Viral Video: ತನ್ನ ಮದುವೆಯಲ್ಲಿಯೂ ಮೊಬೈಲಿನಿಂದ ಕಣ್ಣೆತ್ತದ ಮಾಡರ್ನ್​ ವರೋತ್ತಮ

| Updated By: ಶ್ರೀದೇವಿ ಕಳಸದ

Updated on: Jun 05, 2023 | 3:48 PM

Marriage : ಕ್ರಿಪ್ಟೋನಲ್ಲಿದ್ದೀಯೇನೋ ವರಮಹಾಶಯ? ಕಾರಿನಲ್ಲಿ ಕೂತುಕೊಳ್ಳುವುದರೊಳಗೆ ಡಿವೋರ್ಸ್? ಅಲ್ಲಾ ಮಾರಾಯ ಇದು ನಿನ್ನದೇ ಮದುವೆ ಅಲ್ವೇನೋ... ಪ್ರತಿಕ್ರಿಯೆಗಳ ಸುರಿಮಳೆ. ಈ ತನಕ 39 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

Viral Video: ತನ್ನ ಮದುವೆಯಲ್ಲಿಯೂ ಮೊಬೈಲಿನಿಂದ ಕಣ್ಣೆತ್ತದ ಮಾಡರ್ನ್​ ವರೋತ್ತಮ
ತನ್ನ ಮದುವೆಯಲ್ಲಿ ಮೊಬೈಲಿನೊಳಗೆ ಮುಳುಗಿರುವ ವರ
Follow us on

Mobile : ಕೊರೊನಾ ಸಂದರ್ಭದಲ್ಲಿ ನಡೆಯುತ್ತಿದ್ದ ಮದುವೆಯ (Marriage) ವೇಳೆ ವರನೊಬ್ಬ ಲ್ಯಾಪ್​ಟಾಪ್​ನಲ್ಲಿ ಮುಳುಗಿದ ವಿಡಿಯೋ ನಿಮಗೆ ನೆನಪಿರಬಹುದು. ಹಾಗೆಯೇ ವಧುವೊಬ್ಬಳು ಅಲಂಕಾರ ಮಾಡಿಕೊಳ್ಳುವ ಸಂದರ್ಭದಲ್ಲಿ ಲ್ಯಾಪ್​ಟಾಪ್​ನಲ್ಲಿ ಆಫೀಸ್​ ಕೆಲಸದಲ್ಲಿ ಮುಖ ಹುದುಗಿದ್ದಳು. ಇದೀಗ ವೈರಲ್ ಆಗಿರುವ ಈ ವಿಡಿಯೋ ಕೂಡ ಮದುವೆಗೇ ಸಂಬಂಧಿಸಿದ್ದು. ಆದರೆ ವರ ಮಾತ್ರ ನೆಟ್ಟಿಗರಿಂದ ಹಿಗ್ಗಾಮುಗ್ಗಾ ಬೈಸಿಕೊಳ್ಳುತ್ತಿದ್ದಾನೆ. ಯಾಕೆಂದು ಈ ಕೆಳಗಿನ ವಿಡಿಯೋ ನೋಡಿ.

ಈ ವಿಡಿಯೋ ಅನ್ನು ಈತನಕ 39 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ನಿನ್ನ ದೇಹ ಮಾತ್ರ ಇಲ್ಲಿದೆ ಮನಸ್ಸೆಲ್ಲಾ ಹೊರಗಿದೆ. ಇದು ನಿನ್ನದೇ ಮದುವೆ ಎನ್ನುವುದು ನಿನಗೆ ನೆನಪಿದೆಯೇ? ಎಂದು ವರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಅನೇಕ ನೆಟ್ಟಿಗರು. ಆದರೆ ಆ ವಧು ಕೂಡ ಅವನ ವರ್ತನೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಇದ್ದಾಳೆಂದರೆ ಹೇಗೆ ಸಾಧ್ಯ? ಇದು ಹುಚ್ಚುತನದ ಪರಮಾವಧಿ ಇಂಥ ಅಸಹ್ಯವನ್ನು ಈತನಕ ನೋಡಿದ್ದೇ ಇಲ್ಲ ಎಂದು ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral: ಇಂಥ ಟ್ವೀಟ್‌ಗೂ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿದ್ದಾರೆ

ಇದನ್ನೆಲ್ಲ ಬಹಳ ಭಾವನಾತ್ಮಕವಾಗಿ ನೋಡಬಾರದು ಎಂದು ಕೆಲ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ಮಾಡಿದ್ದಾರೆ. ಈಗ ನೋಡಿ ಮದುವೆ ಆಗುತ್ತಿದ್ದಂತೆ ಗೆಳೆಯರನ್ನು ಗೆಳತಿಯರನ್ನು ಮರೆಯುತ್ತಾರೆ ಎನ್ನುವ ಆಪಾದನೆಯಿಂದ ತಪ್ಪಿಸಿಕೊಳ್ಳಲು ವರ ಹೀಗೆ ಮಾಡುತ್ತಿದ್ದಾನಷ್ಟೇ. ಬಹುಶಃ ಈತ ಕ್ರಿಪ್ಟೋ ಟ್ರೇಡಿಂಗ್ ಮಾಡುತ್ತಿರಬಹುದು, ಅವನ ಲಕ್ಷ್ಯವೆಲ್ಲಾ ಹಣದೆಡೆಯೇ ಇದ್ದಂತಿದೆ.. ಅಂತೆಲ್ಲ ಹೇಳುತ್ತಿದ್ದಾರೆ.

ಇದನ್ನೂ ಓದಿ : Viral Video: ಬಸ್ಸಿನಲ್ಲಿ ಬಿಸಿಬಿಸಿ ಕಜ್ಜಾಯ ತಿಂದ ಪೋಲಿ; ಮಂಡ್ಯದ ಮಹಿಳೆಗೆ ಭಲೇ ಎಂದ ನೆಟ್ಟಿಗರು

ಇವನೇನು ಒತ್ತಾಯದಿಂದ ಮದುವೆಯಾಗುತ್ತಿದ್ದಾನೋ ಏನೋ. ಇವರು ಕಾರಿನೊಳಗೆ ಏರುವುದಕ್ಕಿಂತ ಮೊದಲೇ ಡಿವೋರ್ಸ್​ ಪಡೆದರೂ ಪಡೆದರೇ. ಆಕೆ ಅವನ ಮತ್ತು ಅವನ ಮೊಬೈಲ್​ನೊಂದಿಗೆ ಮದುವೆಯಾಗಿದ್ದಾಳೆ. ನೀನಿಂದು ಮದುವೆಯಾಗಿ ಅದರ ಫೋಟೋ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೀಯಾ, ಆದರೆ ನಮ್ಮಿಬ್ಬರ ಐದು ವರ್ಷದ ರಿಲೇಷನ್​ಶಿಪ್​? ಅದನ್ನು ಹಳೆಯ ಗರ್ಲ್​ ಫ್ರೆಂಡ್​ ಜಗಳ ಮಾಡುತ್ತಿರಬಹುದು. ಅವನು ಸಂತೈಸುತ್ತಿರಬಹುದು. ಹೀಗೆಲ್ಲ ನೆಟ್ಟಿಗರು ಈ ವಿಡಿಯೋ ಸ್ಕ್ರಿಪ್ಟ್​ ಬರೆಯಲಾರಂಭಿಸಿದ್ದಾರೆ.

ನೀವೇನಂತೀರಿ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ