
ಹೆಣ್ಣೆಂದರೆ (female) ಶಕ್ತಿ, ನಮ್ಮ ಸನಾತನ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ನಮ್ಮ ಈ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜಿಸುವುದಲ್ಲದೇ ಸೃಷ್ಟಿ ಹಾಗೂ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಗಳನ್ನು ದೇವತೆಯಂತೆ ಪೂಜಿಸುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಮನೆಯ ಸದಸ್ಯರೆಲ್ಲರೂ ಮನೆಯ ಪುಟಾಣಿಯ (little girl) ಪಾದ ತೊಳೆದು, ನೀರನ್ನು ಪ್ರಸಾದವೆಂದು ಸ್ವೀಕರಿಸಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು ಹೆಣ್ಣಿಗೆ ನೀಡಲಾದ ಸ್ಥಾನಮಾನವವೇ ಖುಷಿ ತರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
@Dharma0292 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹೆಣ್ಣು ಮಗುವೊಂದು ಮನೆಯ ಜಗಲಿಯ ಮೇಲೆ ಕಾಲು ಚಾಚಿ ಕುಳಿತಿಕೊಂಡಿದ್ದಾಳೆ. ಈ ವೇಳೆಯಲ್ಲಿ ಮನೆಯ ಸದಸ್ಯರೆಲ್ಲರೂ ಒಬ್ಬೊಬ್ಬರಾಗಿ ಬಂದು ಮನೆಯ ಹೆಣ್ಣು ಮಗುವಿನ ಪಾದ ತೊಳೆದು, ನೀರನ್ನು ತಲೆಯ ಮೇಲೆ ಹಚ್ಚಿ, ಪ್ರಸಾದವೆಂದು ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಈ ಪುಟ್ಟ ಹುಡುಗಿಯೂ ಎಲ್ಲರನ್ನು ಕಣ್ಣು ಬಾಯಿ ಬಿಟ್ಟು ನೋಡಿ, ಮುದ್ದಾಗಿ ನಗುತ್ತಿರುವುದನ್ನು ನೋಡಬಹುದು.
She is Shakti, she is Lakshmi, she is the sacred heartbeat of Sanatan Dharma. pic.twitter.com/KaUAmWW1fC
— DHARMA (@Dharma0292) November 3, 2025
ಇದನ್ನೂ ಓದಿ: ಗ್ಲಾಸ್‌ನಲ್ಲಿದ್ದ ನೀರು ಚೆಲ್ಲದೇ ಕಿತ್ತಳೆ ಹಣ್ಣು ಹೊರತೆಗೆದ ಬಾಲಕಿ, ಈಕೆ ಬಳಸಿದ ಟ್ರಿಕ್ಸ್ ನೋಡಿ
ನವೆಂಬರ್ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ಭಾರತದ ನಿಜವಾದ ಗುರುತು, ಮಹಿಳೆಯರಿಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಣ್ಣು ಮಕ್ಕಳನ್ನು ಪೂಜಿಸುವ ದೇಶದಲ್ಲಿ ಪ್ರತಿದಿನವು ನವರಾತ್ರಿಯೇ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಸನಾತನ ಧರ್ಮ ಸಂಸ್ಕೃತಿಗೆ ಜಯ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ