AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತಾ ಹೇಳಿದ ಮಾತು ನಿಜವಾಯ್ತು; ಎಲ್ಲಾ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಿಂದ ಹೊರಗೆ

ಬಿಗ್‌ಬಾಸ್‌ ಸೀಸನ್ ಸೀಸನ್‌ 12 ಶುರುವಾದ 2ನೇ ವಾರದಲ್ಲಿ ಬಂದ್ ಆಗಿದೆ. ಬಿಗ್‌ಬಾಸ್‌ ನಡೆಯತ್ತಿರೋ ಜಾಲಿವುಡ್‌ ಸ್ಟುಡಿಯೋವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬಂದ್ ಮಾಡಿದೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರಗೆ ಬಂದಿದ್ದಾರೆ. ಆದರೆ ಬಿಗ್‌ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಹೇಳಿದ ಮಾತು ನಿಜವಾಯ್ತಾ, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ಷಿತಾ ಹೇಳಿದ ಮಾತು ನಿಜವಾಯ್ತು; ಎಲ್ಲಾ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯಿಂದ ಹೊರಗೆ
ಬಿಗ ಬಾಸ್‌ ಸೀಸನ್‌ 12Image Credit source: Social Media
ಸಾಯಿನಂದಾ
|

Updated on:Oct 08, 2025 | 9:06 AM

Share

ಬಿಗ್‌ಬಾಸ್‌ ಕನ್ನಡ ಸೀಸನ್‌ 12 (Bigg Boss Season 12) ಶುರುವಾದ 2ನೇ ವಾರಕ್ಕೆ ಸಂಕಷ್ಟ ಎದುರಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಜಾಲಿವುಡ್ ಸ್ಟುಡಿಯೋಸ್​​ಗೆ ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಬೀಗ ಹಾಕಿದ್ದಾರೆ. ಎಲ್ಲಾ ಸ್ಪರ್ಧಿಗಳು ಮನೆಯಿಂದ ಹೊರಗೆ ಬಂದಿದ್ದಾರೆ. ಈ ನಡುವೆ ವಾರಾಂತ್ಯದಲ್ಲಿ ಮನೆಯೊಳಗೆ ಕಮ್​ಬ್ಯಾಕ್ ಮಾಡಿದ್ದ ಸ್ಪರ್ಧಿ ರಕ್ಷಿತಾ ಶೆಟ್ಟಿ (Rakshitha Shetty) ಆಡಿದ ಮಾತು ನಿಜವಾಯ್ತಾ?. ಇದೀಗ  ಸ್ಪರ್ಧಿ ರಕ್ಷಿತಾ ಶೆಟ್ಟಿ ಆಡಿದ ಮಾತು ಸಖತ್ ಟ್ರೆಂಡ್ ಆಗುತ್ತಿದೆ.

ಮನೆಯಿಂದ ಹೊರಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು

ಬಿಗ್​ ಬಾಸ್​ ಸೀಸನ್​- 12 ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್​ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಹೀಗಾಗಿ ಸ್ಪರ್ಧಿಗಳಾದ ಕಾವ್ಯ ಶೈವ, ಗಿಲ್ಲಿ ನಟ, ಡಾಗ್​ ಸತೀಶ್,​ ಚಂದ್ರಪ್ರಭ, ಅಭಿಷೇಕ್​​, ಮುದ್ದು ಲಕ್ಷ್ಮೀ ಖ್ಯಾತಿಯ ಅಶ್ವಿನಿ, ಮಂಜು ಭಾಷಿಣಿ, ರಾಶಿಕಾ, ಕಾಕ್ರೋಚ್​ ಸುಧಿ, ಮಲ್ಲಮ್ಮ, ನಿರೂಪಕಿ ಜಾಹ್ನವಿ, ಧನುಷ್​ ಗೌಡ, ಮುದ್ದು ಲಕ್ಷ್ಮೀ ಖ್ಯಾತಿಯ ನಟ ಧ್ರುವಂತ್​, ನಟಿ ಅಶ್ವಿನಿ ಗೌಡ ಸೇರಿ ಎಲ್ಲರೂ ಒಬ್ಬೊಬ್ಬರಾಗಿ ಮನೆಯಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್? ‌

ಇದನ್ನೂ ಓದಿ
Image
ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ಗಾಯಕಿ ಮೈಥಿಲಿ
Image
ಗೋವಿನ ಹಸಿವು ನೀಗಿಸಿದ ಸೈನಿಕ
Image
ಹೆಂಡ್ತಿ ಬಾಯ್ ಫ್ರೆಂಡ್ ಜೊತೆಯಲ್ಲಿರುವಾಗಲೇ ಪ್ರತ್ಯಕ್ಷನಾದ ಗಂಡ
Image
ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕನ್ ರಾಜ

ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಆಡಿದ ಮಾತು ನಿಜವಾಯ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 12 ರ ಕೊನೆಯ ಸ್ಪರ್ಧಿಯಾಗಿ ರಕ್ಷಿತಾ ಶೆಟ್ಟಿ ಮನೆಯೊಳಗೆ ಕಾಲಿಟ್ಟಿದ್ದರು. ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆಗಿದ್ದು ಮತ್ತೆ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಗೆ ಕಮ್ ಬ್ಯಾಕ್ ಮಾಡಿದ್ದರು.  ರೀ ಎಂಟ್ರಿ ಕೊಟ್ಟ ಕೆಲವೇ ಕೆಲವು ನಿಮಿಷದಲ್ಲೇ ರಕ್ಷಿತಾ ಶೆಟ್ಟಿ, ನನಗೆ ಬಿಗ್‌ ಬಾಸ್‌ ಮನೆಯಲ್ಲಿ ಇರೋಕೆ ಯೋಗ್ಯತೆ ಇದೆ. ಆದರೆ ನನ್ನನ್ನು ಹೊರಗೆ ಹಾಕಿದ್ದಾರೆ. ನೀವೆಲ್ಲ ಕೊಟ್ಟ ಕಾರಣ ಸೂಕ್ತವಾಗಿರಲಿಲ್ಲ. ಇಲ್ಲಿ ಯಾರು ಸೆಲೆಬ್ರಿಟಿ-ನಾನ್‌ ಸೆಲೆಬ್ರಿಟಿಗಳಲ್ಲ. ಚಿಕ್ಕವರು- ದೊಡ್ಡವರಿಲ್ಲ. ದೊಡ್ಡದಾಗಿ ಮಾತನಾಡೋಕೆ ಎಲ್ಲರಿಗೂ ಬರುತ್ತದೆ. ನ್ಯಾಯದ ಹಾಗೆ ಮೊದಲು ಯೋಚನೆ ಮಾಡಬೇಕೆಂದು ಎಂದು ಖಡಕ್ ಆಗಿ ಮಾತನಾಡಿದ್ದರು. ಅಷ್ಟೇ ಅಲ್ಲದೇ, ಸುದೀಪ್ ಅವರು, ನಿಮಗೆ ಓಟು ಹಾಕಿ ಹೊರಗೆ ಹಾಕಿದ ಯಾರಾದರೂ ಒಬ್ಬರನ್ನು ಈಗ ನೀವು ಹೊರಗೆ ಹಾಕಬೇಕು ಎಂದರೆ ನೀವು ಯಾರನ್ನ ಹೊರಗೆ ಹಾಕ್ತೀರಿ ಎಂದು ಕೇಳಿದ್ದರು. ಇದಕ್ಕೆ ಉತ್ತರ ಕೊಟ್ಟಿದ್ದ ರಕ್ಷಿತಾ ಶೆಟ್ಟಿ, ಯಾರಾದರೂ ಒಬ್ಬರು ಅಲ್ಲ, ಎಲ್ಲರನ್ನೂ ಹೊರಗೆ ಹಾಕ್ತೇನೆ ಎಂದು ಎಲ್ಲರಿಗೂ ಶಾಕ್ ಆಗುವಂತಹ ಉತ್ತರ ಕೊಟ್ಟಿದ್ದರು.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Published On - 8:46 am, Wed, 8 October 25