ಥಾಯ್ ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಬುದ್ಧನ ಪ್ರತಿಮೆ ಹತ್ತಿದ ಮಹಿಳೆ

ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಮಹಿಳೆಯೊಬ್ಬಳು ಬುದ್ಧನ ಪ್ರತಿಮೆ ಹತ್ತಿರುವ ವಿಚಾರ ಇದೀಗ ಆಕ್ರೋಶವನ್ನು ಹುಟ್ಟುಹಾಕಿದೆ. ಚೂಡಿ ಹಾಕಿರುವ ಮಹಿಳೆ ಮತ್ತೊಬ್ಬಳು ಮಹಿಳೆ ಜತೆ ಸೇರಿ ಸಾಹಸ ಮಾಡಿದ್ದಾರೆ. ಬಿಳಿ ಸಲ್ವಾರ್ ಹಾಕಿರುವ ಮಹಿಳೆ ಮತ್ತೊಬ್ಬಳ ಸಹಾಯದಿಂದ ಪ್ರತಿಮೆಯನ್ನು ಹತ್ತಿ ಅಲ್ಲಿಂದ ಮಾವಿನ ಹಣ್ಣು ಕಿತ್ತಿದ್ದಾರೆ. ಟಿಕ್​ಟಾಕ್​ನಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿತ್ತು

ಥಾಯ್ ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಬುದ್ಧನ ಪ್ರತಿಮೆ ಹತ್ತಿದ ಮಹಿಳೆ
ಥೈಯ್ಲೆಂಡ್

Updated on: Mar 09, 2025 | 2:01 PM

ಥಾಯ್ಲೆಂಡ್​, ಮಾರ್ಚ್​ 09: ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಮಹಿಳೆಯೊಬ್ಬಳು ಬುದ್ಧನ ಪ್ರತಿಮೆ ಹತ್ತಿರುವ ವಿಚಾರ ಇದೀಗ ಆಕ್ರೋಶವನ್ನು ಹುಟ್ಟುಹಾಕಿದೆ. ಚೂಡಿ ಹಾಕಿರುವ ಮಹಿಳೆ ಮತ್ತೊಬ್ಬಳು ಮಹಿಳೆ ಜತೆ ಸೇರಿ ಸಾಹಸ ಮಾಡಿದ್ದಾರೆ. ಬಿಳಿ ಸಲ್ವಾರ್ ಹಾಕಿರುವ ಮಹಿಳೆ ಮತ್ತೊಬ್ಬಳ ಸಹಾಯದಿಂದ ಪ್ರತಿಮೆಯನ್ನು ಹತ್ತಿ ಅಲ್ಲಿಂದ ಮಾವಿನ ಹಣ್ಣು ಕಿತ್ತಿದ್ದಾರೆ. ಟಿಕ್​ಟಾಕ್​ನಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿತ್ತು.

ಅನೇಕ ಮಂದಿ ಇದನ್ನು ಖಂಡಿಸಿದ್ದಾರೆ. ಇಬ್ಬರು ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆ ಮಹಿಳೆಯರು ಎಲ್ಲಿಯವರು ಎಂದು ಇದುವರೆಗೂ ತಿಳಿಯದಿದ್ದರೂ ಅವರು ಭಾರತದವರಿರಬಹುದು ಎಂದು ಅಂದಾಜಿಸಿದ್ದಾರೆ. ಮಾವಿನ ಹಣ್ಣು ಕೀಳಲು ಮಹಿಳೆ ಥಾಯ್ ದೇವಾಲಯದ ಪ್ರತಿಮೆಯನ್ನು ಹತ್ತಿದ ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ.

ಒಬ್ಬರು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ದೇವಾಲಯದ ಕೆಳಗೆ ನಿಂತಿದ್ದಾರೆ, ಇನ್ನೊಬ್ಬರು ಮಾವಿನ ಹಣ್ಣು ಕಿತ್ತು ಕೆಳಗಿರುವ ಮಹಿಳೆಗೆ ಕೊಡುತ್ತಿರುವ ವಿಡಿಯೋ ಇದಾಗಿದೆ.

ವಿಯೆಟ್ನಾಂಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರೊಬ್ಬರು ತಮ್ಮ ದೇಶದ ಮರ್ಯಾದೆಯನ್ನು ಕಳೆದಿದ್ದಕ್ಕೆ ಇಬ್ಬರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯೊಬ್ಬ ಭಾರತೀಯನು ತಮ್ಮ ಖ್ಯಾತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅದನ್ನು ನೀವು ಹಾಳು ಮಾಡುತ್ತಿದ್ದೀರಾ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us