Viral: ಕರೆಂಟ್‌ ಶಾಕ್​​​ನಿಂದ ಪ್ರಜ್ಞೆ ತಪ್ಪಿ ಬಿದ್ದ ಕಾಗೆ, ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ

ಕರೆಂಟ್‌ ಶಾಕ್‌ ಹೊಡೆದ ಪರಿಣಾಮ ಕುಸಿದು ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕಾಗೆಗೆ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬರು ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಘಟನೆ ನಡೆದಿದೆ. ಕುಸಿದು ಬಿದ್ದ ಕಾಗೆಯ ಬಾಯಲ್ಲಿ ಬಾಯಿಟ್ಟು ಉಸಿರು ನೀಡುವ ಮೂಲಕ ಒಂದು ಮುಗ್ಧ ಜೀವವನ್ನು ಕಾಪಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಇವರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Viral: ಕರೆಂಟ್‌ ಶಾಕ್​​​ನಿಂದ ಪ್ರಜ್ಞೆ ತಪ್ಪಿ ಬಿದ್ದ ಕಾಗೆ, ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ
ವೈರಲ್​​ ವಿಡಿಯೋ
Edited By:

Updated on: Sep 21, 2024 | 2:19 PM

ಒಂದು ಮುಗ್ಧ ಜೀವ ಉಳಿಸುವ ಸಲುವಾಗಿ ಎಂತಹ ಸವಾಲುಗಳನ್ನು ಎದುರಿಸಲು ತಯಾರಿರುವ ಹೃದಯವಂತರು ನಮ್ಮಲ್ಲಿದ್ದಾರೆ. ಇನ್ನೂ ತಮ್ಮ ಸಮಯ ಪ್ರಜ್ಞೆಯಿಂದ ಅಮೂಲ್ಯ ಜೀವವನ್ನು ಕಾಪಾಡಿದ ಜನರೂ ನಮ್ಮ ನಡುವೆ ಇದ್ದಾರೆ. ಅದೇ ರೀತಿ ಇಲ್ಲೊಬ್ಬ ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಾ ತಮ್ಮ ಸಮಯ ಪ್ರಜ್ಞೆಯಿಂದ ಕರೆಂಟ್‌ ಶಾಕ್‌ ತಗುಲಿ ಕುಸಿದು ಬಿದ್ದ ಕಾಗೆಯ ಪ್ರಾಣ ಉಳಿಸಿದ್ದಾರೆ. ಕುಸಿದು ಬಿದ್ದ ಕಾಗೆಯ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಸಿಪಿಆರ್‌ ಮಾಡುವ ಮೂಲಕ ಮುಗ್ಧ ಜೀವದ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದ್ದು, ಇವರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಘಟನೆ ತಮಿಳುನಾಡಿದ ಕೊಯಮತ್ತೂರಿನ ಕವುಂಡಂಪಾಳ್ಯದಲ್ಲಿ ನಡೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯೋರ್ವ ತಮ್ಮ ಸಮಯ ಪ್ರಜ್ಞೆಯಿಂದ ಕರೆಂಟ್‌ ಶಾಕ್‌ ಹೊಡೆದು ಕುಸಿದು ಬಿದ್ದ ಕಾಗೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಕರೆಂಟ್‌ ಶಾಕ್‌ ಹೊಡೆದ ಪರಿಣಾಮ ಕಾಗೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಪ್ರಾಣ ಉಳಿಸಿಕೊಳ್ಳಲು ನರಳಾಡುತ್ತಿತ್ತು, ಆ ಸಂದರ್ಭದಲ್ಲಿ ಕಾಗೆಯನ್ನು ಎತ್ತಿಕೊಂಡು ಅದರ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಸಿಪಿಆರ್‌ ಮಾಡುವ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾಗೆಯನ್ನು ಸಾವಿನ ದವಡೆಯಿಂದ ರಕ್ಷಿಸಿ, ಅದಕ್ಕೆ ಮರು ಜೀವನವನ್ನೇ ನೀಡಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲಿ ತಂಡದ ಜರ್ಸಿ ಒಣಗಿಸುತ್ತಿರುವ ಆರ್ ಅಶ್ವಿನ್

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು InfoCoimbatore ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬರು ಕರೆಂಟ್‌ ಶಾಕ್‌ ಹೊಡೆದು ಕುಸಿದು ಬಿದ್ದ ಕಾಗೆಯನ್ನು ಕೈಯಲ್ಲಿ ಹಿಡಿದುಕೊಂಡು ಅದಕ್ಕೆ ಸಿಪಿಆರ್‌ ಮಾಡುವ ಮೂಲಕ ಅದರ ಪ್ರಾಣವನ್ನು ರಕ್ಷಣೆ ಮಾಡುವಂತಹ ದೃಶ್ಯವನ್ನು ಕಾಣಬಹುದು. ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಕಾಗೆಯ ಪ್ರಾಣ ಉಳಿದಿದ್ದು, ಇವರ ಈ ಮಾನವೀಯ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ