Richest Beggar : ಭಿಕ್ಷಾಟನೆಯಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ನಟ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 07, 2024 | 3:43 PM

ಕೆಲವರು ಭಿಕ್ಷಾಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹೌದು ಅದೆಷ್ಟೋ ಭಿಕ್ಷುಕರು ಕೈ, ಕಾಲು ಇಲ್ಲ ಎಂದು ನಾಟಕವಾಡುತ್ತಾ ಭಿಕ್ಷೆ ಬೇಡುವ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಚೀನಿ ನಟ, ಪಾಪದ ಭಿಕ್ಷುಕನಂತೆ ನಟನೆ ಮಾಡುತ್ತಾ ಕಳೆದ 12 ವರ್ಷಗಳಿಂದ ಭಿಕ್ಷೆ ಬೇಡುತ್ತಾ ತಿಂಗಳಿಗೆ 8 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾನಂತೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗಿದೆ.

Richest Beggar : ಭಿಕ್ಷಾಟನೆಯಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ನಟ
Follow us on

ಪ್ರತಿಯೊಬ್ಬರಿಗೂ ನಾನು ಶ್ರೀಮಂತನಾಗಬೇಕು ಎಂಬ ಸಣ್ಣ ಆಸೆ ಇದ್ದೇ ಇರುತ್ತೆ. ಇದಕ್ಕಾಗಿ ದಿನನಿತ್ಯ ಕಷ್ಟಪಟ್ಟು ದುಡಿಯುತ್ತಾರೆ. ಮತ್ತು ಕಷ್ಟಪಟ್ಟು ದುಡಿದ ಹಣವನ್ನು ಪೋಲು ಮಾಡದೇ ಜೋಪಾನವಾಗಿ ಕೂಡಿಡುತ್ತಾರೆ. ಹೀಗೆ ಎಷ್ಟೇ ಕಷ್ಟ ಪಟ್ರೂ ಸಮಾಜದಲ್ಲಿ ಒಂದೊಳ್ಳೆ ಸ್ಥಾನಕ್ಕೆ ಹೋಗೊದು ಅಷ್ಟು ಸುಲಭವಲ್ಲ. ಆದ್ರೆ ಕೆಲವೊಬ್ಬರು ಕಷ್ಟಪಡದಯೇ ಕೇವಲ ಭಿಕ್ಷೆ ಬೇಡಿ ಶ್ರೀಮಂತರಾದವರಿದ್ದಾರೆ. ಇಂತಹ ಶ್ರೀಮಂತ ಭಿಕ್ಷುಕರ ಸ್ಟೋರಿಗಳನ್ನು ನೀವೆಲ್ಲರೂ ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಚೀನಾದ ನಟನೊಬ್ಬನೂ ಕೂಡಾ ತನ್ನ ನಟನಾ ಕೌಶಲ್ಯದಿಂದ  ಕಳೆದ 12 ವರ್ಷಗಳಿಂದ ಭಿಕ್ಷೆ ಬೇಡುತ್ತಾ ಜೀವನ ನಡೆಸುವ ಮೂಲಕ ಚೀನಾದ ಶ್ರೀಮಂತ ಭಿಕ್ಷುಕನೆನೆಸಿಕೊಂಡಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

ನಟ ಲು ಜಿಂಗಾಂಗ್ ಕಳೆದ 12 ವರ್ಷಗಳಿಂದ ಚೀನಾದ ಜನಪ್ರಿಯ ಪ್ರವಾಸಿ ತಾಣಗಳಿಗೆ ಹೋಗಿ ಅಲ್ಲಿ ಹರಕಳು ಬಟ್ಟೆ ತೊಟ್ಟು, ಸಪ್ಪೆ ಮೋರೆ ಹಾಕಿ ಕುಳಿತು ಬಡ ಭಿಕ್ಷುಕನಂತೆ ನಾಟಕವನ್ನಾಡುತ್ತಾ ಅಲ್ಲಿಗೆ ಬರುವಂತಹ ಪ್ರವಾಸಿಗರ ಬಳಿ ಭಿಕ್ಷೆ ಬೇಡುವಂತಹ ಕೆಲಸವನ್ನು ಮಾಡುತ್ತಿದ್ದಾನೆ. ಈತನ ಮುಗ್ಧ ನೋಟವನ್ನು ಕಂಡು ಪಾಪ ಈತ ಊಟ ಮಾಡಿ ಅದೆಷ್ಟು ದಿನಗಳಾಗಿರಬಹುದೋ ಎಂದು ಪ್ರವಾಸಿಗರು ಈತನ ಮೇಲಿನ ಅನುಕಂಪದಿಂದ ಈತನಿಗೆ ಹಣ ಮಾತ್ರವಲ್ಲದೆ ಆಹಾರ ಮತ್ತು ಪಾನೀಯಗಳನ್ನು ಸಹ ನೀಡುತ್ತಾರೆ.

ಹೀಗೆ ತನ್ನ ನಟನಾ ಕೌಶಲ್ಯದಿಂದಲೇ ಚೀನಾದ ಹೆನಾನ್ ಪ್ರಾಂತ್ಯದ ಕ್ವಿನ್ಮಿಂಗ್ ಶಾಂಘೆ ಗಾರ್ಡನ್ ನ ರಮಣೀಯ ಸ್ಥಳಗಳಲ್ಲಿ ಭಿಕ್ಷುಕನ ಪಾತ್ರವನ್ನು ನಿರ್ವಹಿಸುತ್ತಾ ಲು ಜಿಂಗಾಂಗ್ ತಿಂಗಳಿಗೆ  70,000 ಯುವಾನ್ ಅಂದರೆ ಸುಮಾರು 8 ಲಕ್ಷ ರೂ ವರೆಗೆ ಹಣ ಸಂಪಾದನೆ ಮಾಡುತ್ತಾನೆ. ಜೊತೆಗೆ ಪ್ರತಿನಿತ್ಯ ಉಚಿತ ಆಹಾರ ಮತ್ತು ಪಾನೀಯವನ್ನು ಸಹ ಗಳಿಸುತ್ತಾನೆ. ಟೈಮ್ ಡಾಕ್ಟರ್ ವರದಿಯ ಪ್ರಕಾರ, ಚೀನಾದ ಜನರ  ಗರಿಷ್ಠ ಮಾಸಿಕ ವೇತನವು  ಸುಮಾರು 29,000 ಯುವಾನ್ ಅಂದರೆ ಅಂದಾಜು ಮೂರು ಲಕ್ಷ ರೂ. ಗಳು. ಆದರೆ ಈತ ಭಿಕ್ಷಾಟನೆಯಿಂದಲೇ ತಿಂಗಳಿಗೆ 8 ಲಕ್ಷ ರೂಪಾಯಿಗಳಷ್ಟು   ಹಣ ಸಂಪಾದನೆ ಮಾಡುತ್ತಾನೆ.  ಕೆಲವು ವರದಿಯ ಪ್ರಕಾರ ಲು ಜಿಂಗಾಂಗ್ ಚೀನಾದ ಅತ್ಯಂತ ಶ್ರೀಮಂತ ಭಿಕ್ಷುಕನಾಗಿದ್ದಾನೆ.

ಇದನ್ನೂ ಓದಿ: ಕರಿಮಣಿ ಮಾಲೀಕ ರಾಹುಲ್ಲ ಆಯ್ತು, ಈಗ ಏನಿದ್ದರೂ ಬೋಳು ತಲೆ ಮಾಲೀಕನದ್ದೇ ಹವಾ

ತನ್ನ ನಟನಾ ಕೌಶಲ್ಯದಿಂದಲೇ ಭಿಕ್ಷೆ ಬೇಡುತ್ತಾ ಹಣ ಸಂಪಾದಿಸಲು ಆರಂಭಿಸಿದ ಲು ಜಿಂಗಾಂಗ್ ನಿರ್ಧಾರಕ್ಕೆ ಆತನ ಕುಟುಂಬವು ಒಪ್ಪಿಗೆ ನೀಡಿರಲಿಲ್ಲ. ನಂತರದ ದಿನಗಳಲ್ಲಿ ಆತನ ಗಳಿಕೆಯನ್ನು ಕಂಡು ಕುಟುಂಬ ಸದಸ್ಯರು ಮನಸ್ಸು ಬದಲಾಯಿಸಿದರು  ಎಂದು ಲು ಹೇಳಿದ್ದಾನೆ. ಅಷ್ಟೇ ಅಲ್ಲದೆ ಭಿಕ್ಷುಕನಂತೆ ನಟಿಸುವುದು ನೀವು ಅಂದುಕೊಂಡಷ್ಟು ಸುಲಭವಲ್ಲ, ನಾನು ಹಲವು ವರ್ಷಗಳಿಂದ ಇದೇ ಕೆಲಸವನ್ನು ಮಾಡುವುದಿಂದ ಎಲ್ಲಿ ಹೇಗೆ ನಟಿಸಬೇಕು ಎಂಬ ವಿಚಾರವನ್ನು ಕೂಡಾ ತಿಳಿಸಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

Published On - 3:43 pm, Thu, 7 March 24