Trending : ನೋಡಲು ಫೋಟೋಗ್ರಾಫ್ನಂತೆ ಕಾಣುತ್ತದೆಯಾದರೂ ಈ ‘ಕಪ್ಪೆ’ಯು ಹೀಗೆ ಆಕಾರ ತಳೆಯಲು ಹೆಣ್ಣುಮಕ್ಕಳು ಬಣ್ಣಹಚ್ಚಿಸಿಕೊಂಡು ಹೀಗೆ ಒಬ್ಬರೊಳಗೊಬ್ಬರು ಹುದುಗಿಕೊಂಡಿದ್ದಾರೆ. ಪ್ರಕೃತಿ ಮತ್ತು ಜೀವನ ಸೌಂದರ್ಯದ ಬಗ್ಗೆ ನೋಡುಗರಲ್ಲಿ ಆಲೋಚಿಸುವಂತೆ ಮಾಡುತ್ತಿರುವ ಈ ಕಲಾಕೃತಿಯ ಪರಿಕಲ್ಪನೆ ಇಟಲಿಯ ಜೋಹಾನ್ಸ್ ಸ್ಟೋಟರ್ ಎಂಬ ಕಲಾವಿದರದು. ಇಲ್ಲಿ ಒಟ್ಟು ಐದು ಹೆಣ್ಣುಮಕ್ಕಳ ದೇಹಕ್ಕೆ ಹೈಪರ್ ರಿಯಲಿಸ್ಟಿಕ್ ಬಾಡಿಪೇಂಟಿಂಗ್ ಮಾಡಲಾಗಿದೆ. ಆಪ್ಟಿಕಲ್ ಇಲ್ಲ್ಯೂಷನ್ನಂತೆ ಇದು ಭಾಸವಾಗುವುದರಲ್ಲಿ ಸಂದೇಹವಿಲ್ಲ. ಮೊದಲಿಗೆ ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರಬಿಂದುವಾಗಿರುವ ಒಬ್ಬ ಮಹಿಳೆಯ ದೇಹ ಕಾಣುತ್ತದೆ. ನಂತರ ಎಡ ಮತ್ತು ಬಲದಲ್ಲಿ ನಾಲ್ಕು ಮಹಿಳೆಯರು ಕಾಣುತ್ತಾರೆ.
ಎಷ್ಟು ಜಾಗರೂಕತೆಯಿಂದ, ಸೂಕ್ಷ್ಮವಾಗಿ ಜೀವಂತ ಕಲಾಕೃತಿಯನ್ನು ಸಂಯೋಜನೆಗೊಳಿಸಲಾಗಿದೆ ಅಲ್ಲವೆ? ನಿಜಕ್ಕೂ ಈ ಹೆಣ್ಣುಮಕ್ಕಳು ಮತ್ತು ಕಪ್ಪೆಯ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕ್ಲಿಷ್ಟಕರವೇ. ಜೋಹಾನ್ಸ್ ಅವರ ಇನ್ಸ್ಟಾಗ್ರಾಂ ಪುಟವನ್ನು 1.28 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಾರೆ. ಅವರ ಇತರೇ ಕಲಾಕೃತಿಗಳನ್ನು ಗಮನಿಸಿ. ವನ್ಯಜೀವಿಗಳಿಂದಲ ಪ್ರೇರಿತವಾಗಿವೆ. ಗಾಢವರ್ಣಸಂಯೋಜನೆಯಲ್ಲಿ ಆಕರ್ಷಕವಾಗಿ ಕಾಣುತ್ತವೆ.
ಕಲೆಯ ಮಹಿಮೆ ಇದು. ಸಾಕಷ್ಟು ಪರಿಶ್ರಮವನ್ನು, ಕಲ್ಪನಾಶಕ್ತಿಯನ್ನು ಮತ್ತು ತಾದಾತ್ಮ್ಯವನ್ನು ಬೇಡುವಂಥದ್ದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:19 pm, Sat, 24 September 22