
ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತವೆ. ಅವುಗಳ ಆಟ ತುಂಟಾಟ ಆಡುವುದನ್ನು ನೋಡುವುದೇ ಚಂದ. ಇದೀಗ ಮರಿಯಾನೆ ಚೆಂಡನ್ನು ಉರುಳಿಸುತ್ತಾ ಚೆಂಡಾಟ ಆಡಿದೆ. ಈ ಪುಟಾಣಿ ಆನೆಯ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು ನೆಟ್ಟಿಗರ ಗಮನ ಸೆಳೆದಿದೆ.
ಜೈತೂನ್ ಕ್ಯಾಝೆ (zaitunkyzazze) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮರಿಯಾನೆಯ ಮುದ್ದಾದ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿ ಆನೆ ಚೆಂಡನ್ನು ನೋಡುತ್ತಿದ್ದಂತೆ ಮೆಲ್ಲನೆ ತನ್ನ ಕಾಲಿನಲ್ಲಿ ಒದೆಯುತ್ತಾ ಆಟ ಆಡುತ್ತಿದೆ. ಅಲ್ಲೇ ಇದ್ದವರು ಈ ಮರಿಯಾನೆಯ ಆಟ ನೋಡಿ ನಗುತ್ತಿದ್ದಾರೆ.
ಇದನ್ನೂ ಓದಿ: ಮರದ ಬೇಲಿ ದಾಟಲು ಹೋಗಿ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಎಂದರೆ, ಮತ್ತೊಬ್ಬರು ಆಟ ಆಡುವುದರಲ್ಲಿ ಮಕ್ಕಳನ್ನೇ ಮೀರಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ಆನೆಗೆ ಚೆಂಡು ಕಂಡೊಡನೆ ಎಷ್ಟು ಖುಷಿ ನೋಡಿ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ