ಖರೀದಿಸುವುದೋ  ಅಥವಾ ಸಾಲ ಮಾಡಿ ಚಹಾ, ಸಿಗರೇಟ್ ಖರೀದಿಸುವುದು ಮಾಡುತ್ತಿರುತ್ತಾರೆ. ಹೀಗೆ ತೆಗೆದುಕೊಂಡ ದಿನಸಿಯ ಹಣವನ್ನು ಕೆಲವೊಬ್ಬರು ಎಷ್ಟೇ ವರ್ಷವಾದರೂ ಪಾವತಿಸದೆ ಅಂಗಡಿ ವ್ಯಾಪಾರಿಗಳಿಗನ್ನು ಆಟವಾಡಿಸುತ್ತಿರುತ್ತಾರೆ. ಹೀಗೆ ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಬುದ್ಧಿವಂತ ವ್ಯಾಪಾರಿಗಳು ಇಲ್ಲಿ ಸಾಲ ಕೊಡಲಾಗುವುದಿಲ್ಲ, ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ಗ್ರಾಹಕರು ದೇವರಿದ್ದಂತೆ ದೇವರಿಗೆ ಸಾಲ ಕೊಡುವಷ್ಟು ನಾನು ದೊಡ್ಡವನಲ್ಲ ಎಂಬಿತ್ಯಾದಿ ಬೋರ್ಡ್ ಗಳನ್ನು ಅಂಗಡಿಯ ಮುಂದೆ ಹಾಕಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬರು ಬೀದಿ ಬದಿ ವ್ಯಾಪಾರಿ ರಾಹುಲ್ ಗಾಂಧಿ ಪ್ರಧಾನಿಯಾಗುವವರೆಗೆ ಇಲ್ಲಿ ಸಾಲ ಕೊಡಲಾಗುವುದಿಲ್ಲ ಎಂಬ ಬೋರ್ಡ್ ಅನ್ನು ಹಾಕಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೆಚ್ಚಿನವರಿಗೆ ಸಂಜೆ ಹೊತ್ತು ಬೀದಿ ಬದಿ ಅಂಗಡಿಗಳಿಗೆ ಹೋಗಿ ಅಲ್ಲಿ ಬಿಸಿ ಬಿಸಿ ತಿನಿಸುಗಳನ್ನು ತಿನ್ನುವ ಅಭ್ಯಾಸವಿರುತ್ತದೆ. ಅದರಲ್ಲಿ ಕೆಲವರು ದಿನ ಯಾರಪ್ಪಾ ಹಣ ಕೊಡ್ತಾರೆ ಎಂದು ಸಾಲ ಮಾಡಿ ಬಿಸಿ ಬಿಸಿ ಬಜ್ಜಿ, ಬೋಂಡಾ ತಿಂದು ತಿಂಗಳ ಕೊನೆಯಲ್ಲಿ ಪಾವತಿ ಮಾಡುತ್ತಾರೆ. ಇಂತಹ ಸಾಲ ಕೇಳುವವರ ಕಾಟದಿಂದ ತಪ್ಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುವವರೆಗೆ  ಇಲ್ಲಿ ಸಾಲ ನೀಡಲಾಗುವುದಿಲ್ಲʼ ಎಂಬ ಬೋರ್ಡ್ ಹಾಕಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕವಿಶ್ ಅಝೀಝ್ (@azzizkavish) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಅಂಗಡಿಯಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವವರೆಗೆ ಸಾಲ ಮಾಡುವುದನ್ನು ನಿಷೇಧಿಸಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ:

ಆರು ಸೆಕೆಂಡುಗಳ ಈ ವೈರಲ್ ವಿಡಿಯೋದಲ್ಲಿ  ಬೀದಿ ಬದಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯ ಮುಂದೆ ʼಸಾಲ ಕೇಳುವಂತಿಲ್ಲ; ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗುವವರೆ ಇಲ್ಲಿ ಸಾಲವನ್ನು ನೀಡಲಾಗುವುದಿಲ್ಲʼ ಎಂಬ ಬರಹವನ್ನು ಬರೆದಿರುವ ಬೋರ್ಡ್ ಒಂದನ್ನು ನೇತು ಹಾಕಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರಿನ ಸ್ಲಮ್‌ನಲ್ಲಿ ವಾಸಿಸುವ 12 ವರ್ಷದ ಬಾಲಕನಿಗೆ ಐಎಎಸ್ ಅಧಿಕಾರಿಯಾಗುವಾಸೆ; ವಿಡಿಯೋ ವೈರಲ್​​

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಒಂಬತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಫನ್ನಿಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಲ್ಲಿ ಸಾಲವನ್ನು ಪಡೆಯುವ ಭರವಸೆ ಬಿಟ್ಟು ಬಿಡಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.  ಇನ್ನೂ ಅನೇಕರು ಸಾಲ ಕೇಳಲು ಬರುವ ಗ್ರಾಹಕರಿಂದ ಹಿಂಗೂ ತಪ್ಪಿಸಿಕೊಳ್ಳಬಹುದಾ ಎಂದು ಈ ವ್ಯಾಪಾರಿಯ ಹೊಸ ಐಡಿಯಾವನ್ನು ಕಂಡು ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ