ಭಾರೀ ಮೊತ್ತಕ್ಕೆ ಹರಾಜಾದ ಸೂಪರ್​ ಮ್ಯಾನ್​ #1 ಕಾಮಿಕ್​ ಪುಸ್ತಕ: ಇಲ್ಲಿದೆ ಮಾಹಿತಿ

| Updated By: Pavitra Bhat Jigalemane

Updated on: Dec 19, 2021 | 4:34 PM

ಅಪರೂಪದ ಸೂಪರ್​ಮ್ಯಾನ್​ 1 ಕಾಮಿಕ್​ ಪುಸ್ತಕ ಬರೋಬ್ಬರಿ 2.6ಮಿಲಿಯನ್ ಯುಎಸ್​ ಡಾಲರ್​ಗೆ ಹರಜಾಗಿದೆ. 1939ರಲ್ಲಿ ತಯಾರಿಸಿದ ಈ ಕಾಮಿಕ್​ ಪುಸ್ತಕ ಇದೀಗ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗಿದೆ.

ಭಾರೀ ಮೊತ್ತಕ್ಕೆ ಹರಾಜಾದ ಸೂಪರ್​ ಮ್ಯಾನ್​ #1 ಕಾಮಿಕ್​ ಪುಸ್ತಕ: ಇಲ್ಲಿದೆ ಮಾಹಿತಿ
ಹರಾಜಾದ ಸೂಪರ್​ ಮ್ಯಾನ್​ ಕಾಮಿಕ್​ ಪುಸ್ತಕ
Follow us on

ನ್ಯೂಯಾರ್ಕ್: ಅಪರೂಪದ ಸೂಪರ್​ಮ್ಯಾನ್​ 1 ಕಾಮಿಕ್​ ಪುಸ್ತಕ ಬರೋಬ್ಬರಿ 2.6ಮಿಲಿಯನ್ ಯುಎಸ್​ ಡಾಲರ್​ಗೆ ಹರಜಾಗಿದೆ. 1939ರಲ್ಲಿ ತಯಾರಿಸಿದ ಈ ಕಾಮಿಕ್​ ಪುಸ್ತಕ ಇದೀಗ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಆನ್​ಲೈನ್​ ಹರಾಜು ಕಂಪನಿ ಕಾಮಿಕ್​ ಕನೆಕ್ಟ್​ ಡಾಟ್​ ಕಾಮ್​ ಪ್ರಕಾರ ಕಾಮಿಕ್​ ಪುಸ್ತಕದ ಕವರ್​ ಮೇಲೆ ಸೂಪರ್​ಮ್ಯಾನ್​ ಎತ್ತರದ ಕಟ್ಟಡಗಳ ಮೇಲೆ ಹಾರುತ್ತಿರುವುದನ್ನು ತೋರಿಸುವ ಚಿತ್ರವಿದೆ ಎಂದು ಸಂಸ್ಥೆ ಫೋಟೊ ಹಂಚಿಕೊಂಡಿದೆ. ಮಾರ್ಕ್​ ಮೈಕಲ್ಸನ್​ ಎನ್ನುವವರು 1979ರಲ್ಲಿ ಕಾಮಿಕ್​ ಪುಸ್ತಕವನ್ನು ಮೊದಲ ಬಾರಿಗೆ ಖರೀಸಿದ್ದರು. ನಂತರ ಅದನ್ನು ಮನೆಯಲ್ಲಿ ಅತೀ ತಂಪಾದ ಪ್ರದೇಶದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದರು. ಇದೀಗ ಅವರು ಕಾಮಿಕ್​ ಪುಸ್ತಕವನ್ನು 2.6ಮಿಲಿಯನ್ ಯುಎಸ್​ ಡಾಲರ್ ಗೆ ಮಾರಾಟ ಮಾಡಿದ್ದಾರೆ.

ಬರಹಗಾರ ಜೆರಿ ಸೀಗೆಲ್​ ಮತ್ತು ಕಲಾವಿದ ಜೋ ಸಿಸ್ಟರ್ ಎನ್ನುವವರು ಈ ಸೂಪರ್​ ಮ್ಯಾನ್​ ಪಾತ್ರವನ್ನು ರಚಿಸಿ ಅದಕ್ಕೆ ಕಾಮಿಕ್​ ಚಿತ್ರವನ್ನು ಬಿಡಿಸಿ ಇರಿಸಿದ್ದರು. ಮ್ಯಾನ್​ ಆಫ್​ ಸ್ಟೀಲ್​ ಅನ್ನು ಒಳಗೊಂಡಿರುವ ಕಾಮಿಕ್​ ಪುಸ್ತಕದ ಅಸಲಿ ಪ್ರತಿ ಈಗ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. 1938ರಲ್ಲಿ ಕಾಮಿಕ್​ ಪುಸ್ತಕವನ್ನು ಪರಿಚಯಿಸಿದಾಗ ಮೊದಲ ಬಾರಿಗೆ 3.25 ಮಿಲಿಯನ್​ ಡಾಲರ್​ಗೆ ಮಾರಾಟವಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

1939ರಲ್ಲಿ ತಯಾರಿಸಿದ ರೀತಿಯಲ್ಲಿ ಇಂದು ಕಾಮಿಕ್​ಗಳನ್ನು ರೂಪಿಸಲು ಸಾಧ್ಯವಿಲ್ಲ. ಅದರ ಮರುಸೃಷ್ಟಿ ಅಸಾಧ್ಯ. ಸೂಪರ್​ ಮ್ಯಾನ್​ ಕಾಮಿಕ್​ 1 ಭಾರೀ ಮೊತ್ತಕ್ಕೆ ಹರಾಜಾಗುವುದಕ್ಕೆ ಅರ್ಹವಾಗಿದೆ ಎಂದು ಕಾಮಿಕ್​ ಕನೆಕ್ಟ್​ ಡಾಟ್ ಕಾಮ್​ ನ ಸಿಇಒ ಸ್ಟೀಫನ್ ತಿಳಿಸಿದ್ದಾರೆ.

ಇದನ್ನೂ ಓದಿ:

ಮೈಸೂರಿನ ಶೋ ರೂಂನಲ್ಲಿ ವಿಷಕಾರಿ ಹಾವು! ವಿಡಿಯೋ ಇದೆ

viral video: ಬೆಳಗಿನವರೆಗೂ ಮುಗಿಯದ ಮದುವೆ ಶಾಸ್ತ್ರ: ಮಂಟಪದಲ್ಲೇ ನಿದ್ದೆಗೆ ಜಾರಿದ ವಧು