ಸಂಭ್ರಮದಿಂದ ಕೂಡಿರುವ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ವಧು ಹಾಗೂ ವರರ ಕಡೆಯ ಸಂಬಂಧಿಕರ ನಡುವೆ ನಡೆಯುವ ವಾಗ್ವಾದ, ಜಗಳ, ರಂಪಾಟಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಹೆಚ್ಚಾಗಿ ಊಟದ ವಿಷಯದಲ್ಲಿಯೇ ಜಗಳಗಳು ನಡೆಯುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಟನ್ ಊಟದಲ್ಲಿ ಸರಿಯಾಗಿ ಮಟನ್ ಪೀಸ್ ಬಡಿಸಿಲ್ಲ ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು, ಈ ವಿಷಯ ದೊಡ್ಡದಾಗಿ ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿದೆ.ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನವಿಪೇಟ್‌ನಲ್ಲಿ ನಡೆದಿದ್ದು, ಮದುವೆ ಊಟದಲ್ಲಿ ಮಟನ್ ಪೀಸ್ ಸರಿಯಾಗಿ ಬಡಿಸಿಲ್ಲವೆಂಬ ಕಾರಣಕ್ಕೆ ಮದುವೆ ಮನೆಯೇ ರಣರಂಗವಾಗಿದೆ. ವರದಿಗಳ ಪ್ರಕಾರ ನವಿಪೇಟ್‌ನ ಎಸ್‌ಆರ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ (ಆಗಸ್ಟ್ 28) ಮದುವೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಊಟದ ಸಮಯದಲ್ಲಿ ವಧುವಿನ ಕಡೆಯವರು ಮಟನ್ ಊಟದಲ್ಲಿ ಸರಿಯಾಗಿ ಮಟನ್ ಪೀಸ್ ಬಡಿಸಿಲ್ಲವೆಂದು ವರನ ಸ್ನೇಹಿತರು ಕಿರಿಕ್ ಮಾಡಿದ್ದಾರೆ. ಈ ವಾಗ್ವಾದ ಅತಿರೇಕಕ್ಕೆ ತಿರುಗಿ ವಧು ಹಾಗೂ ವರನ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಸಮಧಾನ ಪಡಿಸಿ, ಜಗಳ ನಡೆಯಲು ಕಾರಣರಾದ 19 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
మటన్ కోసం తలలు పగలగొట్టుకున్నారు
నిజామాబాద్ జిల్లా నవీపేట్లో జరిగిన ఓ వివాహ వేడుకలో పెళ్లికొడుకు తరపు వారికి మటన్ తక్కువ వేశారని కర్రలు, రాళ్లతో దాడి చేసుకున్నారు.
దీంతో ఫంక్షన్ హాల్ రణరంగాన్ని తలపించింది. ఈ ఘటనలో పలువురు గాయపడగా పోలీసులు కేసు నమోదు చేసి దర్యాప్తు చేస్తున్నారు. pic.twitter.com/vQsbG02gZU
— Telugu Scribe (@TeluguScribe) August 29, 2024
ಈ ಕುರಿತ ಪೋಸ್ಟ್ ಒಂದನ್ನು TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಮಟನ್ ಪೀಸ್ ವಿಚಾರದಲ್ಲಿ ವಧು ಹಾಗೂ ವರನ ಕಡೆಯವರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಯಮಧರ್ಮ ಮತ್ತು ಸ್ವರ್ಗಲೋಕದ ಬಗ್ಗೆ ಫಾರಿನ್ ಲೇಡೀಸ್‌ಗೆ ಮಸ್ತ್ ಆಗಿ ವಿವರಿಸಿದ ಚಿತ್ರಗುಪ್ತ
ಆಗಸ್ಟ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂಥಾ ಅವಸ್ಥೆʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಊಟದ ವಿಚಾರಕ್ಕೆ ಇಷ್ಟೆಲ್ಲಾ ಗಲಾಟೆ ಬೇಕಿತ್ತೇʼ ಎಂದು ಕೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ