ಸಾಮಾನ್ಯವಾಗಿ ಎಷ್ಟು ದುಡ್ಡು ಕೊಟ್ಟು ಮಂಚವನ್ನು ಖರೀದಿಸಬಹುದು? ಗಟ್ಟುಮುಟ್ಟಾದ ಮರದಿಂದ ತಯಾರಿಸಿದ ಮಂಚಕ್ಕೆ ಗರಿಷ್ಠ ಅಂದರೂ 10,000 ರೂಪಾಯಿ ಇರಬಹುದು. ಮಂಚದ ಅಳತೆಯನ್ನು ಆಧರಿಸಿ ಬೆಲೆ ಏರಿಳಿತವಾಗುತ್ತದೆ. ಆದರೆ ನ್ಯೂಜಿಲೆಂಡ್ನಲ್ಲಿ ಈ ಮಂಚಕ್ಕೆ 41,000 ರೂಪಾಯಿ. ನ್ಯೂಜಿಲೆಂಡ್ ಬ್ರಾಂಡ್ ಮಂಚವನ್ನು ವಿಂಟೇಜ್ ಇಂಡಿಯನ್ ಡೇಬೆಡ್ ಎಂದು ಗುರುತಿಸಿದೆ.
ವಿಂಟೇಜ್ ಇಂಡಿಯನ್ ಡೇ ಬೆಡ್ಅನ್ನು ಬ್ರಾಂಡ್ನ ವೆಬ್ಸೈಟ್ನಲ್ಲಿ ಪಟ್ಟಿ ಮಾಡಲಾಗಿದೆ. ಮಂಚಕ್ಕೆ ರಿಯಾಯಿತಿಯ ನಂತರ 41,000 ರೂಪಾಯಿ ನಿಗದಿಯಾಗಿದೆ. ಸೆಣಬಿನಿಂದ ತಯಾರಿಸಿದ ಹಾಸಿಗೆಗೆ ಮರದ ಚೌಕಟ್ಟಿಗೆ ನಾಲ್ಕು ಮರದ ಕಾಲುಗಳನ್ನು ಅಳವಡಿಸಿ ಮಂಚವನ್ನು ತಯಾರಿಸಲಾಗಿದೆ. ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.
ನ್ಯೂಜಿಲೆಂಡ್ ಬ್ರಾಂಡ್ ಅನಾಬೆಲ್ಲೆ, ಸಾಮಾನ್ಯವಾಗಿ ಭಾರತೀಯರು ಬಳಸುವ ಮರದ ಮಂಚವನ್ನು ವಿಂಟೇಜ್ ಇಂಡಿಯನ್ ಡೇ ಬೆಡ್ ಎಂದು ಗುರುತಿಸಿದೆ. ದೈನಂದಿನ ಬಳಕೆಯ ವಸ್ತುವನ್ನು ಇಷ್ಟು ದೊಡ್ಡ ಬೆಲೆಗೆ ಮಾರಾಟ ಮಾಡುವುದು ಇದೇ ಮೊದಲಲ್ಲ. ಕಳೆದ ವಾರ ಐಷಾರಾಮಿ ಫ್ಯಾಷನ್ ಬ್ರಾಂಡ್ ಬೆಲೆನ್ಸಿಯಾಗಾ ಶಾಪಿಂಗ್ ಬ್ಯಾಗ್ಅನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು.
ಇದನ್ನೂ ಓದಿ:
Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!
Viral News: ಹೊಟೆಲ್ನಲ್ಲಿ ಆರ್ಡರ್ ಮಾಡಿದ ಊಟದ ಬೆಲೆ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!
(This charpai is being sold as vintage Indian daybed for rs 41,000 A New Zealand brand named ANNABELLE)