Video: ಶೇರಿಂಗ್ ಇಸ್ ಕೇರಿಂಗ್; ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ಮನಸ್ಸಿಗೆ ತುಂಬಾನೇ ಹತ್ತಿರವಾಗುತ್ತದೆ. ಈ ಪ್ರಾಣಿಗಳ ಸ್ವಾರ್ಥವಿಲ್ಲದ ಪರಿಶುದ್ಧ ಪ್ರೀತಿಯನ್ನು ಕಂಡಾಗ ಖುಷಿಯಾಗುತ್ತದೆ. ಇದೀಗ ಅಂತಹದ್ದೇ ವಿಡಿಯೋ ವೈರಲ್‌ ಆಗಿದ್ದು, ಪುಂಗನೂರು ಕರುವಿನ ಜತೆಗೆ ಮಾಲೀಕನು ಆಹಾರವನ್ನು ಹಂಚಿಕೊಳ್ಳುವ ದೃಶ್ಯವಿದಾಗಿದೆ. ಈ ಶುದ್ಧ ಪ್ರೀತಿಯನ್ನು ಸಾರುವ ಈ ವಿಡಿಯೋವು ನೆಟ್ಟಿಗರ ಹೃದಯ ಗೆದ್ದಿದೆ.

Video: ಶೇರಿಂಗ್ ಇಸ್ ಕೇರಿಂಗ್; ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ
ವೈರಲ್ ವಿಡಿಯೋ
Image Credit source: Twitter

Updated on: Oct 08, 2025 | 4:33 PM

ಮನುಷ್ಯರ ನಡುವೆ ಜಾತಿ, ವರ್ಣಗಳ ಭೇದಗಳಿರುವಂತೆ ಮೂಕ ಪ್ರಾಣಿಗಳಲ್ಲಿ ಇದ್ಯಾವುದೇ ಬೇಧ-ಬಾವಗಳಿಲ್ಲ. ಅಷ್ಟೇ ಅಲ್ಲದೆ ಈ ಪ್ರಾಣಿಗಳಿಗೆ (animals) ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿಲ್ಲ. ನೀವೇನಾದ್ರು ಈ ಪ್ರಾಣಿಗಳಿಗೆ ಶುದ್ಧ ಪ್ರೀತಿಯನ್ನು ನೀಡಿದ್ರೆ ಅದೇ ಪ್ರೀತಿಯನ್ನು ಅವು ನೀಡುತ್ತವೆ. ಹೀಗಾಗಿ ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ, ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಒಂದೇ ತಟ್ಟೆಯಲ್ಲಿ ಮಾಲೀಕನು ಪುಂಗನೂರು ಕರುವಿನ (Punganur calf) ಜತೆಗೆ ಊಟ ಮಾಡಿದ್ದು ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.

ಶುದ್ಧ ಮನಸ್ಸಿನ ಪರಿಶುದ್ಧ ಪ್ರೀತಿ ಹೇಗಿದೆ ನೋಡಿ

ಸನಾತನ ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಮಾಲೀಕನು ಕರುವಿನೊಂದಿಗೆ ಊಟ ಮಾಡುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಪುಂಗನೂರು ಹಸು, ಗೋಮಾತೆಯ ಜೊತೆ ಆಹಾರವನ್ನು ಹಂಚಿಕೊಳ್ಳುವುದು ನೀವು ಹಿಂದೂಗಳಲ್ಲಿ ಮಾತ್ರ ನೋಡಬಹುದು ಎಂದು ಬರೆದುಕೊಳ್ಳಲಾಗಿದೆ.ಈ ವಿಡಿಯೋದಲ್ಲಿ ಮಾಲೀಕ ಹಾಗೂ ಪುಂಗನೂರು ಕರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದು, ಸ್ವಾರ್ಥವಿರದ ನಿಸ್ವಾರ್ಥ ಪ್ರೀತಿಯನ್ನು ಈ ದೃಶ್ಯದಲ್ಲಿ ನೀವು ನೋಡಬಹುದು.

ಇದನ್ನೂ ಓದಿ
ಬೆಂಗಳೂರು ಏರ್‌ಪೋರ್ಟ್‌ನ ಪ್ರಯಾಣಿಕರ ಸೀಟಿನಲ್ಲೇ ನಿದ್ರೆಗೆ ಜಾರಿದ ಶ್ವಾನ
ಗೋವಿನ ಹಸಿವು ನೀಗಿಸಿದ ಸೈನಿಕ
28 ಗೋಲ್ಡನ್‌ ರಿಟ್ರೈವರ್ ಶ್ವಾನಗಳ ಜತೆ ಬೆಂಗಳೂರಿನ ಮಹಿಳೆಯ ವಾಕಿಂಗ್
ನೀರಿಗೆ ಬೀಳುತ್ತಿದ್ದ ಕಂದಮ್ಮನನ್ನು ರಕ್ಷಿಸಿದ ಶ್ವಾನ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಬಾ ಊಟ ತಿನ್ನು; ಹಸಿದು ಬಂದ ಗೋವಿನ ಹೊಟ್ಟೆ ತುಂಬಿಸಿದ ಯೋಧ

ಅಕ್ಟೋಬರ್ 7 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ದೃಶ್ಯ ನೋಡಲು ಸೊಗಸಾಗಿದೆ, ಶುದ್ಧಯ ಪ್ರೀತಿ ಹೀಗೆಯೇ ಇರುತ್ತದೆ ಎಂದಿದ್ದಾರೆ. ಇನ್ನೊಬ್ಬರು ಜೈ ಗೋಮಾತಾ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬ ಬಳಕೆದಾರ ಪ್ರಾಣಿಗಳಿಗೆ ಶುದ್ಧ ಪ್ರೀತಿ ನೀಡಿದರೆ ಅದು ಅಷ್ಟೇ ಪರಿಶುದ್ಧ ಪ್ರೀತಿಯನ್ನು ನಿಮಗೆ ನೀಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Wed, 8 October 25