AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ‘ಈತ ಕೋಮಾದಲ್ಲಿದ್ದಾನೆ!’ 18 ತಿಂಗಳುಗಳ ಕಾಲ ಮೃತದೇಹ ಮನೆಯೊಳಗಿಟ್ಟುಕೊಂಡಿದ್ದ ಕಾನ್ಪುರದ ಕುಟುಂಬ

Coma : ವಿಚಿತ್ರವೆಂದರೆ, ತನ್ನ ಗಂಡ ಕೋಮಾದಿಂದ ಹೊರಬರುತ್ತಾನೆ ಎಂದು ಭಾವಿಸಿದ ಮೃತವ್ಯಕ್ತಿಯ ಹೆಂಡತಿ ಪ್ರತಿದಿನ ಬೆಳಿಗ್ಗೆ ಅವನ ದೇಹಕ್ಕೆ ಗಂಗಾಜಲವನ್ನು ಪ್ರೋಕ್ಷಿಸುತ್ತಲೇ ಇರುತ್ತಿದ್ದಳು.

Trending : ‘ಈತ ಕೋಮಾದಲ್ಲಿದ್ದಾನೆ!’ 18 ತಿಂಗಳುಗಳ ಕಾಲ ಮೃತದೇಹ ಮನೆಯೊಳಗಿಟ್ಟುಕೊಂಡಿದ್ದ ಕಾನ್ಪುರದ ಕುಟುಂಬ
ಸಾಂದರ್ಭಿಕ ಚಿತ್ರ
TV9 Web
| Updated By: ಶ್ರೀದೇವಿ ಕಳಸದ|

Updated on:Sep 24, 2022 | 2:40 PM

Share

Trending : 2021 ರ ಏಪ್ರಿಲ್​ನಲ್ಲಿ ತೀರಿಹೋದ ಆದಾಯ ತೆರಿಗೆ ಇಲಾಖೆ ನೌಕರರೊಬ್ಬರ ಕುಟುಂಬವು, 18 ದಿನಗಳ ಕಾಲ ಆತನ ಮೃತದೇಹವನ್ನು ಮನೆಯೊಳಗೇ ಇರಿಸಿಕೊಂಡಿದ್ದ ವಿಲಕ್ಷಣ ಘಟನೆಯು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಿಚಿತ್ರವೆಂದರೆ, ತನ್ನ ಗಂಡ ಕೋಮಾದಿಂದ ಹೊರಬರುತ್ತಾನೆ ಎಂದು ಭಾವಿಸಿದ ಮೃತವ್ಯಕ್ತಿಯ ಹೆಂಡತಿ ಪ್ರತಿದಿನ ಬೆಳಿಗ್ಗೆ ಅವನ ದೇಹಕ್ಕೆ ಗಂಗಾಜಲವನ್ನು ಪ್ರೋಕ್ಷಿಸುತ್ತಲೇ ಇರುತ್ತಿದ್ದಳು. ಮೃತವ್ಯಕ್ತಿ ವಿಮಲೇಶ್​ ದೀಕ್ಷಿತ್​ ಕೋಮಾದಲ್ಲಿ ಇದ್ದರೆಂದು ನಂಬಿರುವ ಹಿನ್ನೆಲೆಯಲ್ಲಿ ಅವರ ಕುಟುಂಬವು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಕೂಡ ಮುಂದೆ ಬರಲಿಲ್ಲ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಅಲೋಕ್​ ರಂಜನ್​ ಪಿಟಿಐಗೆ ತಿಳಿಸಿದ್ದಾರೆ.

2021 ರ ಏಪ್ರಿಲ್ 22 ರಂದು ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ವಿಮಲೇಶ್​ ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಆಸ್ಪತ್ರೆಯು ಮರಣ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾಜ್ಯ ಆರೋಗ್ಯ ಇಲಾಖೆಯ ತಂಡವು ಕಮಲೇಶ ಅವರ ಮನೆಗೆ ತಲುಪಿದಾಗಲೇ ಈ ವಿಷಯ ಬಹಿರಂಗಗೊಂಡಿದೆ. ವಿಮಲೇಶ್ ಕಳೆದ ಒಂದೂವರೆ ವರ್ಷಗಳಿಂದ ಕಚೇರಿಗೆ ಬರುತ್ತಿಲ್ಲ ಎಂದು ತೆರಿಗೆ ಇಲಾಖೆಯು ಪೊಲೀಸರಿಗೆ ತಿಳಿಸಿದಾಗ, ಅವರನ್ನು ಪತ್ತೆ ಹಚ್ಚಲು ತನಿಖಾ ತಂಡವೊಂದನ್ನು ರಚಿಸಲಾಗಿದೆ.

ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಜೊತೆಗೆ ಆರೋಗ್ಯ ಅಧಿಕಾರಿಗಳ ತಂಡವು ಶುಕ್ರವಾರದಂದು ರಾವತ್‌ಪುರ ಪ್ರದೇಶದ ದೀಕ್ಷಿತ್ ಅವರ ಮನೆಗೆ ಹೋಗಿ ಕಮಲೇಶ್ ಅವರನ್ನು ನೋಡಬೇಕೆಂದು ಕೇಳಿಕೊಂಡಾಗ, ‘ಕಮಲೇಶ ಕೋಮಾದಲ್ಲಿದ್ದಾರೆ, ಅವರು ಜೀವಂತವಾಗಿದ್ದಾರೆ’ ಎಂದು ಕುಟುಂಬ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕೊನೆಗೆ ಸಾಕಷ್ಟು ರೀತಿಯಲ್ಲಿ ಮನಒಲಿಸಿದಾಗ, ಕುಟುಂಬ ಸದಸ್ಯರು ಕಮಲೇಶ್ ಅವರ ದೇಹವನ್ನು ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳು ಮೂರು ಸದಸ್ಯರ ತಂಡವನ್ನು ರಚಿಸಲಾಗಿದೆ.

ತಮ್ಮ ನೆರೆಹೊರೆಯವರಿಗೂ, ಕಮಲೇಶ್​ ಕೋಮಾದಲ್ಲಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳುತ್ತ ಬಂದಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಆದರೆ, ಕಮಲೇಶರ ಪತ್ನಿ ಮಾನಸಿಕ ಅಸ್ವಸ್ಥರಾಗಿರುವಂತೆ ತೋರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ, ಕುಟುಂಬದವರು ಆಗಾಗ ಆಕ್ಸಿಜನ್ ಸಿಲಿಂಡರ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವ ವಿಷಯವನ್ನು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಮೃತದೇಹ ತೀರಾ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:38 pm, Sat, 24 September 22