ಈ ಭಿಕ್ಷುಕ ಭಿಕ್ಷೆ ಬೇಡಲು ಬಳಸಿದ ಐಡಿಯಾ ನೋಡಿದ್ರೆ ತಲೆ ಗ್ರಿರ್ ಎನ್ನುತ್ತೆ

ಸೋಶಿಯಲ್ ಮೀಡಿಯಾದಲ್ಲಿ ಈ ಕೆಲವು ವಿಡಿಯೋ ನೋಡಿದಾಗ ಈ ಮನುಷ್ಯನು ಎಷ್ಟು ಬುದ್ಧಿವಂತ ಎನ್ನುವುದರ ಸ್ಪಷ್ಟ ಚಿತ್ರಣವು ಸಿಗುತ್ತದೆ. ಹೌದು, ತಮ್ಮ ಕೆಲಸವನ್ನು ಸುಲಭವಾಗಿ ಮಾಡಿಮುಗಿಸಲು ಎಂತೆಂತಹ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಭಿಕ್ಷುಕನು ಎಷ್ಟು ಅಪ್ಡೇಟೆಡ್ ಆಗಿದ್ದಾನೆ ಎನ್ನುವುದನ್ನು ಇದು ತೋರಿಸುತ್ತದೆ. ವಾಹನಗಳ ಬಳಿ ಹೋಗದೇ ಕುಳಿತಲ್ಲಿಂದಲೇ ವಾಹನದಲ್ಲಿದ್ದವರ ಬಳಿ ಹೇಗೆ ಹಣವನ್ನು ಕೇಳಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಈ ಭಿಕ್ಷುಕನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ.

ಈ ಭಿಕ್ಷುಕ ಭಿಕ್ಷೆ ಬೇಡಲು ಬಳಸಿದ ಐಡಿಯಾ ನೋಡಿದ್ರೆ ತಲೆ ಗ್ರಿರ್ ಎನ್ನುತ್ತೆ
ವೈರಲ್ ವಿಡಿಯೋ
Image Credit source: Twitter

Updated on: May 11, 2025 | 2:14 PM

ಸಾಮಾನ್ಯವಾಗಿ ಭಿಕ್ಷುಕ (beggar) ರು ಭಿಕ್ಷೆ ಬೇಡುವುದನ್ನು ನೋಡಿರಬಹುದು. ಬಸ್ ಸ್ಟ್ಯಾಂಡ್, ಸಿಗ್ನಲ್‌ಗಳಲ್ಲಿ, ದೇವಸ್ಥಾನ (temple) ಗಳ ಮುಂದೆ ಕುಳಿತು ಭಿಕ್ಷೆ ಬೇಡುವುದನ್ನು ನೋಡಿರಬಹುದು. ಅದಲ್ಲದೇ, ಜನರು ಹೆಚ್ಚು ಸೇರುವ ಕಡೆಗಳಲ್ಲಿ ಈ ಭಿಕ್ಷುಕರು ಹೆಚ್ಚಾಗಿಯೇ ಇರುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ಭಿಕ್ಷುಕನೊಬ್ಬನು ರಸ್ತೆಯಲ್ಲಿ ನಿಂತಿರುವ ವಾಹನಗಳ ಬಳಿ ಹೋಗಿ ಹಣ ಕೇಳುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ಭಿಕ್ಷುಕ ವಾಹನ ಗಳ ಬಳಿ ಹೋಗದೇ ತಲೆ ಉಪಯೋಗಿಸಿ, ಕುಳಿತಲ್ಲಿಂದಲೇ ವಾಹನದಲ್ಲಿದ್ದವರ ಬಳಿಗೆ ಹೋಗದೇ ಭಿಕ್ಷೆ ಬೇಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

@adititiwari9111 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಭಿಕ್ಷುಕನೊಬ್ಬನು ಭಿಕ್ಷೆ ಬೇಡಲು ರಸ್ತೆ ಬದಿಯಲ್ಲಿ ಕುಳಿತುಕೊಂಡಿರುವುದನ್ನು ಕಾಣಬಹುದು..ಆದರೆ ಈ ಸಿಗ್ನಲ್ ನಲ್ಲಿ ವಾಹನಗಳು ನಿಂತಿದ್ದು ಅವರ ಬಳಿ ಹಣ ಕೇಳಲು ತನ್ನ ಬುದ್ಧಿವಂತಿಕೆಯನ್ನು ಬಳಸಿದ್ದಾನೆ. ಹೌದು, ಒಂದು ಕೋಲಿಗೆ ಸಣ್ಣದಾದ ಬಕೆಟ್ ಕಟ್ಟಿರುವುದನ್ನು ಕಾಣಬಹುದು. ಕಾರು ನಿಂತ ತಕ್ಷಣವೇ ಭಿಕ್ಷುಕನು ಕೋಲಿಗೆ ಕಟ್ಟಿದ ಬಕೆಟನ್ನು ಕಟ್ಟಿದ್ದು, ಕೋಲನ್ನು ಮುಂದಕ್ಕೆ ಚಾಚುತ್ತಿದ್ದಂತೆ ಕಾರು ಚಾಲಕನು ಬಕೆಟ್ ಗೆ ಹಣ ಹಾಕುವುದನ್ನು ಕಾಣಬಹುದು. ಆದರೆ ಅದೇ ವಾಹನದಲ್ಲಿದ್ದವರು ಈ ಐಡಿಯಾ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

ಇದನ್ನೂ ಓದಿ
ಐಷಾರಾಮಿ ಮನೆಗಿಂತ ಸಣ್ಣ ಅಪಾರ್ಟ್ಮೆಂಟ್ ಗಳೇ ಬೆಸ್ಟ್, ಅಸಲಿ ವಿಚಾರ ಇಲ್ಲಿದೆ
ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಿರಿಯಾನಿಗೆ ಈ ಹೆಸರು ಬಂದದ್ದು ಹೇಗೆ?
ಕಲ್ಲಿನಿಂದ ನ್ಯಾಚುರಲ್‌ ಮೆಹಂದಿ ರೆಡಿ ಮಾಡಿದ ಯುವತಿ
ತಾಯಿ ಶ್ವಾನದ ಕೈಕಾಲು ಹಿಡಿದು ಮರಿಗಳಿಗೆ ಎದೆ ಹಾಲು ಕುಡಿಸಿದ ಹುಡುಗ್ರು

ಇದನ್ನೂ ಓದಿ : ಅತಿಥಿ ದೇವೋ ಭವ, ಈ ಆಟೋ ಡ್ರೈವರ್ ವಿದೇಶಿ ಮಹಿಳೆಗೆ ಕೊಟ್ಟ ಗೌರವ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 7.5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಈ ಭಿಕ್ಷುಕನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ‘ನೀವು ಕಷ್ಟಪಟ್ಟು ಕೆಲಸ ಮಾಡುವವರಿಗೆ ಈ ರೀತಿ ಐಡಿಯಾ ಬರಲ್ಲ, ಇದು ನಿಜವಾಗಿ ಶಾರ್ಟ್‌ಕಟ್ ಹಣಗಳಿಸುವ ವಿಧಾನ’ ಎಂದಿದ್ದಾರೆ. ಇನ್ನೊಬ್ಬರು, ‘ಭಾರತದಲ್ಲಿ ಇಂತಹ ಪ್ರತಿಭೆಗಳು ಸಾಕಷ್ಟಿದ್ದಾವೆ. ಆದರೆ ಕೆಲವೊಂದು ಸಲ ಈ ಪ್ರತಿಭೆಗಳು ಬೆಳಕಿಗೆ ಬರುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ‘ಇಂತಹ ಜುಗಾಡ್ ಐಡಿಯಾಗಳಿಗೆ ಸಂಬಂಧ ಪಟ್ಟಂಹ ವಿಡಿಯೋಗಳನ್ನು ಕಂಡಾಗ ನಗು ಬರುತ್ತದೆ, ಆದರೆ ಇವನ ಬುದ್ಧಿವಂತಿಕೆ ಮೆಚ್ಚಲೇ ಬೇಕು’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ