ಆಹಾ ಎಂಥಾ ಆ ಕ್ಷಣಾ; ಟಬ್​ನಲ್ಲಿ ಮೈಮರೆತು ನರ್ತಿಸುತ್ತಿರುವ ಗೋರಿಲ್ಲಾ ವಿಡಿಯೋ ವೈರಲ್

Dancing Gorilla : ಎಂಥ ಖುಷಿಯಲ್ಲಿದೆ ಈ ಗೋರಿಲ್ಲಾ ಎಂದು ಕೆಲವರು, ಯಾರೋ ಒಬ್ಬರು ಇಲ್ಲ ಇದು ಖುಷಿಯಲ್ಲಿಲ್ಲ ಎಂದು. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ? 21.9 ಮಿಲಿಯನ್​ ಜನ ಇದನ್ನು ನೋಡಿದ್ದಾರೆ.

ಆಹಾ ಎಂಥಾ ಆ ಕ್ಷಣಾ; ಟಬ್​ನಲ್ಲಿ ಮೈಮರೆತು ನರ್ತಿಸುತ್ತಿರುವ ಗೋರಿಲ್ಲಾ ವಿಡಿಯೋ ವೈರಲ್
ಟಬ್​ನಲ್ಲಿ ಸಂತೋಷದಿಂದ ಕುಣಿಯುತ್ತಿರುವ ಗೋರಿಲ್ಲಾ
Edited By:

Updated on: Dec 01, 2022 | 11:33 AM

Viral Video : ಈ ಗುರುವಾರ ಒಂದು ಕಳೆದರೆ ಸಾಕು ಇನ್ನೇನು ಹೀಗೆ ಗೋರಿಲ್ಲಾದಂತೆ ನೇರ ಟಬ್ಬಿಗೆ ಬೀಳುವುದೇ ಎಂದು ಕನಸು ಕಾಣುತ್ತಿದ್ದೀರಾ? ಆದರೆ ಈ ಗೋರಿಲ್ಲಾ ಬರೀ ನೀರಾಟವಾಡುತ್ತ ಕುಳಿತಿಲ್ಲ. ಯಾರು ಬರ್ತೀರಿ ಬನ್ನಿ ನನ್ನ ಜೊತೆ ಡ್ಯಾನ್ಸ್ ಮಾಡೋಕೆ ಎಂದು ಸವಾಲು ಹಾಕಿ ಕುಣಿಯಲು ಶುರುಮಾಡಿದೆ. ಎಷ್ಟೊಂದು ತನ್ಮಯವಾಗಿ ತನ್ನದೇ ಲೋಕದಲ್ಲಿ ಮುಳುಗಿದೆ ನೋಡಿ. ಅತ್ಯಂತ ಖುಷಿಯಾದಾಗ ಮಾತ್ರ ತಾನೆ ಹೀಗೆ ಮೈಚಳಿ ಬಿಟ್ಟು ಕುಣಿಯಲು ಸಾಧ್ಯವಾಗುವುದು?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಗೋರಿಲ್ಲಾ ದಲ್ಲಾಸ್​ನ ಮೃಗಾಲಯದಲ್ಲಿದೆ. ಇದರ ಹೆಸರು ಜೋಲಾ. ಈಗಾಗಲೇ ಈ ಗೋರಿಲ್ಲಾ ತನ್ನ ನೃತ್ಯಪ್ರತಿಭೆಗೆ ಆನ್​ಲೈನ್​ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ವಿಡಿಯೋದಲ್ಲಿ ಟಬ್​ನಲ್ಲಿ ನೀರು ಚಿಮ್ಮುತ್ತ ಡ್ಯಾನ್ಸ್ ಮಾಡುವ ರೀತಿ ಮನಮೋಹಕವಾಗಿದೆಯಲ್ಲ?

21.9 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಇದು ಬಹಳ ಅದ್ಭುತವಾಗಿದೆ ಎಷ್ಟು ಸಂತೋಷದಿಂದ ಕುಣಿಯುತ್ತಿದೆ ಎಂದಿದ್ದಾರೆ ಕೆಲವರು. ಇನ್ನೊಬ್ಬರು ಇಲ್ಲ ಅವನು ಸಂತೋಷವಾಗಿಲ್ಲ ಎಂದಿದ್ದಾರೆ. ಓಹ್ ನನ್ನಂತೆಯೇ ಸೇಮ್​, ನಾನೂ ಹೀಗೇ ಬಾತ್ರೂಮಿನಲ್ಲಿ ಕುಣಿಯುತ್ತೇನೆ. ನಾನು ಮುಂದಿನ ದಿನಗಳಲ್ಲಿ ಮ್ಯಾಂಚೆಸ್ಟರ್​ಗೆ ಪ್ರವಾಸ ಕೈಗೊಳ್ಳುತ್ತಿದ್ದೇನೆ, ಆಗ ಖಂಡಿತ ಜೋಲಾನನ್ನು ಭೇಟಿಮಾಡುತ್ತೇನೆ ಎಂದಿದ್ದಾರೆ ಒಬ್ಬರು. ಎಷ್ಟೊಂದು ಲಯಬದ್ಧವಾಗಿ ಕುಣಿಯುತ್ತಿದ್ದಾನೆ ನೋಡಿ ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ