ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ಆದ್ದರಿಂದಲೇ ನಾಯಿಯನ್ನು ಕುಟುಂಬವೊಂದು ಸದಸ್ಯರಂತೆ ಸಾಕುತ್ತಾರೆ. ಆದರೆ ಸ್ವಾತಂತ್ರ್ಯಪೂರ್ವದಲ್ಲೇ ನವಾಬನೊಬ್ಬ ಬರೋಬ್ಬರಿ 2 ಕೋಟಿ ರೂ. ಖರ್ಚು ಮಾಡಿ ತನ್ನ ಮುದ್ದಿನ ಶ್ವಾನದ ವಿವಾಹವನ್ನು ಮಾಡಿಸಿದ್ದ ಎಂಬ ಬಗ್ಗೆ ತಿಳಿದಿದೆಯಾ?. ಶ್ವಾನದ ಮೇಲಿನ ಪ್ರೀತಿಯಿಂದಲೇ ಜುನಾಗಢದ ನವಾಬ್ ಮುಹಮ್ಮದ್ ಮಹಾಬತ್ ಖಾನ್ III, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿದ್ದಾರೆ. ನವಾಬನ ನಾಯಿಗಳ ಮೇಲಿನ ಆಳವಾದ ಪ್ರೀತಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಈ ಮುಹಮ್ಮದ್ ಮಹಾಬತ್ ಖಾನ್ III ತನ್ನ ಆಡಳಿತದ ಸಮಯದಲ್ಲಿ ಅಂದರೆ 1947ರ ಕಾಲ ಘಟ್ಟದಲ್ಲಿ 800 ನಾಯಿಗಳನ್ನು ಸಾಕಿದ್ದ. ಪ್ರತಿಯೊಂದು ಶ್ವಾನಕ್ಕೂ ವೈಯಕ್ತಿಕ ವಸತಿ, ಆರೈಕೆದಾರರು ಮತ್ತು ಮಸಾಜ್ ಹೀಗೆ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ನೀಡಿದ್ದ.
ಜುನಾಗಢದ ನವಾಬ್ ಮುಹಮ್ಮದ್ ಮಹಾಬತ್ ಖಾನ್ III ಸರಿಸುಮಾರು 800 ನಾಯಿಗಳನ್ನು ಸಾಕಿದ್ದರೂ ಕೂಡ ಒಂದು ನಾಯಿಯನ್ನು ಮಾತ್ರ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಆತನ ಮುದ್ದಿನ ನಾಯಿಯ ಹೆಸರು ರೋಶನಾರಾ. ಈ ಶ್ವಾನದ ವಿವಾಹಕ್ಕಾಗಿ ಸುಮಾರು 2 ಕೋಟಿ ರೂ ಖರ್ಚು ಮಾಡಿ, ಪ್ರದೇಶದಾದ್ಯಂತದ ಗಣ್ಯರನ್ನು ಆಹ್ವಾಸಲಾಗಿತ್ತು.
ಇದನ್ನೂ ಓದಿ: ದೇವಾಲಯ ಧ್ವಂಸ ಮಾಡಲು ಬಂದ ವ್ಯಕ್ತಿ ದೇವರ ವಿಗ್ರಹದ ಮುಂದೆಯೇ ಸಾವು
1947ರ ದೇಶ ವಿಭಜನೆಯ ಸಮಯದಲ್ಲಿ, ನವಾಬ್ ತನ್ನ ಹೆಂಡತಿ ಮತ್ತು ಮಗುವನ್ನು ಬಿಟ್ಟು ತನ್ನ ಪಾಲಿಸಬೇಕಾದ ಸಾಕುಪ್ರಾಣಿಗಳೊಂದಿಗೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದ. ಸದ್ಯ ಈತನ ಶ್ವಾನದ ಮೇಲಿನ ಅಪಾರ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ