Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: Feb 01, 2022 | 5:31 PM

Viral Video: ವಿಡಿಯೋದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಮನೆಯ ಹೊರಗೆ ಇಡ್ಲಿ ಮತ್ತು ದೋಸೆಗಳ ಪಾತ್ರೆಗಳೊಂದಿಗೆ ಕುಳಿತಿರುವುದನ್ನು ನಾವು ನೋಡಬಹುದು. ಅವರು ಈ ಇಡ್ಲಿಗಳನ್ನು ಕೇವಲ ಎರಡೂವರೆ ರೂ.ಗೆ ಮಾರುತ್ತಾರೆ. ಹಾಗೇ, ದೋಸೆಗಳನ್ನು 5 ರೂ.ಗೆ ಮಾರುತ್ತಾರೆ.

Success Story: ಕೇವಲ ಎರಡೂವರೆ ರೂ.ಗೆ ಇಡ್ಲಿ, 5 ರೂ.ಗೆ ದೋಸೆ ಮಾರುವ ಬೆಂಗಳೂರಿನ ಅಮ್ಮ; ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಇಡ್ಲಿ, ದೋಸೆ ಮಾಡುವ ಅಮ್ಮ
Follow us on

ಬೆಂಗಳೂರು: ಬೆಂಗಳೂರೆಂಬ ಮಹಾನಗರಿಯಲ್ಲಿ ದಿನವೂ ಫೈವ್ ಸ್ಟಾರ್ ಹೋಟೆಲ್​ನಲ್ಲಿ ತಿನ್ನುವವರೂ ಇದ್ದಾರೆ, ಫುಟ್​ಪಾತ್​ನಲ್ಲಿರುವ ಗೂಡಂಗಡಿಯಲ್ಲಿ ತಿಂಡಿ ತಿಂದು ಬದುಕುವವರೂ ಇದ್ದಾರೆ. ಸಾಮಾಜಿಕ ಜಾಲತಾಣದಿಂದಾಗಿ ಯಾವುದೋ ಮೂಲೆಯಲ್ಲಿದ್ದವರು ಕೂಡ ರಾತ್ರೋರಾತ್ರಿ ಫೇಮಸ್ ಆಗಿ ಬಿಡುತ್ತಾರೆ. ಸಾಮಾಜಿಕ ಮಾಧ್ಯಮವು ನಮಗೆ ಸ್ಫೂರ್ತಿ ನೀಡುವುದಲ್ಲದೆ ನಮಗೆ ಸಂತೋಷವನ್ನು ನೀಡುವ, ಸ್ಫೂರ್ತಿ ನೀಡುವ ಅದೆಷ್ಟೋ ಕತೆಗಳನ್ನು ನಾವು ಅದರಿಂದ ತಿಳಿದುಕೊಳ್ಳಬಹುದಾಗಿದೆ. ಇತ್ತೀಚೆಗೆ ಬೆಂಗಳೂರಿನ ಮಹಿಳೆಯೊಬ್ಬರು ತಾಜಾ ಇಡ್ಲಿ ಮತ್ತು ದೋಸೆಗಳನ್ನು ಮಾರಾಟ ಮಾಡುವ ವಿಡಿಯೋವೊಂದು ಅಂತರ್ಜಾಲದಲ್ಲಿ (Internet) ವೈರಲ್ ಆಗುತ್ತಿದೆ. ಬೆಂಗಳೂರು ಮೂಲದ ಅಮ್ಮ ಕಡಿಮೆ ಬೆಲೆಗೆ ದಕ್ಷಿಣ ಭಾರತದ ಖಾದ್ಯಗಳನ್ನು ಮಾರಾಟ ಮಾಡುವ ಸಂಕಲ್ಪ ಅನೇಕ ಜನರ ಹೃದಯವನ್ನು ಕಲಕಿದೆ.

youtubeswadofficial ಅಪ್‌ಲೋಡ್ ಮಾಡಿದ ವೀಡಿಯೋದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ತನ್ನ ಮನೆಯ ಹೊರಗೆ ಇಡ್ಲಿ ಮತ್ತು ದೋಸೆಗಳ ಪಾತ್ರೆಗಳೊಂದಿಗೆ ಕುಳಿತಿರುವುದನ್ನು ನಾವು ನೋಡಬಹುದು. ಅವರು ಈ ಇಡ್ಲಿಗಳನ್ನು ಕೇವಲ ಎರಡೂವರೆ ರೂ.ಗೆ ಮಾರುತ್ತಾರೆ. ಹಾಗೇ, ದೋಸೆಗಳನ್ನು 5 ರೂ.ಗೆ ಮಾರುತ್ತಾರೆ. ಈ ಆಹಾರವನ್ನು ಯಾರಾದರೂ ಆರ್ಡರ್ ಕೊಟ್ಟರೆ ಮಾತ್ರ ಫ್ರೆಶ್ ಆಗಿ ತಯಾರಿಸಲಾಗುತ್ತದೆ. ಇಡ್ಲಿಗಳು ಮತ್ತು ದೋಸೆಗಳನ್ನು ಆಕೆಯ ಮನೆಯ ಮೊದಲ ಮಹಡಿಯಲ್ಲಿ ತಯಾರಿಸಲಾಗುತ್ತದೆ ಮತ್ತು ದೊಡ್ಡ ಪಾತ್ರೆಗಳ ಮೂಲಕ ಕೆಳಕ್ಕೆ ತಲುಪಿಸಲಾಗುತ್ತದೆ.

ಬೆಂಗಳೂರಿನ ಆ ಮಹಿಳೆ ಕಳೆದ 30 ವರ್ಷಗಳಿಂದ ದೋಸೆ ಮತ್ತು ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ನೀವು 63, 66, ಪಾರ್ವತಿಪುರಂ, ವಿಶ್ವೇಶ್ವರಪುರ, ಬಸವನಗುಡಿ, ಬೆಂಗಳೂರು ಈ ಅಡ್ರೆಸ್​ನಲ್ಲಿ ಮಹಿಳೆಯನ್ನು ಕಾಣಬಹುದು. ನೀವೂ ಈ ವಿಡಿಯೋವನ್ನು ಒಮ್ಮೆ ನೋಡಿ.

ವಿಡಿಯೋವನ್ನು ಅಪ್‌ಲೋಡ್ ಮಾಡಿದಾಗಿನಿಂದ ಅದನ್ನು 4.8 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. 5.62 ಲಕ್ಷ ಜನರು ಲೈಕ್ ಮಾಡಿದ್ದಾರೆ ಮತ್ತು ನೂರಾರು ಜನರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಈ ಮಹಿಳೆ ಅತ್ಯಂತ ಸಾಮಾನ್ಯರಾಗಿರುತ್ತಾರೆ. ಅವರನ್ನು ಸುಲಭವಾಗಿ ಗುರುತಿಸುವುದು ಕಷ್ಟ. ಇಂತಹ ಒಳ್ಳೆಯ ಕೆಲಸ ಮಾಡಿರುವುದಕ್ಕೆ ಅಭಿನಂದನೆಗಳು” ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಷ್ಟು ಕಡಿಮೆ ಬೆಲೆಯಲ್ಲಿ ಆಹಾರವನ್ನು ನೀಡುವುದರಿಂದ ಅನೇಕ ಜನರಿಗೆ ಸಹಾಯವಾಗುತ್ತದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಆಕೆಯನ್ನು ಒಂದು ದಿನ ಭೇಟಿ ಮಾಡಲು ಇಷ್ಟಪಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Interesting Facts: ಭಾರತದ ಈ ಒಂದು ರೈಲು ನಿಲ್ದಾಣಕ್ಕೆ ಹೆಸರೇ ಇಲ್ಲ; ಇದರ ಕತೆಯೇ ರೋಚಕ!