Viral Video : ಹುಲಿಗಳಿಗೆ ಈ ಶ್ವಾನ ತಾಯಿ! ಇಲ್ಲಿದೆ ನೋಡಿ ಅದ್ಭುತ ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 14, 2022 | 4:08 PM

ಈ ಶ್ವಾನ ಅನಾಥವಾಗಿದ್ದ ಈ ಹುಲಿಗಳಿಗೆ ತಾಯಿಯಾಗಿತ್ತು ಎಂದು ಈ ಪೋಸ್ಟ್ ನಲ್ಲಿ ಹೇಳಲಾಗಿದೆ. ಹುಲಿಗಳು ತನ್ನ ತಾಯಿಯನ್ನು ಕಳೆದುಕೊಂಡಾಗ ಈ ಶ್ವಾನವೇ ಹಾಲು ನೀಡಿದ್ದು ಎಂದು ಹೇಳಲಾಗಿದೆ.

Viral Video : ಹುಲಿಗಳಿಗೆ ಈ ಶ್ವಾನ ತಾಯಿ! ಇಲ್ಲಿದೆ ನೋಡಿ ಅದ್ಭುತ ವಿಡಿಯೋ
ನಾಯಿ ಮತ್ತು ಹುಲಿಗಳು
Image Credit source: NDTV
Follow us on

ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ನಾಯಿಯೊಂದು ಹುಲಿಗಳ ಗುಂಪಿನಲ್ಲಿ ಯಾವುದೇ ಭಯವಿಲ್ಲದೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಒಂದು ಬಾರಿ ವಿಡಿಯೋ ನೋಡಿ  ಅಚ್ಚರಿಯಾಗುವುದು ಖಂಡಿತ. ಶ್ವಾನ ಧೈರ್ಯದಿಂದ ಯಾವುದೇ ಭಯವಿಲ್ಲದೆ ತನ್ನ ಸೇಹಿತರಂತೆ ಅವುಗಳ ಜೊತೆಗೆ ಓಡಾಡುತ್ತದೆ. ಹುಲಿಗಳು ನಾಯಿಗೆ ಯಾವುದೇ ರೀತಿಯ ತೊಂದರೆಯನ್ನು ಮಾಡುವುದಿಲ್ಲ.   ಈ ವೀಡಿಯೊವನ್ನು ಟೈಗರ್ ಬಿಗ್‌ಫಾನ್ ಅವರು  Instagram ನಲ್ಲಿ ಹಂಚಿಕೊಂಡಿದ್ದಾರೆ. ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಮತ್ತು 52,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಶ್ವಾನ ಅನಾಥವಾಗಿದ್ದ ಈ ಹುಲಿಗಳಿಗೆ ತಾಯಿಯಾಗಿತ್ತು ಎಂದು ಈ ಪೋಸ್ಟ್ ನಲ್ಲಿ ಹೇಳಲಾಗಿದೆ. ಹುಲಿಗಳು ತನ್ನ ತಾಯಿಯನ್ನು ಕಳೆದುಕೊಂಡಾಗ ಈ ಶ್ವಾನವೇ ಹಾಲು ನೀಡಿದ್ದು ಎಂದು ಹೇಳಲಾಗಿದೆ.  ಈ ವಿಡಿಯೋವನ್ನು ನೋಡಿದಾಗ ಇಷ್ಟು ಹುಲಿಗಳ ಜೊತೆಗೆ ಯಾವುದೇ ಭಯವಿಲ್ಲದೇ ಈ ಶ್ವಾನ ಇದೆ ಎಂದರೆ ಇದಕ್ಕೆ ಬಲವಾದ ಕಾರಣ ಇರಬೇಕು ಎಂಬ ಪ್ರಶ್ನೆ ಮೂಡುವುದು. ಹುಲಿಗಳ ಜೊತೆಗೆ ಒಂದು ಶ್ವಾನ ಇರಲು ಸಾಧ್ಯವೇ, ಎಂಬ ಪ್ರಶ್ನೆ ಬಂದರು ಇದು ಸತ್ಯ , ಆದರೆ ಈ ಶ್ವಾನ ಹುಲಿಗಳಿಗೆ ತಾಯಿಯ ಪ್ರೀತಿಯನ್ನು ನೀಡಿ, ತನ್ನ ಎದೆ ಹಾಲನ್ನು ನೀಡಿದೆ. ಅದಕ್ಕಾಗಿ ಆ ಹುಲಿಗಳು ಈ ಶ್ವಾನವನ್ನು ತಾಯಿಯಂತೆ ಕಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ
ಉಡುಪಿಯಲ್ಲಿ 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾ ಶಾಸನ ಪತ್ತೆ
Viral Video: ಮಂಗಗಳಿಗೆ ಮಾವಿನ ಹಣ್ಣು ತಿನ್ನಿಸಿದ ಕಾನ್​ಸ್ಟೆಬಲ್​, ಇದುವೇ ಮಾನವೀಯತೆ ಎಂದ ನೆಟ್ಟಿಗರು
Viral Video: ಅಶ್ಲೀಲವಾಗಿ ವರ್ತಿಸಿದ ಯುವಕರೊಂದಿಗೆ ಏಕಾಂಗಿಯಾಗಿ ಫೈಟ್ ಮಾಡಿದ ಯುವತಿ; ವಿಡಿಯೋ ವೈರಲ್
Viral Video: ಬೃಹತ್ ಮರಕ್ಕೆ ಬಡಿದ ಸಿಡಿಲು! ಮೈ ಝುಂ ಎನಿಸುವ ವಿಡಿಯೋ ವೈರಲ್

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  : ಉಡುಪಿಯಲ್ಲಿ 15ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಶಿಲಾ ಶಾಸನ ಪತ್ತೆ

ಈ ವಿಡಿಯೋವನ್ನು ನೋಡಿ ಬಳಕೆದಾರರು ಕೂಡ ಅಚ್ಚರಿಯನ್ನು ಪಟ್ಟಿದ್ದಾರೆ. ತಾಯಿಯ ಪ್ರೀತಿ ಎಂತಹ ಕ್ರೂರ ಪ್ರಾಣಿಯನ್ನು ಕೂಡ ಬದಲಾಯಿಸುತ್ತದೆ, ಆದರೆ ಮನುಷ್ಯ ಕುಲದಲ್ಲಿ ಮಾತ್ರ  ಪ್ರಸ್ತುತ ಕಾಲದಲ್ಲಿ ಹೆತ್ತವರು ಎಂದು ನೋಡದೇ ಕ್ರೂರ ಪ್ರಾಣಿಗಳಿಂತಲ್ಲೂ ಕ್ರೂರವಾಗಿ ನಡೆದುಕೊಳ್ಳತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:05 pm, Tue, 14 June 22