Viral: ಮಕ್ಕಳಿಗೆ ಎಜುಕೇಶನ್ ಕೊಡಿಸೋದು ಕಷ್ಟ; ಬೆಂಗಳೂರಿನ ಸ್ಕೂಲ್‌ನಲ್ಲಿ ಒಂದನೇ ತರಗತಿ ಫೀಸ್ ಬರೋಬ್ಬರಿ 7.35 ಲಕ್ಷ ರೂ

ಏನೇ ಹೇಳಿ ಈಗಿನ ಈ ದುಬಾರಿ ದುನಿಯಾದಲ್ಲಿ ಬದುಕೋದು ತುಂಬಾನೇ ಕಷ್ಟ. ನಿಮ್ಮ ಕೈಯಲ್ಲಿ ದುಡ್ಡಿದ್ರೆ ಮಾತ್ರ ಇಲ್ಲಿ ಬದುಕೋಕೆ ಆಗೋದು. ಈ ಮಕ್ಕಳ ಸ್ಕೂಲ್ ಫೀಸ್ ಕೇಳುವುದೇ ಬೇಡ. ಲಕ್ಷ ಲಕ್ಷ ದುಡಿದ್ರೂ ಮಕ್ಕಳ ಫೀಸ್ ಮಾತ್ರ ಕಟ್ಟೋಕೆ ಆಗಲ್ಲ. ಇದೀಗ ಬೆಂಗಳೂರಿನ ಒಂದನೇ ತರಗತಿ ಶಾಲಾ ಶುಲ್ಕದ ರಸೀದಿಯೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೀಸ್ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

Viral: ಮಕ್ಕಳಿಗೆ ಎಜುಕೇಶನ್ ಕೊಡಿಸೋದು ಕಷ್ಟ; ಬೆಂಗಳೂರಿನ ಸ್ಕೂಲ್‌ನಲ್ಲಿ ಒಂದನೇ ತರಗತಿ ಫೀಸ್ ಬರೋಬ್ಬರಿ 7.35 ಲಕ್ಷ ರೂ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Sep 01, 2025 | 3:26 PM

ನಮ್ಮ ಮಕ್ಕಳು ನಮ್ಮಂತೆ ಆಗೋದು ಬೇಡ, ಒಳ್ಳೆಯ ಶಿಕ್ಷಣ ಪಡೆಯಲಿ, ಚೆನ್ನಾಗಿ ಓದಲಿ ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗೆ ಸೇರಿರುತ್ತಾರೆ. ಆದರೆ ಈ ಖಾಸಗಿ ಶಾಲೆಗಳು ಶಿಕ್ಷಣದ ಹೆಸರಿನಲ್ಲಿ ಸುಲಿಗೆ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಸ್ಕೂಲ್ ಫೀಸ್ ಜಾಸ್ತಿಯಾಗುತ್ತಿದೆ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಇದೀಗ ಬೆಂಗಳೂರಿನ (Bengaluru) ಶಾಲೆಯೊಂದರ ಶುಲ್ಕದ ರಶೀದಿಯೊಂದು (School fees) ವೈರಲ್ ಆಗಿದೆ. ಇದರಲ್ಲಿ ಒಂದನೇ ತರಗತಿ ಮಕ್ಕಳ ಸ್ಕೂಲ್ ಫೀಸ್ ಏಳು ಲಕ್ಷ ರೂ ದಾಟಿದೆ. ಈ ಪೋಸ್ಟ್ ನೋಡಿದ ಪೋಷಕರು ಹೀಗೆ ಆದ್ರೆ ಮಕ್ಕಳಿಗೆ ಶಿಕ್ಷಣ ಕೊಡಿಸೋದು ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಸ್ಕೂಲ್ ಫೀಸ್ ಬಲು ದುಬಾರಿ

ಇದನ್ನೂ ಓದಿ
ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ
ಅಪ್ಪನ ವರ್ಕ್ ಫ್ರಮ್ ಹೋಮ್ ಸ್ಥಿತಿಗತಿಯನ್ನು ಅನುಕರಣೆ ಮಾಡಿದ ಪುಟಾಣಿ
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಚೋಟ ಮಾಸ್ಕ್ ಮ್ಯಾನ್, ಪತ್ತೆಯಾಗದ ಹೊಸ ತಲೆಬುರುಡೆ

ಬೆಂಗಳೂರಿನ ಖಾಸಗಿ ಶಾಲೆಯ ವಾರ್ಷಿಕ ಶುಲ್ಕದ ರಸೀದಿಯ ಫೋಟೊವನ್ನು ಪೋಷಕರೊಬ್ಬರು ತಮ್ಮ @dmuthuk ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುತ್ತುಕೃಷ್ಣನ್ ಅವರು ಈ ಪೋಸ್ಟ್‌ನೊಂದಿಗೆ ಇದು ಮುಕ್ತ ಮಾರುಕಟ್ಟೆ. ಬೆಲೆ ನಿಗದಿ ವ್ಯಕ್ತಿಗಳಿಗೆ ಬಿಟ್ಟದ್ದು. ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವುದು ಗ್ರಾಹಕರ ಆಯ್ಕೆ. ಹೆಚ್ಚಿನ ಸಿದ್ಧಾಂತಗಳಂತೆ ಈ ಸಿದ್ಧಾಂತದಲ್ಲೂ ಎಲ್ಲವೂ ಸರಿ. ಬೆಂಗಳೂರಿನ ಉತ್ತಮ ಶಾಲೆಗಳಲ್ಲಿ ಒಂದರ ಶುಲ್ಕ ರಚನೆಯನ್ನು ನೋಡಿ. ವಾರ್ಷಿಕ 50 ಲಕ್ಷ ರೂಪಾಯಿಗಳ ತೆರಿಗೆ ಪೂರ್ವ ಆದಾಯ ಗಳಿಸುವ ಮತ್ತು ಇಬ್ಬರು ಶಾಲೆಗೆ ಹೋಗುವ ಮಕ್ಕಳನ್ನು ಹೊಂದಿರುವ ಐಟಿ ದಂಪತಿಗಳಿಗೆ ಸಹ ಇದು ಭರಿಸಲಾಗದದು. ಭಾರತವು ಅತಿರೇಕಗಳ ನಾಡು ಎಂದು  ಶಿರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಬೆಂಗಳೂರಿನ ಶಾಲೆಯೊಂದರ 2025 -26 ಶಾಲಾ ಶುಲ್ಕದ ರಶೀದಿ ಇದಾಗಿದೆ. ಇಲ್ಲಿ 1 ರಿಂದ 5 ನೇ ತರಗತಿಯವರೆಗಿನ ಶುಲ್ಕಗಳು 7.35 ಲಕ್ಷ ರೂ ಉಲ್ಲೇಖಿಸಲಾಗಿರುವುದನ್ನು ಕಾಣಬಹುದು. ಹಂತ ಹಂತವಾಗಿ ಹೆಚ್ಚಳವಾಗಿ 10ನೇ ತರಗತಿಯವರೆಗೆ ಶುಲ್ಕವು ಹೆಚ್ಚಳವಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. 6 ರಿಂದ 8 ನೇ ತರಗತಿಯವರೆಗಿನ ಶುಲ್ಕಗಳು 7.75 ಲಕ್ಷ ರೂ, 9 ಮತ್ತು 10 ನೇ ತರಗತಿಯ ಶುಲ್ಕಗಳು 8.5 ಲಕ್ಷ ರೂಹಾಗೂ 11 ಮತ್ತು 12 ನೇ ತರಗತಿಯ ಶುಲ್ಕಗಳು 11 ಲಕ್ಷ ರೂ ಹೀಗೆ ಸ್ಪಷ್ಟವಾಗಿ ಉಲ್ಲೇಖಿಸಿರುವುದನ್ನು ಈ ರಶೀದಿಯಲ್ಲಿ ನೀವು ನೋಡಬಹುದು.

ಇದನ್ನೂ ಓದಿ:Video: ರಾಯಲ್ ಟ್ರೀಟ್ಮೆಂಟ್ ಅಂದ್ರೆ ಇದೆ ಇರ್ಬೇಕು; ಮುದ್ದಿನ ಮಗನಿಗೆ ಕಷ್ಟ ಕೊಡದೇ ತಾನೇ ಹೋಮ್ ವರ್ಕ್ ಮಾಡಿದ ಅಮ್ಮ

ಆಗಸ್ಟ್ 31 ರಂದು ಶೇರ್ ಮಾಡಲಾದ ಈ ಪೋಸ್ಟ್ ಒಂದು ಲಕ್ಷ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಒಬ್ಬ ಬಳಕೆದಾರ ದುಬಾರಿ ಖಾಸಗಿ ಶಾಲೆಗಳಾಗಿವೆ. ಆದರೆ ಉತ್ತಮ ಶಿಕ್ಷಣವು ಕೇವಲ ಶುಲ್ಕವನ್ನು ಅವಲಂಬಿಸಿಲ್ಲ. ಕೆಲವೊಮ್ಮೆ ನಿಜವಾದ ಮೌಲ್ಯ ಹಾಗೂ ಕಲಿಕೆಯೂ ಸರಳ ಹಾಗೂ ಕೈಗೆಟುಕುವ ದರದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಇವು ಶ್ರೀಮಂತರಿಗಾಗಿ ಇರುವ ಶಾಲೆಗಳು, ಮುಂಬೈನಲ್ಲಿ ಅನೇಕ ಉತ್ತಮ ಹಾಗೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಕೈಗೆಟುಕುವ ಶಾಲೆಗಳಿವೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಸೇರಿರುವ ಪೋಷಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಶಾಲೆ ಕೋಟ್ಯಾಧಿಪತಿಗಳ ಮಕ್ಕಳಿಗಾಗಿ, ಜನಸಾಮಾನ್ಯರ ಮಕ್ಕಳಿಗೆ ಅಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ