Cat : ಸಾಕಿದವರು ತನ್ನನ್ನು ಬಿಟ್ಟು ಬೇರೆ ಯಾರನ್ನೂ ಮುದ್ದು ಮಾಡಬಾರದು ಎನ್ನುವಷ್ಟು ಪೊಸೆಸಿವ್ನೆಸ್ (possessiveness) ಈ ಬೆಕ್ಕು ಎಂಬ ಮೆತ್ತಗಿನ ಜೀವಕ್ಕೆ. ಅದಕ್ಕೇ ಸದಾ ಅಂಟಿಕೊಂಡೇ ಇರುತ್ತದೆ. ಗುಡರ್ ಗುಡರ್ ಎಂದು ಶಬ್ದ ಮಾಡುತ್ತ ಮೈಕೈಗೆ ತಿಕ್ಕುತ್ತ ಮುದ್ದುಕ್ಕಿಸುವಂತೆ ಮುಖ ಮಾಡಿ ಗಮನ ಸೆಳೆಯುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇದನ್ನು ಸಾಕಿದ ಮಹಿಳೆಯ ಒಡಲೊಳಗೊಂದು ಜೀವ ಮಿಸುಕಾಡುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಷ್ಟು ಸೂಕ್ಷ್ಮವಾಗಿ ಮುಟ್ಟಿ ನೋಡುತ್ತದೆಯಲ್ಲ?
Cat discovered her mommy is pregnant.. ? pic.twitter.com/28WKvjXiDI
ಇದನ್ನೂ ಓದಿ— Animals Being Bros (@AnimalBeingBro5) May 30, 2023
ಅಯ್ಯೋ ಆಕೆಯ ಹೊಟ್ಟೆಯಲ್ಲಿರೋದು ಬೆಕ್ಕಿನ ಮರಿ ಅಲ್ಲ ಎಂಬು ಬೇಸರ ಮಾಡಿಕೊಳ್ಳುತ್ತದೆ. ಡಾಕ್ಟರ್ ಬೆಕ್ಕು! ಮಗುವಿನ ಹಾರ್ಟ್ ಬೀಟ್ ಎಲ್ಲ ಸರಿ ಇದೆಯಾ? ಮಗು ಹೊರಗೆ ಬಂದಮೇಲೆ ನಿನ್ನ ಕತೆ ಅಷ್ಟೇ ಬೆಕ್ಕೇ. ಎಂಥ ಮುದ್ದಾದ ಬೆಕ್ಕಿದು ಎಷ್ಟು ಮೃದುವಾಗಿ ಅಮ್ಮನನ್ನು ಮಗುವನ್ನು ಕಾಯುತ್ತಿದೆ… ಹೀಗೆ ಅನೇಕರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: 22 ವರ್ಷಗಳ ನಂತರ ಒಡಹುಟ್ಟಿದವರ ಪುನರ್ಮಿಲನ
ಬೆಕ್ಕುಗಳು ಮಗುವಿನ ಹೃದಯಬಡಿತವನ್ನು ಕೇಳಬಲ್ಲವು. ಅಷ್ಟೇ ಏಕೆ ಎಲ್ಲವನ್ನೂ ಅವು ಸೂಕ್ಷ್ಮವಾಗಿ ಗ್ರಹಿಸಬಲ್ಲವು. ಹೊಸತಾಯಿಗೆ ಅಭಿನಂದನೆ, ಬೆಕ್ಕು ಮಗುವಿನ ಸುತ್ತ ಓಡಾಡುತ್ತ, ಆಟವಾಡುತ್ತಿರುವ ವಿಡಿಯೋಗಳಿಗಾಗಿ ಕಾಯುತ್ತೇವೆ… ಅಂತೆಲ್ಲ ಮತ್ತೂ ಒಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿ ನಿಮಗೇನು ಅನ್ನಿಸುತ್ತಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ