AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡು ಹೇಳಿ, ಆರತಿ ಬೆಳಗಿ ನೆಚ್ಚಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ: ವೀಡಿಯೋ ವೈರಲ್​

ಇನ್ಫೋಸಿಸ್ ಪೌಂಡೇಶನ್​ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ಗೋಪಿಯ ಜನ್ಮದಿನದಂದು ಹಾಡು ಹೇಳಿಕೊಂಡು ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ನವೆಂಬರ್​ 26,27ರಂದು ನಡೆದಿದ್ದು, ಆದರೆ ಈಗ ವೈರಲ್​ ಆಗಿದೆ.

ಹಾಡು ಹೇಳಿ, ಆರತಿ ಬೆಳಗಿ ನೆಚ್ಚಿನ ಶ್ವಾನದ ಹುಟ್ಟುಹಬ್ಬ ಆಚರಿಸಿದ ಸುಧಾಮೂರ್ತಿ: ವೀಡಿಯೋ ವೈರಲ್​
ಗೋಪಿಗೆ ಆರತಿ ಬೆಳಗುತ್ತಿರುವುದು
Follow us
TV9 Web
| Updated By: Pavitra Bhat Jigalemane

Updated on: Dec 07, 2021 | 4:05 PM

ಬೆಂಗಳೂರು : ಮನೆಯಲ್ಲಿ ಪ್ರಾಣಿಗಳನ್ನು ಮುದ್ದಿನಿಂದ ಸಾಕಿಕೊಂಡು ಅವುಗಳನ್ನು ಮನೆಯ ಜನರಂತೆ ಕಾಣುತ್ತೇವೆ. ಅವುಗಳ ಜನ್ಮದಿನವನ್ನೂ ಆಚರಣೆ ಮಾಡಿ ಖುಷಿಪಡುತ್ತೇವೆ. ಅಂತಹ ಸಾಕು ಪ್ರಾಣಿಗಳಲ್ಲಿ ಮುಂಚೂಣಿಯಲ್ಲಿ ಕಂಡುಬರುವವು ಶ್ವಾನಗಳು. ತನ್ನ ಒಡೆಯನಿಗೆ, ತನ್ನನ್ನು ಮುದ್ದಿಸುವವರಿಗೆ ನಿಯತ್ತಿನಿಂದ ಇರುವ ಜೀವಿ. ಮನೆಯ ಕಾವಲಾಗಿ, ಮನೆ ಜನರ ನೆಚ್ಚಿನ ಸ್ನೇಹಿತನಾಗಿ ಶ್ವಾನಗಳು ಇರುತ್ತವೆಅವುಗಳ ತುಂಟಾಟ, ಅವುಗಳ ಜೀವನ ಪ್ರೀತಿ ನಿಜಕ್ಕೂ ಮಾನವನ ಜೀವನಕ್ಕೆ ಮಾದರಿ. ಇಂತಹ ಶ್ವಾನಗಳ ವಿವಿಧ ರೀತಿಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಇದಕ್ಕೆ ನೆಟ್ಟಿಗರು ಮನಸೋತು ವಿವಿಧ ರೀತಿಯ ಕಾಮೆಂಟ್​ಗಳನ್ನು ಹಂಚಿಕೊಳ್ಳುತ್ತಾರೆ. ಅಂತಹದ್ದೇ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇನ್ಫೋಸಿಸ್ ಪೌಂಡೇಶನ್​ ಅಧ್ಯಕ್ಷೆ ಸುಧಾ ಮೂರ್ತಿ ಹಾಗೂ ಅವರ ಸಹೋದರಿ ತಮ್ಮ ಮನೆಯಲ್ಲಿ ಸಾಕಿದ ಮುದ್ದಿನ ನಾಯಿ ಗೋಪಿಯ ಜನ್ಮದಿನದಂದು ಹಾಡು ಹೇಳಿಕೊಂಡು ಆರತಿ ಬೆಳಗಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ನವೆಂಬರ್​ 27ರಂದು ನಡೆದಿದ್ದು, ಆದರೆ ಈಗ ವೈರಲ್​ ಆಗಿದೆ. ಸುಧಾಮೂರ್ತಿ ಅವರು ತಮ್ಮ ಮುದ್ದಿನ ಶ್ವಾನಕ್ಕೆ ಹಾಡು ಹೇಳಿ ಆರತಿ ಬೆಳಗಿ ಜನ್ಮದಿನ ಆಚರಿಸಿದ ವಿಡಿಯೋವನ್ನು ಪತ್ರಕರ್ತ ಆರ್​ ಶ್ರೀಕಾಂತ್​ ಅವರು ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಧಾ ಮೂರ್ತಿ ಯುವಜನತೆಗೆ ಸದಾ ಸ್ಪೂರ್ತಿಯಾದವರು. ತಮ್ಮ ನಡೆ, ನುಡಿ, ಸಮಾಜ ಸೇವಗಳಲ್ಲಿ ಸದಾ ತೊಡಗಿಸಿಕೊಂಡು ಜನತೆಗೆ ಹತ್ತಿರವಾದವರು. ಪ್ರಾಣಿಗಳ ವಿಷಯದಲ್ಲಿಯೂ ಅಷ್ಟೇ ಭಾವುಕ ಮನಸ್ಥಿಯುಳ್ಳವರು ಸುಧಾ ಮೂರ್ತಿಯವರು ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ.

ವೀಡಿಯೋ ಇಲ್ಲಿದೆ

ಇದನ್ನೂ ಓದಿ:

ಬೆಂಗಳೂರಲ್ಲಿ ಚಾಲಕರಿಗೆ ಆಟೋ ಮೀಟರ್ ಮಾರ್ಪಾಟಿಗೆ 90 ದಿನದ ಅವಕಾಶ; ಇಲ್ಲಿದೆ ಏರಿಕೆಯಾದ ಹೊಸ ದರ ಪಟ್ಟಿ

GGVV: ‘ಗರುಡ ಗಮನ..’ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಕೋರ್ಟ್​ಗೆ ಅರ್ಜಿ; ಮಾದೇವ ಹಾಡಿನ ಬಗ್ಗೆ ಆಕ್ಷೇಪ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು