AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಟನ್‌ ಊಟ ಸರಿಯಾಗಿ ಬಡಿಸಿಲ್ಲವೆಂದು ರಣರಂಗವಾಯ್ತು ಮದುವೆ ಮನೆ

ಮದುವೆ ಮನಗೆಳಲ್ಲಿ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಇರ್ಲಿಲ್ಲ, ಊಟದಲ್ಲಿ ಮೀನಿಲ್ಲ ಎಂಬ ಕ್ಷುಲ್ಲಕ ಕಾರಣಗಳಿಗೆ ವಧು ಮತ್ತು ವರರ ಸಂಬಂಧಿಕರು ಕಾಲು ಕೆರೆದು ಜಗಳವಾಡಿದ ಘಟನೆಗಳು ಈ ಹಿಂದೆ ಕೂಡಾ ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲ ಎಂಬ ಕಾರಣಕ್ಕೆ ವರನ ಸ್ನೇಹಿತರು ತಗಾದೆ ತೆಗೆದಿದ್ದು, ಈ ವಿಷಯ ದೊಡ್ಡದಾಗಿ ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿದೆ. ಈ ಸುದ್ದಿ ಇದೀಗ ಭಾರಿ ವೈರಲ್‌ ಆಗುತ್ತಿದೆ.

Video: ಮಟನ್‌ ಊಟ ಸರಿಯಾಗಿ ಬಡಿಸಿಲ್ಲವೆಂದು ರಣರಂಗವಾಯ್ತು ಮದುವೆ ಮನೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 30, 2024 | 5:19 PM

Share

ಸಂಭ್ರಮದಿಂದ ಕೂಡಿರುವ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ವಧು ಹಾಗೂ ವರರ ಕಡೆಯ ಸಂಬಂಧಿಕರ ನಡುವೆ ನಡೆಯುವ ವಾಗ್ವಾದ, ಜಗಳ, ರಂಪಾಟಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಹೆಚ್ಚಾಗಿ ಊಟದ ವಿಷಯದಲ್ಲಿಯೇ ಜಗಳಗಳು ನಡೆಯುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲ ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು, ಈ ವಿಷಯ ದೊಡ್ಡದಾಗಿ ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ ನಡೆದಿದೆ.ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯ ನವಿಪೇಟ್‌ನಲ್ಲಿ ನಡೆದಿದ್ದು, ಮದುವೆ ಊಟದಲ್ಲಿ ಮಟನ್‌ ಪೀಸ್‌ ಸರಿಯಾಗಿ ಬಡಿಸಿಲ್ಲವೆಂಬ ಕಾರಣಕ್ಕೆ ಮದುವೆ ಮನೆಯೇ ರಣರಂಗವಾಗಿದೆ. ವರದಿಗಳ ಪ್ರಕಾರ ನವಿಪೇಟ್‌ನ ಎಸ್‌ಆರ್‌ ಫಂಕ್ಷನ್‌ ಹಾಲ್‌ನಲ್ಲಿ ಬುಧವಾರ (ಆಗಸ್ಟ್‌ 28) ಮದುವೆ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಊಟದ ಸಮಯದಲ್ಲಿ ವಧುವಿನ ಕಡೆಯವರು ಮಟನ್‌ ಊಟದಲ್ಲಿ ಸರಿಯಾಗಿ ಮಟನ್‌ ಪೀಸ್‌ ಬಡಿಸಿಲ್ಲವೆಂದು ವರನ ಸ್ನೇಹಿತರು ಕಿರಿಕ್‌ ಮಾಡಿದ್ದಾರೆ. ಈ ವಾಗ್ವಾದ ಅತಿರೇಕಕ್ಕೆ ತಿರುಗಿ ವಧು ಹಾಗೂ ವರನ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನು ಸಮಧಾನ ಪಡಿಸಿ, ಜಗಳ ನಡೆಯಲು ಕಾರಣರಾದ 19 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್‌ ಒಂದನ್ನು TeluguScribe ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮಟನ್‌ ಪೀಸ್‌ ವಿಚಾರದಲ್ಲಿ ವಧು ಹಾಗೂ ವರನ ಕಡೆಯವರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಯಮಧರ್ಮ ಮತ್ತು ಸ್ವರ್ಗಲೋಕದ ಬಗ್ಗೆ ಫಾರಿನ್ ಲೇಡೀಸ್‌ಗೆ ಮಸ್ತ್‌ ಆಗಿ ವಿವರಿಸಿದ ಚಿತ್ರಗುಪ್ತ

ಆಗಸ್ಟ್‌ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂಥಾ ಅವಸ್ಥೆʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಊಟದ ವಿಚಾರಕ್ಕೆ ಇಷ್ಟೆಲ್ಲಾ ಗಲಾಟೆ ಬೇಕಿತ್ತೇʼ ಎಂದು ಕೇಳಿದ್ದಾರೆ.

ವೈರಲ್​​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!