Video: ಯಮಧರ್ಮ ಮತ್ತು ಸ್ವರ್ಗಲೋಕದ ಬಗ್ಗೆ ಫಾರಿನ್ ಲೇಡೀಸ್‌ಗೆ ಮಸ್ತ್ ಆಗಿ ವಿವರಿಸಿದ ಚಿತ್ರಗುಪ್ತ
ಉಡುಪಿ-ಮಂಗಳೂರು ಕಡೆ ಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆಯ ಸಂದರ್ಭದಲ್ಲಿ ಹುಲಿ ಮತ್ತು ಇತ್ಯಾದಿ ವೇಷಗಳು ಪ್ರಮುಖ ಆಕರ್ಷಣೆ ಅಂತಾನೇ ಹೇಳ್ಬೋದು. ಇದೀಗ ಮೊನ್ನೆ ಅದ್ಧೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿನ ಚಿತ್ರಗುಪ್ತ-ಯಮರಾಜ ವೇಷಧಾರಿಗಳ ವಿಡಿಯೋವೊಂದು ವೈರಲ್ ಆಗಿದ್ದು, ಯಮಧರ್ಮ ಮತ್ತು ಸ್ವರ್ಗಲೋಕದ ಬಗ್ಗೆ ಫಾರಿನ್ ಲೇಡೀಸ್‌ಗೆ ಚಿತ್ರಗುಪ್ತ ಇಂಗ್ಲೀಷಿನಲ್ಲಿಯೇ ವಿವರಿಸಿದ ಪರಿಯನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಕೃಷ್ಣನೂರು ಉಡುಪಿಯಲ್ಲಿ ಪ್ರತಿವರ್ಷವೂ ಅದ್ಧೂರಿಯಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿಯೂ ಇಲ್ಲಿ ಬಹಳ ವಿಜೃಂಭಣೆಯಿಂದ ಹಬ್ಬ ನಡೆದಿದೆ. ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಬೀದಿ ಬೀದಿಯಲ್ಲೂ ಕಾಣ ಸಿಗುವ ಬಗೆ ಬಗೆಯ ವೇಷಧಾರಿಗಳು. ಪ್ರೇತ, ರಾಕ್ಷಕ, ಹುಲಿ ವೇಷ ಇತ್ಯಾದಿ ವಿವಿಧ ಥೀಮ್‌ಗಳ ವೇಷಗಳನ್ನು ಹಾಕುತ್ತಾ ಬರುವ ಹುಡುಗುರು ತಮ್ಮ ವೇಷಭೂಷಣಗಳಿಂದಲೇ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಇದೀಗ ಮೊನ್ನೆ ಅದ್ಧೂರಿಯಾಗಿ ನಡೆದ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿನ ಚಿತ್ರಗುಪ್ತ-ಯಮರಾಜ ವೇಷಧಾರಿಗಳ ವಿಡಿಯೋವೊಂದು ವೈರಲ್ ಆಗಿದ್ದು, ಯಮಧರ್ಮ ಮತ್ತು ಸ್ವರ್ಗಲೋಕದ ಬಗ್ಗೆ ಫಾರಿನ್ ಲೇಡೀಸ್‌ಗೆ ಚಿತ್ರಗುಪ್ತ ಇಂಗ್ಲೀಷಿನಲ್ಲಿಯೇ ವಿವರಿಸಿದ ಪರಿಯನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಕೃಷ್ಣಾಷ್ಟಮಿ ಸಂದರ್ಭದಲ್ಲಿ ಉಡುಪಿಗೆ ಭೇಟಿ ನೀಡಿದ್ದಂತಹ ವಿದೇಶಿ ಮಹಿಳೆಯರಿಗೆ ಚಿತ್ರಗುಪ್ತ ವೇಷಧಾರಿ, ಈ ವೇಷದ ವಿಷಯವೇನು, ಮತ್ತು ಸ್ವರ್ಗಲೋಕ, ಯಮರಾಜ ಮತ್ತು ಚಿತ್ರಗುಪ್ತರ ಬಗ್ಗೆ ಸೊಗಸಾಗಿ ಹಾಗೂ ಕಷ್ಟಪಟ್ಟು ಇಂಗ್ಲೀಷ್‌ನಲ್ಲಿಯೇ ವಿವರಣೆಯನ್ನು ನೀಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು kudla_focus ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚಿತ್ರಗುಪ್ತರ ಇಂಗ್ಲೀಷ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಇದು ಸ್ವರ್ಗಲೋಕದಲ್ಲಿದ ದೇವರಾದ ಯಮರಾಜ, ಇದು ಚಿತ್ರಗುಪ್ತ-ಜನರ ಪುಣ್ಯಗಳನ್ನು ಲೆಕ್ಕ ಹಾಕುವವನು ಎಂದು ಚಿತ್ರಗುಪ್ತ ವೇಷಧಾರಿ ವಿದೇಶಿ ಮಹಿಳೆಯರಿಗೆ ವಿವರಣೆಯನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಸ್ಪ್ಯಾನರ್ ಹಿಡಿದು ರೈಲ್ವೆ ಹಳಿಯಲ್ಲಿ ಮಕ್ಕಳ ಕಿತಾಪತಿ; ವೈರಲ್ ಆಯ್ತು ವಿಡಿಯೋ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 29 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಚಿತ್ರಗುಪ್ತರ ಬಹಳ ಕಷ್ಟದ ಇಂಗ್ಲೀಷ್ʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂಗ್ಲೀಷ್ ಗೊತ್ತಿಲ್ಲದಿದ್ದರೂ, ಪಾಪ ಕಷ್ಟಪಟ್ಟು ವಿವರಣೆ ನೀಡಿದ್ದಾರೆ, ಅದನ್ನು ಮೆಚ್ಚಲೆಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Fri, 30 August 24