Viral Video: ಒಫಿಡಿಯೋಫೋಬಿಯಾ ಇದ್ದವರು ದಯವಿಟ್ಟು ಈ ವಿಡಿಯೋ ನೋಡಬೇಡಿ

Snake : 20 ಸಲವಾದರೂ ಈ ವಿಡಿಯೋ ನೋಡಿದೆ, ಮತ್ತೂ ನೋಡಬೇಕೆನ್ನಿಸುತ್ತಿದೆ ಅಷ್ಟು ಮುದ್ದಾಗಿದ್ದಾಳೆ ಕೂದಲಿನೊಳಗೆ ಆಟವಾಡುತ್ತಿರುವಾಕೆ ಎನ್ನುತ್ತಿದ್ದಾರೆ ಕೆಲವರು. ಈತನಕ 4.3 ಲಕ್ಷಕ್ಕೂ ಹೆಚ್ಚು ಜನ ಇದನ್ನು ನೋಡಿದ್ದಾರೆ.

Viral Video: ಒಫಿಡಿಯೋಫೋಬಿಯಾ ಇದ್ದವರು ದಯವಿಟ್ಟು ಈ ವಿಡಿಯೋ ನೋಡಬೇಡಿ
ಗುಂಗುರು ಕೂದಲಿನಲ್ಲಿ ಸಿಕ್ಕಿಹಾಕಿಕೊಂಡು ಆಟವಾಡುತ್ತಿರುವ ಮರಿಹಾವು
Updated By: ಶ್ರೀದೇವಿ ಕಳಸದ

Updated on: Jun 12, 2023 | 11:18 AM

Snake : ಸಾಕಿದ ಬೆಕ್ಕು ನಾಯಿ ಮೊಲ ಇಲಿ ಪಕ್ಷಿಗಳು ಹೀಗೆ ಮೈಮೇಲೆ ಆಟವಾಡುವುದನ್ನು ನೋಡಿದ್ದೇವೆ. ಇಲ್ಲೊಬ್ಬ ಪ್ರಾಣಪ್ರೇಮಿ ಹಾವನ್ನು ಸಾಕಿದ್ದಾನೆ. ಅದು ಅವನ ತಲೆಯನ್ನೇ ಆಟದ ಮೈದಾನ ಮಾಡಿಕೊಂಡು ಮತ್ತಲ್ಲಿರುವ ಗುಂಗುರು ಕೂದಲುಗಳನ್ನೇ ಆಟಿಕೆವಸ್ತುವನ್ನಾಗಿಸಿಕೊಂಡಿದೆ. ಇತ್ತಕಡೆಯಿಂದ ಅವನು ಬಿಡಿಸಿದರೆ ಅತ್ತಕಡೆಯಿಂದ ಅದು ಸಿಕ್ಕಿಹಾಕಿಕೊಳ್ಳುತ್ತ ಅವನನ್ನು ಆಟವಾಡಿಸುತ್ತಿದೆ. ನೋಡಿ ಈ ವಿಡಿಯೋ.

ನೋಡಿದ ತಕ್ಷಣ ನಗುವೇನೋ ಉಕ್ಕುತ್ತದೆ. ಆದರೆ ತಲೆಯಲ್ಲಿರುವುದು ಪ್ಲಾಸ್ಟಿಕ್ ಹಾವಲ್ಲವಲ್ಲ? ಮತ್ತೆ ಎಲ್ಲರಿಗೂ ಹಾವನ್ನು ಮುಟ್ಟುವ ಅದರ ಚಟುವಟಿಕೆಯನ್ನು ನೋಡುವ ಧೈರ್ಯ ಇರುತ್ತದೆ ಎಂದು ಹೇಳಲಾಗದು. ಹಾಗಾಗಿ ಹಾವಿನ ಭಯ ನೋಡದಿರುವುದು ಒಳ್ಳೆಯದು. ಡೆವಿನ್​ ಎನ್ನುವವರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ಧಾರೆ. ಈ ತನಕ ಸುಮಾರು 48,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. 4.3 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ.

ಇದನ್ನೂ ಓದಿ : Viral: ಬಾಸ್​, ನಾನು ಗರ್ಭಿಣಿ; ಈ ವಾಟ್ಸಪ್​ ಚಾಟ್​ ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದ್ದೇಕೆ?  

ಆಹಾ ಎಷ್ಟು ಮುದ್ದಾಗಿದ್ದಾಳೆ ಈಕೆ, ಆಕೆ ಬಳಕುವುದು, ಮುಖವೆತ್ತಿ ನೋಡುವುದು ಎಷ್ಟು ಸುಂದರ ಎಂದು ಹಾವುಪ್ರಿಯರು ಕೊಂಡಾಡಿದ್ದಾರೆ. ನಾನಂತೂ ಇದನ್ನು ನೋಡಿ ಕಿರುಚುತ್ತಿದ್ಧೇನೆ ಎಂದು ಒಬ್ಬರು ಹೇಳಿದ್ದಾರೆ. ಇದನ್ನು ತಲೆಯಲ್ಲಿಟ್ಟುಕೊಂಡು ನೂಡಲ್ಸ್ ಮಾಡಲು ಹೋಗಬೇಡಿ ಮತ್ತೆ ತಿನ್ನಬೇಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Viral Video: ಝನ್ನತ್ ಮಿರ್ಚಿ ಐಸ್ಕ್ರೀಮ್​; ‘ನನ್ನ ಶತ್ರುಗಳಿಗೂ ತಿನ್ನಿಸಲಾರೆ!’ ನೆಟ್ಟಿಗರ ಶಪಥ

20 ಸಲ ಈ ವಿಡಿಯೋ ನೋಡಿದೆ, ಆದರೂ ಸಾಕಾಗುತ್ತಿಲ್ಲ ಎಂದು ಮತ್ತೊಬ್ಬ ಹಾವುಪ್ರೇಮಿ ಹೇಳಿದ್ದಾರೆ. ನಿಮ್ಮ ಕೂದಲ ಸಂಗ ಅದಕ್ಕೆ ಬಹಳ ಇಷ್ಟವಾಗಿದೆ. ಇಂಥ ಸುಂದರ ಕೂದಲನ್ನು ಬಿಟ್ಟು ಆಕೆಗೆ ಹೊರಬರಲು ಮನಸ್ಸಿಲ್ಲ ಎಂದು ಇನ್ನೂ ಒಬ್ಬರು ಹೇಳಿದ್ದಾರೆ.

ಭಯ ಆಯಿತಾ, ಅಚ್ಚರಿಯಾಯಿತಾ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:10 am, Mon, 12 June 23