Video: ಅಲ್ಲ ನೀನೂ ಮೇಲೆ ಹೇಗೆ ಹೋದೆ? ಶ್ವಾನಗಳಿಗೆ ಹೆದರಿ ಮನೆಯ ಛಾವಣಿ ಹತ್ತಿದ ಹಸು

ನಮ್ಮ ಸುತ್ತಮುತ್ತಲಿನಲ್ಲಿ ಕೆಲವು ಆಘಾತಕಾರಿ ಘಟನೆಗಳು ನಡೆಯುತ್ತವೆ. ಕೆಲವು ಘಟನೆಗಳನ್ನು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟನೇ. ಈ ದೃಶ್ಯ ನೋಡಿ ಕೂಡ ನೀವು ಶಾಕ್ ಆಗಬಹುದು. ಹಸುವನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದು, ಈ ವೇಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಸುವು ಮನೆಯ ಹಂಚಿನ ಮೇಲೆ ಹತ್ತಿ ನಿಂತುಕೊಂಡಿದೆ. ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

Video: ಅಲ್ಲ ನೀನೂ ಮೇಲೆ ಹೇಗೆ ಹೋದೆ? ಶ್ವಾನಗಳಿಗೆ ಹೆದರಿ ಮನೆಯ ಛಾವಣಿ ಹತ್ತಿದ ಹಸು
ಶ್ವಾನಗಳಿಗೆ ಹೆದರಿ ಮನೆಯ ಛಾವಣಿ ಹತ್ತಿದ ಹಸು

Updated on: Sep 16, 2025 | 5:29 PM

ಅದಿಲಾಬಾದ್, ಸೆಪ್ಟೆಂಬರ್ 16: ರಸ್ತೆಬದಿಯಲ್ಲಿ ಸಂಚಾರಿಸುವಾಗ ಬೀದಿನಾಯಿಗಳು (Street Dog) ಜನರನ್ನು ಬೆನ್ನಟ್ಟಿ ದಾಳಿ ಮಾಡುತ್ತವೆ. ಇನ್ನು ಮನುಷ್ಯರಷ್ಟೇ ಅಲ್ಲ, ನಾಯಿಗಳು ಈ ಪ್ರಾಣಿಗಳು ಬೆನ್ನಟ್ಟುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಈ ವೇಳೆ ಪ್ರಾಣಿಗಳು ಜೀವಭಯದಲ್ಲಿ ಓಡಿಹೋಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಆದರೆ ಇಲ್ಲೊಂದು ಕಡೆ ಹಸುವನ್ನು ನಾಯಿಗಳು ಬೆನ್ನಟ್ಟಿವೆ. ಈ ವೇಳೆ ಹಸುವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಹತ್ತಿದ್ದು, ಈ ಘಟನೆಯೂ ತೆಲಂಗಾಣದ ಅದಿಲಾಬಾದ್ ಜಿಲ್ಲೆಯ (Adialabad district) ಬೋರಾಜ್ ಮಂಡಲದ ನಿರಾಲಾ ಗ್ರಾಮದಲ್ಲಿ ನಡೆದಿದೆ. ಹಸು ಮನೆಯ ಛಾವಣಿ ಮೇಲೆ ಹತ್ತುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ವೈರಲ್ ಆಗಿದೆ.

ಈ ದೃಶ್ಯವನ್ನು ನೋಡಿ ಸ್ಥಳೀಯರು ಆತಂಕಗೊಂಡಿದ್ದು,ಹಸುವಿನ ಭಾರಕ್ಕೆ ಛಾವಣಿ ಕುಸಿಯುತ್ತದೆ ಎಂದು ಭಯಭೀತರಾಗಿದ್ದಾರೆ. ಹಸುವನ್ನು ಕೆಳಗೆ ಇಳಿಸಲು ಹೆಣಗಾಡಿದ್ದಾರೆ. ಕೊನೆಗೆ ಸತತ ಪ್ರಯತ್ನದಿಂದ ಮನೆಯ ಮೇಲಿಂದ ಹಸುವನ್ನು ಕೆಳಗಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
ನೀರಿಗೆ ಬೀಳುತ್ತಿದ್ದ ಕಂದಮ್ಮನನ್ನು ರಕ್ಷಿಸಿದ ಶ್ವಾನ
ವೈದ್ಯರ ಹಾಸ್ಟೆಲ್​ ಟಾಯ್ಲೆಟ್​​​ ಕಮೋಡ್​​ನೊಳಗೆ ನಾಗರಹಾವು!
ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್‌ ಕುಡಿಸಿದ ಯುವಕ
ಮಲಗಿದ್ದ 2 ತಿಂಗಳ ಮಗುವನ್ನು ನೀರಿನ ಡ್ರಮ್​ಗೆ ಎಸೆದು ಕೊಂದ ಕೋತಿಗಳು!

ಇದನ್ನೂ ಓದಿ:Video: ಜಸ್ಟ್​​ ಮಿಸ್,​​​ ನೀರಿಗೆ ಬೀಳುತ್ತಿದ್ದ ಮಗುವನ್ನು ಕಾಪಾಡಿದ ಶ್ವಾನ

ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಹಸು ಮನೆಯ ಛಾವಣಿ ಹತ್ತಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹಸುವು ಹೇಗೆ ಕೆಳಗೆ ಇಳಿಯಿತು? ಯಾರಾದರೂ ಹಸುವನ್ನು ಕೆಳಗೆ ಹಾಕಿದ್ದಾರೆಯೇ? ಹೀಗೆ ಕೆಲವರು ಪ್ರಶ್ನಿಸಿದ್ದಾರೆ. ಹಸುವಿನ ಮಾಲೀಕರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 5:14 pm, Tue, 16 September 25