
ಮೆಟ್ರೋ, ಬಸ್ಗಳಲ್ಲಿ ಚಿತ್ರ ಬಹರಗಾರರು ಕ್ಯೂಟ್ ಆಗಿರುವ ಅಥವಾ ಮುಗ್ದತೆಯ ಮುಖ ಇರುವ ವ್ಯಕ್ತಿಗಳ ಚಿತ್ರವನ್ನು ಬರೆದು ಅವರಿಗೆ ಖುಷಿಪಡಿಸುವ ಕೆಲವೊಂದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದನ್ನು ಆಗ್ಗಾಗೆ ನೋಡುತ್ತಿರುತ್ತೇವೆ. ಇದೀಗ ಇಲ್ಲೊಂದು ಅಂತಹದೇ ವಿಡಿಯೋ ವೈರಲ್ ಆಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನ ಅಧಿಕೃತ ಹ್ಯಾಂಡಲ್ ಒಂದು ವಿಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ಪಡೆದಿದೆ ಹಾಗೂ ವೈರಲ್ ಆಗಿದೆ. ಕರ್ತವ್ಯದಲ್ಲಿರುವ CISF ಸಿಬ್ಬಂದಿ (Delhi Metro) ಮುಖದ ಚಿತ್ರವನ್ನು ಕಲಾವಿದ ಬಿಡಿಸಿದ್ದಾರೆ. ಈ ಚಿತ್ರವನ್ನು ನೋಡಿ CISF ಸಿಬ್ಬಂದಿ ಮುಖದಲ್ಲಿ ಮೂಡಿದ ಮುಗ್ದ ನಗುವಿಗೆ ಸೋಶಿಯಲ್ ಮೀಡಿಯಾ ಬಳಕೆದಾರರೂ ಫುಲ್ ಫಿದಾ ಆಗಿದ್ದಾರೆ.
ದೆಹಲಿ ಮೊಟ್ರೋದಲ್ಲಿ ದಿನನಿತ್ಯದ ಗದ್ದಲದ ನಡುವೆ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ ಎಂದು ಬಳಕೆದಾರರು ಹೇಳಿದ್ದಾರೆ. ಈ ವಿಡಿಯೋದಲ್ಲಿ ದೃಶ್ಯದಲ್ಲಿ ಹೇಳುವ ಪ್ರಕಾರ, ದೆಹಲಿ ಮೆಟ್ರೋ ಬೋಗಿಯೊಳಗೆ ಕುಳಿತಿರುವ ಸಿಐಎಸ್ಎಫ್ ಅಧಿಕಾರಿಯೊಬ್ಬರ ವಿಡಿಯೋವನ್ನು ತೋರಿಸಿರುವುದನ್ನು ಕಾಣಬಹುದು. ಅವರ ಮುಂದೆಯೇ ಕುಳಿತಿದ್ದ ಕಲಾವಿದ, ಒಂದು ಬಿಳಿ ಶಿಟ್ನಲ್ಲಿ CISF ಸಿಬ್ಬಂದಿಯ ಮುಖವನ್ನು ಚಿತ್ರಿಸುತ್ತಾರೆ. ಈ ಚಿತ್ರ ಮಾಡಿದ ಮೇಲೆ ಈ ಚಿತ್ರವನ್ನು CISF ಸಿಬ್ಬಂದಿ ಮುಂದೆ ತೋರಿಸುತ್ತಾರೆ. ಈ ಚಿತ್ರವನ್ನು ನೋಡಿ CISF ಸಿಬ್ಬಂದಿ ಮುಖದಲ್ಲಿ ಬಂದು ಆ ನಗು ನೋಡಿ ಅಲ್ಲಿನ ಜನ ಒಂದು ಬಾರಿ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಡಾಲರ್‌ಗಿಂತ ರೂಪಾಯಿ ಬೆಟರ್ ಆಗಿದೆ ಎಂದ ಅಮೆರಿಕನ್ ಮಹಿಳೆ; ಅದು ಹೇಗಂತೀರಾ?
A million-dollar smile lights up the day
In a touching moment at #Delhi Metro, a proud CISF personnel beams with joy upon receiving a hand-drawn portrait created by the talented artist @Mrpaswanarts.
This beautiful artwork is more than just a portrait—it is a heartfelt tribute… pic.twitter.com/kNVXPo25NU
— CISF (@CISFHQrs) July 25, 2025
ನಂತರ CISF ಸಿಬ್ಬಂದಿ ಕಲಾವಿದನ್ನು ಕೈ ಕೈಕುಲುಕುತ್ತಾ ಧನ್ಯವಾದ ಹೇಳಿದ್ರು, ಜತೆಗೆ ತುಂಬಾ ಬಾವುಕರಾದರು. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೊವನ್ನು 67 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕಲಾವಿದನ ಭಾವನಾತ್ಮಕ ಪ್ರಯತ್ನಕ್ಕೆ ಧನ್ಯವಾದಗಳು ಎಂದು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ್ದಾರೆ. CISF ಸಿಬ್ಬಂದಿ ನೀಡಿದ ಉತ್ತಮ ಗೌರವ, ಸಮವಸ್ತ್ರದ ಹಿಂದಿನ ಮಾನವ ಚೈತನ್ಯವನ್ನು ನಿಜವಾಗಿಯೂ ಒಳ್ಳೆಯದು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ನೀವು ಇನ್ನೂ ಹೆಚ್ಚಿನ ಪ್ರೀತಿ ಮತ್ತು ಗೌರವಕ್ಕೆ ಅರ್ಹರು! ನಿಮ್ಮ ತ್ಯಾಗಗಳಿಗೆ ಧನ್ಯವಾದಗಳು! ಎಂದು ಮತ್ತೊಬ್ಬ ಬಳಕೆದಾರ ಹಾರೈಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ