ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ, ವಿಡಿಯೋ ವೈರಲ್

ಕೆಲವರು ಮದುವೆ ಮಂಟಪಕ್ಕೆ ವಿಭಿನ್ನವಾಗಿ ಎಂಟ್ರಿ ಕೊಡುತ್ತಾರೆ. ಹೌದು , ರೆಡ್ ಕಾರ್ಪೆಟ್, ಬೈಕ್, ತಾವರೆ ಹೂವಿನ ಮಧ್ಯೆ, ಕುದುರೆ ಏರಿ ಎಂಟ್ರಿ ಕೊಡುವುದನ್ನು ನೋಡಿರಬಹುದು. ಹೌದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿಯೂ ಕುದುರೆ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಕೊನೆ ಕ್ಷಣದಲ್ಲಿ ವರನು ಕಂಗಾಲಾಗಿದ್ದು, ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ? ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ, ವಿಡಿಯೋ ವೈರಲ್
ವೈರಲ್ ವಿಡಿಯೋ
Image Credit source: Instagram

Updated on: May 05, 2025 | 3:12 PM

ಎಲ್ಲರೂ ಕೂಡ ತಮ್ಮ ಮದುವೆ (marriage) ಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ಅದರಂತೆಯೇ ಮದುವೆಯಾಗಲು ಇಷ್ಟ ಪಡುತ್ತಾರೆ. ಅದಲ್ಲದೇ ಕೆಲ ಮದುವೆಗಳು ವಿಶೇಷತೆಗಳಿಂದಲೇ ಸದ್ದು ಮಾಡುತ್ತದೆ. ಕೆಲ ಜೋಡಿಗಳು ವಿಭಿನ್ನವಾಗಿ ಮದುವೆ ಮಂಟಪ (wedding hall) ಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವುದನ್ನು ನೋಡಬಹುದು. ಎಂಟ್ರಿಯ ವೇಳೆ ಮಾಡಿಕೊಳ್ಳುವ ಎಡವಟ್ಟಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವರನು ಮದುವೆ ಮಂಟಪಕ್ಕೆ ಕುದುರೆ (horse) ಮೇಲೇರಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದು, ಆದರೆ ಕೊನೆ ಕ್ಷಣದಲ್ಲಿ ಜೋರಾಗಿ ಮಳೆ ಬಂದಿದೆ. ಏನು ಮಾಡಬೇಕೆಂದು ತೋಚದೆ ವರನು ಕಂಗಲಾಗಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

morethancollabs and souravgujar ಹೆಸರಿನಖಾತೆಯಲ್ಲಿ ಮದುವೆ ಮಂಟಪಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡುವ ವರನ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ, ಕಡಾಯಿಯಲ್ಲಿ ಊಟ ಮಾಡಿದ್ರೆ ಹೀಗೆ ಆಗುತ್ತೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ವರನು ಮದುವೆ ಮಂಟಪಕ್ಕೆ ಕುದುರೆಯ ಮೇಲೆ ಕೂತು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾನೆ. ಮದುವೆ ಮಂಟಪದ ಸಮೀಪ ಬಂದಿದ್ದು ಇನ್ನೇನು ಕೆಳಗೆ ಇಳಿಯಬೇಕು ಎನ್ನುವಷ್ಟರಲ್ಲಿ ವರುಣನ ಆಗಮನವಾಗಿದೆ.

ಇದನ್ನೂ ಓದಿ
ಹೇರ್ ಕಟ್ ಮಾಡಿಸಲು ಹೋದ ವಿದೇಶಿಗನ ಜೇಬಿಗೆ ಬಿತ್ತು ಕತ್ತರಿ
ವರನ ಡಾನ್ಸ್ ನೋಡುತ್ತಿದ್ದಂತೆ ನಾಚಿ ನೀರಾದ್ಲು ವಧು
ಈ ಅಮ್ಮ ನನಗೆ ನಿದ್ದೆ ಮಾಡೋಕು ಬಿಡಲ್ಲ, ಯಾಕೆ ಇಷ್ಟು ಬೇಗ ಎಬ್ಬಿಸ್ತಾಳೋ
ವಿಮಾನ ನಿಲ್ದಾಣದಲ್ಲಿ ಕೊಳಲುವಾದಕನ ಹಾಡಿಗೆ ತಲೆದೂಗಿದ ಭದ್ರತಾ ಸಿಬ್ಬಂದಿಗಳು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಅರೇ ಕ್ಷಣ ಏನು ಮಾಡಬೇಕೆಂದು ತೋಚದೆ ವರನು ಕಂಗಲಾಗಿದ್ದು ಸಂಬಂಧಿಕರು ಕುಟುಂಬಸ್ಥರು ಮದುವೆ ಮಂಟಪದ ಕಡೆಗೆ ಹೋಗಿದ್ದಾರೆ. ಅದಲ್ಲದೇ ಕೆಲವರು ವರನಿಗೆ ಕೊಡೆ ತಂದು ಕೊಟ್ಟಿದ್ದು, ವರನು ಕೊಡೆ ಹಿಡಿದುಕೊಂಡು ಕುದುರೆ ಮೇಲೆ ಕುಳಿತುಕೊಂಡಿದ್ದಾನೆ. ಆತನ ಸುತ್ತಮುತ್ತಲು ಸಂಬಂಧಿಕರು ನಿಂತಿದ್ದಾರೆ. ನೀವಿಲ್ಲಿ ನೋಡಬಹುದು.

ಇದನ್ನೂ ಓದಿ : ರಿಪೋರ್ಟಿಂಗ್ ವೇಳೆ ಕಾಟ ಕೊಟ್ಟ ಶ್ವಾನ, ವಿಡಿಯೋ ವೈರಲ್

ಈ ವಿಡಿಯೋವೊಂದು ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದ್ದು ನೆಟ್ಟಿಗರಿಂದ ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಹರಿದು ಬಂದಿದೆ. ಬಳಕೆದಾರರೊಬ್ಬರು, ‘ಮದುವೆಯ ವೇಳೆ ಮಳೆ ಬಂದರೆ ಒಳ್ಳೆಯದು’ ಎಂದಿದ್ದಾರೆ. ಇನ್ನೊಬ್ಬರು, ‘ಈ ವರನು ಕಡಾಯಿಯಲ್ಲಿ ಕುಕ್ಕರ್ ನಲ್ಲಿ ಊಟ ಮಾಡಿರಬೇಕು’ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ‘ಎಬ್ಬಾ ನಾನು ಕೂಡ ಕಡಾಯಿಯಲ್ಲಿ ಊಟ ಮಾಡಿದ್ದೇನೆ. ನನಗೆ ನೆನೆಸಿಕೊಂಡರೇನೇ ಭಯ ಆಗುತ್ತಿದೆ’ ಎಂದಿದ್ದಾರೆ. ಕೆಲವರು ಈತನ ಪರಿಸ್ಥಿತಿಯನ್ನು ಕಂಡು ನಗುವ ಎಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ