ಪಾರ್ಕಿನ್ಸನ್ಸ್​ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Jan 06, 2023 | 10:24 AM

Viral Video : ಸಹಾಯ ಎಷ್ಟೇ ಚಿಕ್ಕದಾಗಿದ್ದರೂ ಆ ಕ್ಷಣಕ್ಕೆ ಅದು ದೊಡ್ಡದೇ. ಲಂಡನ್​ನ ರೈಲಿನಲ್ಲಿ ಈ ವೃದ್ಧರು ಪ್ರಯಾಣಿಸುತ್ತಿದ್ಧಾಗ ಈ ಅಪರಿಚಿತ ಮಹಿಳೆ ಅವರಿಗೆ ಸಹಾಯ ಮಾಡಿದ್ದು ಹೀಗೆ.

ಪಾರ್ಕಿನ್ಸನ್ಸ್​ಗೆ ಒಳಗಾದ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ ಅಪರಿಚಿತ ಮಹಿಳೆಯ ವಿಡಿಯೋ ವೈರಲ್
ಪಾರ್ಕಿನ್ಸನ್ಸ್​ನಿಂದ ಬಳಲುತ್ತಿರುವ ವೃದ್ಧರಿಗೆ ಪತ್ರಿಕೆ ಓದಲು ಸಹಾಯ ಮಾಡಿದ ಮಹಿಳೆ
Follow us on

Viral Vide0: ಬಸ್ಸು, ರೈಲಿನಲ್ಲಿ ಪ್ರಯಾಣಿಸುವಾಗ ನಮಗೆ ಸೀಟ್​ ಸಿಕ್ಕರೆ ಸಾಕು ಎಂದು ಸಿಕ್ಕಲ್ಲಿ ಕುಳಿತುಕೊಳ್ಳುವವರೇ ಅಲ್ಲ. ಆದರೆ ಕೆಲವರು ಮಾತ್ರ ಅಕ್ಕಪಕ್ಕದವರನ್ನು ದಯೆ, ಕರುಣೆಯಿಂದ ಗಮನಿಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಪರಿಚಿತ ಮಹಿಳೆಯೊಬ್ಬರು ಪಾರ್ಕಿನ್​ಸನ್​ನಿಂದ ಬಳಲುತ್ತಿರುವ ವಯೋವೃದ್ಧರಿಗೆ ದಿನಪತ್ರಿಕೆ ಓದಲು ಸಹಾಯ ಮಾಡಿದ್ದಾರೆ.

ಪಾರ್ಕಿನ್​ಸನ್​ಗೆ ಒಳಗಾದವರಿಗೆ ಕೈ ಕಾಲುಗಳು ಸ್ವಾಧೀನದಲ್ಲಿರುವುದಿಲ್ಲ. ನಿರಂತರವಾಗಿ ಅಲ್ಲಾಡುತ್ತಲೇ ಇರುತ್ತವೆ. ಹೀಗಿರುವಾಗ ನಿತ್ಯ ಕೆಲಸಗಳನ್ನು ಮಾಡಿಕೊಳ್ಳಲೂ ಅವರಿಗೆ ತೊಂದರೆಯಾಗುತ್ತಿರುತ್ತದೆ. ಆಗ ಯಾರಾದರೂ ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಮನೆಯಲ್ಲಾದರೆ ಒಬ್ಬರಿಲ್ಲಾ ಒಬ್ಬರು ಇರುತ್ತಾರೆ. ಆದರೆ ಪ್ರಯಾಣದಲ್ಲಿ?

ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ವೃದ್ಧರು ದಿನಪತ್ರಿಕೆ ಓದಲು ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೊಬ್ಬರು ಪತ್ರಿಕೆಯನ್ನು ಹಿಡಿದು, ವೃದ್ಧರಿಗೆ ಓದಲು ಸಹಾಯ ಮಾಡಿದ್ದಾರೆ. ಈ ವಿಡಿಯೋ ಅನ್ನು ಲಂಡನ್​ನಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ನೋಡಿ : ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್​ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್​ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್

ಇದನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ದಯೆಯಿಂದ ಮಾಡಿದ ಯಾವ ಕೆಲಸ, ಸಹಾಯವೂ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುತ್ತಿದ್ದಾರೆ. ಈತನಕ 75,000 ಜನರು ಈ ವಿಡಿಯೋ ನೋಡಿದ್ದಾರೆ. ನಾನು ಇಂಥ ಪೋಸ್ಟ್​ಗಳನ್ನು ದಿನವೂ ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ ಒಬ್ಬರು. ನನ್ನ ತಂದೆಗೂ ಪಾರ್ಕಿನ್​ಸನ್​ ಕಾಯಿಲೆ ಇತ್ತು. ಇದು ನನ್ನನ್ನು ಆಳವಾಗಿ ತಟ್ಟುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಸಹಾಯಕ್ಕೆ ಸಣ್ಣದು ದೊಡ್ಡದು ಎನ್ನುವುದಿಲ್ಲ. ಪ್ರತಿ ಸಹಾಯವೂ ದೊಡ್ಡದೇ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:21 am, Fri, 6 January 23