Viral: ಬೆಂಗಳೂರಿಗೆ ಹೋಲಿಸಿದ್ರೆ ಗುರುಗಾಂವ್ ಜೀವನ ಹೇಳಿದಷ್ಟು ಸುಲಭ ಇಲ್ವೇ ಇಲ್ಲ ಎಂದ ಮಹಿಳೆ
ಈಗಿನ ದುಬಾರಿ ದುನಿಯಾದಲ್ಲಿ ಕೈಗೆ ಸಿಗುವ ಅಷ್ಟೋ ಇಷ್ಟೋ ಸಂಬಳದಲ್ಲಿ ತಿಂಗಳ ಖರ್ಚನ್ನು ನಿಭಾಯಿಸಿಕೊಂಡು ಹೋಗುವುದೇ ಕಷ್ಟಕರ. ಆದರೆ ಮಹಿಳೆಯೊಬ್ಬರು ಬೆಂಗಳೂರಿಗೆ ಹೋಲಿಸಿದ್ರೆ ಗುರುಗಾಂವ್‌ನಲ್ಲಿ ತಿಂಗಳ ಖರ್ಚು ದುಪ್ಪಟ್ಟು ಎಂದು ವಿವರಿಸಿದ್ದಾರೆ. ಈ ಎರಡು ನಗರದಲ್ಲಿ ತನ್ನ ತಿಂಗಳ ಖರ್ಚು ವೆಚ್ಚಗಳ ವ್ಯತ್ಯಾಸದ ಬಗ್ಗೆ ತಿಳಿಸಿದ್ದು, ಇದು ಭವಿಷ್ಯಕ್ಕೆ ಎಷ್ಟು ಹೊರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಈಗಿನ ಕಾಲದಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ದುದಿದ್ರೂ ಸಾಕಾಗಲ್ಲ, ಕಡಿಮೆ ಸಂಬಳವಿದ್ರಂತೂ ಖರ್ಚುಗಳೆಲ್ಲವನ್ನು ನೀಗಿಸಿ ಉಳಿತಾಯ ಮಾಡುವುದೇ ದೊಡ್ಡ ಹರಸಾಹಸ. ಹೀಗಿರುವಾಗ ಸಿಎ ಮೀನಾಯ್ ಗೋಯೆಲ್ (Minel Goel) ಅವರು ಬೆಂಗಳೂರಿನಿಂದ ಗುರುಗಾಂವ್‌ಗೆ ಸ್ಥಳಾಂತರಗೊಂಡಿದ್ದು, ಇದು ದೊಡ್ಡ ಮಟ್ಟಿಗೆ ಆರ್ಥಿಕ ಹೊಡೆತ ತಂದೊಡ್ಡಿದೆಯಂತೆ. ಬೆಂಗಳೂರಿಗೆ ಹೋಲಿಸಿದ್ರೆ ಗುರುಗಾಂವ್‌ನಲ್ಲಿ (Bengaluru VS Gurgaon) ಮಾಸಿಕ ಖರ್ಚು ವೆಚ್ಚ 10000 ರೂ ಹೆಚ್ಚಾಗಿದೆ. ಅದೇ ಕೆಲಸ, ಅದೇ ವೇತನ, ಆದ್ರೆ ಖರ್ಚು ಮಾತ್ರ ಹೆಚ್ಚು. ಇಲ್ಲಿನ ಜೀವನ ನಿಜಕ್ಕೂ ಕಷ್ಟಕರ ಎಂದು ವಾಸ್ತವತೆಯನ್ನು ಒಪ್ಪಿಕೊಂಡಿದ್ದಾರೆ.
ಗುರುಗಾಂವ್ ಇಷ್ಟೊಂದು ದುಬಾರಿ ಯಾಕೆ?
ಸಿಎ ಮೀನಾಯ್ ಗೋಯೆಲ್ ಗುರುಗಾಂವ್‌ಗೆ ಸ್ಥಳಾಂತರಗೊಂಡಾಗ ಅಲ್ಲಿನ ಖರ್ಚು ವೆಚ್ಚಗಳು ಹೇಗೆ ಬದಲಾದವು ಎಂದು ಲಿಂಕ್ಡ್ ಇನ್‌ನಲ್ಲಿ ವಿವರಿಸಿದ್ದಾರೆ. ಗುರುಗಾಂವ್‌ನಲ್ಲಿ ತಿಂಗಳ ಬಾಡಿಗೆ ಟ್ರಕ್‌ನಂತೆ ಬಡಿಯಿತು. ಕಚೇರಿಯ ಹತ್ತಿರದಲ್ಲೇ ಇರುವ ಮನೆಗೆ 25,000 ನೀಡಬೇಕಾಯಿತು. ಹೊರಗಿನ ಊಟ ಸೇರಿ 6,000 ರೂ, ದಿನಸಿ ಮತ್ತು ವಾರಾಂತ್ಯದ ಯೋಜನೆಗಳಿಗೆ 8,000 ರೂ, ಒಟ್ಟಾರೆ ಮಾಸಿಕ ಖರ್ಚು 45,000 ರೂ ಎಂದು ವಿವರಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಬೆಂಗಳೂರಿನ ಅಪಾರ್ಟ್‌ಮೆಂಟ್ ರೆಂಟ್ 18,000 ರೂ, ದಿನಸಿ ಮತ್ತು ಊಟ ಸ್ವಲ್ಪ ಅಗ್ಗವಾಗಿತ್ತು. ಆಟೋಗಳು ಮತ್ತು ಕ್ಯಾಬ್‌ಗಳು ಅಷ್ಟೇನು ದುಬಾರಿ ಎಂದು ಅನಿಸರಲಿಲ್ಲ. ಹೀಗಾಗಿ ಇಲ್ಲಿ ತಿಂಗಳಿಗೆ 35,000 ರೂ ಖರ್ಚು ಆಗುತ್ತಿತ್ತು ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಹೆಚ್ಚುವರಿ ಖರ್ಚಾಗುವ 10,000 ರೂ ಜೀವನವನ್ನು ಬದಲಾಯಿಸುವಂತಲ್ಲ ಎಂದು ಅನಿಸಬಹುದು. ಆದರೆ ಅದೇ ಹಣವನ್ನು ಒಂದು ವರ್ಷಕ್ಕೆ ಲೆಕ್ಕ ಹಾಕಿ ನೋಡಿದರೆ, ಒಂದು ಲಕ್ಷಕ್ಕೂ ಹೆಚ್ಚು ಹಣವು ಹೋದದ್ದು ತಿಳಿಯುವುದೇ ಇಲ್ಲ. ಉಳಿತಾಯ, ಹೂಡಿಕೆ ಸೇರಿದಂತೆ ಇನ್ನಿತ್ತರ ಕೆಲಸಗಳಿಗೆ ಖರ್ಚು ಆಗುವ ಹಣವು ಸುಖಾಸುಮ್ಮನೆ ಖರ್ಚು ಆಗುತ್ತದೆ. 5 ರಿಂದ 9 ವರ್ಷಗಳಲ್ಲಿ ಇದು ದೊಡ್ಡ ಮಟ್ಟದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಕೆಲವು ನಗರಗಳು ನಿಮ್ಮನ್ನು ನಿಮ್ಮ ಸಂಬಳದ ಅಂಚಿಗೆ ತಳ್ಳುತ್ತವೆ, ಆದರೆ ದೊಡ್ಡ ಕನಸು ಕಾಣಲು ಸಾಕಷ್ಟು ಅವಕಾಶವನ್ನು ನೀಡುತ್ತವೆ ಎಂದು ಇಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:Video: ಸಂಬಳಕ್ಕಿಂತ ಆರೋಗ್ಯವೇ ಮುಖ್ಯ; ತಿಂಗಳಿಗೆ 60 ಸಾವಿರ ರೂ ಸಂಬಳದ ಉದ್ಯೋಗ ತೊರೆದ ಯುವತಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಖರ್ಚು ವೆಚ್ಚಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಿರುತ್ತದೆ, ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದಿದ್ದಾರೆ. ಇನ್ನೊಬ್ಬರು ಗುರುಗಾಂವ್ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತದೆ ಎಂದು ಹೇಳಿದ್ದಾರೆ. ನಗರ ಜೀವನದಲ್ಲಿ ನೀವು ಹಣವನ್ನು ಹೇಗೆ ವಿನಿಯೋಗಿಸುತ್ತೀರಿ ಎನ್ನುವುದರ ಮೇಲೆ ಎಲ್ಲವೂ ಬದಲಾಗುತ್ತದೆ. ಈ ಬಗ್ಗೆ ನೀವು ತಿಳಿದುಕೊಂಡು ನಿಮ್ಮ ಜೀವನವನ್ನು ಸರಿದಾರಿಯಲ್ಲಿ ಕೊಂಡೋಗಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








