ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ…

| Updated By: ಶ್ರೀದೇವಿ ಕಳಸದ

Updated on: Dec 07, 2022 | 1:42 PM

Guinness World Record : 8 ವರ್ಷದ ಬಾಲಕನಾಗಿದ್ದಾಗ ಇವರ ಎತ್ತರ 5.11 ಅಡಿ. 1940ರ ಜೂನ್​ನಲ್ಲಿ 8 ಅಡಿ 11.1 ಇಂಚು. ಗಿನ್ನೀಸ್ ವರ್ಲ್ಡ್​ ರೆಕಾರ್ಡ್​ನಲ್ಲಿ ಇವರ ಹೆಸರು ಸೇರ್ಪಡೆಯಾಯಿತು. ನಂತರ 22ನೇ ವಯಸ್ಸಿನಲ್ಲಿ ತೀರಿಕೊಂಡರು.

ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ...
ಜಗತ್ತಿನ ಅತೀ ಎತ್ತರದ ಮನುಷ್ಯ ರಾಬರ್ಟ್​ ವಾಡ್ಲೋ ತನ್ನ ಕುಟುಂಬದೊಂದಿಗೆ
Follow us on

Viral : ಜಗತ್ತಿನ ಅತೀ ಎತ್ತರದ ಮಹಿಳೆ ವಿಮಾನದಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದ ಸುದ್ದಿಯನ್ನು ಓದಿದ್ದೀರಿ. ಹಾಗೆಯೇ ಜಗತ್ತಿನ ಅತೀ ಹಿರಿಯ ವೈದ್ಯರು ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಪಟ್ಟಿಯನ್ನು ಸೇರಿರುವುದನ್ನೂ ಓದಿದ್ದೀರಿ. ಇತ್ತೀಚೆಗಷ್ಟೇ ಜಗತ್ತಿನ ಹಿರಿಯ ನಾಯಿಯ ಬಗ್ಗೆ ಕೂಡ ಓದಿದ್ದೀರಿ. ಇದೀಗ ಜಗತ್ತಿನ ಅತೀ ಎತ್ತರದ ವ್ಯಕ್ತಿಯೊಬ್ಬರ ಫೋಟೋಗಳನ್ನು ನೋಡುತ್ತ ಅವರ ಬಗ್ಗೆ ಓದಬಹುದಾಗಿದೆ. ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಈ ವ್ಯಕ್ತಿಯ ಫೋಟೋಗಳನ್ನು ರೀಟ್ವೀಟ್ ಮಾಡಿದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಮೆರಿಕದ ರಾಬರ್ಟ್​ ವಾಡ್ಲೋ (Robert Wadlow) ಎಂಬುವವರು ಜಗತ್ತಿನ ಅತೀ ಎತ್ತರದ ಮನುಷ್ಯ. 1955ರಲ್ಲಿ ಇವರು ಗಿನ್ನೀಸ್​ವ ವರ್ಲ್ಡ್​ ರೆಕಾರ್ಡ್​ನ ಪಟ್ಟಿಗೆ ಸೇರಿದ್ಧಾರೆ. ಎಂಟು ವರ್ಷದ ಬಾಲಕನಾಗಿದ್ದಾಗ ಇವರ ಎತ್ತರ 5.11 ಅಡಿ ಆಗಿತ್ತು. ಅಂದರೆ ಇವರು ಆ ವಯಸ್ಸಿನಲ್ಲಿಯೇ ತಂದೆಯ ಎತ್ತರವನ್ನು ಮೀರಿ ಬೆಳೆದಿದ್ದರು. 1940ರ ಜೂನ್​ನಲ್ಲಿ ಇವರ ಎತ್ತರವನ್ನು ಅಳತೆ ಮಾಡಿದಾಗ 8 ಅಡಿ 11.1 ಇಂಚು (2.72 ಮೀ) ಇತ್ತು. ಒಟ್ಟಾರೆಯಾಗಿ ಇವರು ನಿತ್ಯಜೀವನ ಸಾಗಿಸಲು ಕಷ್ಟಪಡಬೇಕಾಗಿತ್ತು. ಹದಿಹರೆಯಕ್ಕೆ ಬಂದಾಗ ಇವರು 1.63 ಮೀ (5 ಅಡಿ 4 ಇಂಚು) ಉದ್ದ ಇರುವವರಿಗೆ ಹೊಲಿಯಲಾದ ಬಟ್ಟೆಗಳನ್ನು ಧರಿಸಬೇಕಾಗುತ್ತಿತ್ತು.

ಇದನ್ನೂ ಓದಿ : ವಿಶ್ವದ ಅತ್ಯಂತ ಹಿರಿಯ ವೈದ್ಯ ಹೊವಾರ್ಡ್​ ಟಕರ್ 100ನೇ ವಯಸ್ಸಿನಲ್ಲಿಯೂ ವೃತ್ತಿನಿರತ

ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ವೆಬ್​ಸೈಟ್​ ಪ್ರಕಾರ, ವಾಡ್ಲೋ ಪಿಟ್ಯುಟರಿ ಗ್ರಂಥಿಯ ಹೈಪರ್​ ಪ್ಲಾಸ್ಟಿಯಾ ಸಮಸ್ಯೆಗೆ ಈಡಾಗಿದ್ದರು. ಆದ್ದರಿಂದಲೇ ಹಾರ್ಮೋನ್​ನಲ್ಲಿ ವ್ಯತ್ಯಾಸವಾಗಿ ಇವರ ದೈಹಿಕ ಬೆಳವಣಿಗೆಯಲ್ಲಿ ಈ ಅಸಹಜತೆ ತೋರಿತು. ನಂತರ ಇವರು ಅನೇಕ ವೈದ್ಯಕೀಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅಲ್ಲದೆ ವಯಸ್ಸಿಗೆ ತಕ್ಕಂತೆ ತನ್ನ ಗೆಳೆಯರೊಂದಿಗೆ ಆಟವಾಡಲು ಇನ್ನಿತರೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಹಳ ಕಷ್ಟಪಡಬೇಕಾಯಿತು. ನಂತರ ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿ 1940ರ ಜುಲೈ 15ರಂದು ಮಿಚಿಗನ್​ ಮೆನಿಸ್ಟಿಯಲ್ಲಿರುವ ಹೋಟೆಲ್​ನಲ್ಲಿ ನಿಧನರಾದರು. ಆಗ ಇವರಿಗೆ ಕೇವಲ 22ರ ಹರೆಯ.

ಈ ಫೋಟೋ ನೋಡಿದ ನೆಟ್ಟಿಗರು ಅಚ್ಚರಿಯಿಂದ ಚರ್ಚಿಸಲಾರಂಭಿಸಿದ್ದಾರೆ.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ