20,000 ರೂಪಾಯಿಗಾಗಿ ಹೆಂಡತಿಯ ಕೊಂದನಾ ಗಂಡ? ದಂಪತಿ ನಡುವೆ ಏನಾಯಿತು?

ಎರಡು ಮಕ್ಕಳ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಹಾರ್ಟ್ ಅಟ್ಯಾಕ್ ಅಂತ ಹೇಳಿ ಗಂಡ ಅಲ್ಲಿಂದ ಎಸ್ಕೇಪ್ ಆಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿವೆ. ಇನ್ನೊಂದು ಕಡೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದು ನಿಜಕ್ಕೂ ಕೊಲೆ ಮಾಡಿದ್ರಾ ಅಥವಾ ಗಂಡನ ಕಿರುಕುಳಕ್ಕೆ ಹೆಂಡತಿಯೇ ಆತ್ಮಹತ್ಯೆ ಮಾಡಿಕೊಂಡ್ಲಾ ಅನ್ನೋ ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಆದ್ರೇ ಅಮ್ಮನ ಕಳೆದುಕೊಂಡ ಮಕ್ಕಳು ಮಾತ್ರ ಅನಾಥವಾಗಿದ್ದು ವಿಪರ್ಯಾಸದ ಸಂಗತಿ.

20,000 ರೂಪಾಯಿಗಾಗಿ ಹೆಂಡತಿಯ ಕೊಂದನಾ ಗಂಡ? ದಂಪತಿ ನಡುವೆ ಏನಾಯಿತು?
20000 ರೂಪಾಯಿಗಾಗಿ ಹೆಂಡತಿಯ ಕೊಂದನಾ ಗಂಡ? ದಂಪತಿ ನಡುವೆ ಏನಾಯಿತು?
Follow us
Sahadev Mane
| Updated By: ಸಾಧು ಶ್ರೀನಾಥ್​

Updated on:Mar 14, 2024 | 5:22 PM

ಅವರದ್ದು ಏಳು ವರ್ಷದ ದಾಂಪತ್ಯ ಜೀವನ, ಲಾರಿ ಓಡಿಸಿಕೊಂಡು ಜೀವನ ಮಾಡ್ತಿದ್ದ ಆತ (husband) ಕೇವಲ 20,000 ರೂ.ಗಾಗಿ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಇಬ್ಬರು ಮಕ್ಕಳಿದ್ರೂ ಹಣಕ್ಕಾಗಿ ಹೆಂಡತಿ (wife) ಹಾಗೂ ಅವರ ತವರು ಮನೆಯವರನ್ನ ಪೀಡಿಸುತ್ತಿದ್ದ. ದುಡ್ಡು ಕೊಡಲ್ಲಾ ಅಂದಿದ್ದಕ್ಕೆ ಮಾಡಬಾರದ ಕೆಲಸ ಮಾಡಿ (murder) ಇದೀಗ ಊರು ಬಿಟ್ಟಿದ್ದಾನೆ. ಅಷ್ಟಕ್ಕೂ ಆ ದಂಪತಿ ನಡುವೆ ಆಗಿದ್ದೇನೂ? ಈ ಕುರಿತು ಮೃತ ಮಹಿಳೆಯ ತವರು ಮನೆಯವರ ಆರೋಪ ಎನೂ ಅಂತೀರಾ ಈ ಸ್ಟೋರಿ ನೋಡಿ. ಈ ಫೋಟೊದಲ್ಲಿರುವ ಮಹಿಳೆಯ ಹೆಸರು ಜುವೇರಿಯಾ ಮುಲ್ಲಾ ಅಂತಾ. 28 ವರ್ಷದ ಈಕೆ ಎರಡು ಮಕ್ಕಳ ತಾಯಿ. ಆದ್ರೇ ವರದಕ್ಷಿಣೆ ಅನ್ನೋ ಪೆಡಂಭೂತಕ್ಕೆ ಇದೀಗ ಜೀವವನ್ನೇ ಬಲಿಕೊಟ್ಟಿದ್ದಾಳೆ. ಏಳು ವರ್ಷದ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (chikodi) ತಾಲೂಕಿನ ಕರೋಶಿ ಗ್ರಾಮದ ಜಾವೇದ್ ಮುಲ್ಲಾ ಅನ್ನೋರ ಜತೆಗೆ ಮದುವೆ ಆಗಿದೆ. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು.

ಈ ದಂಪತಿಗೆ ಎರಡು ಮುದ್ದಾದ ಮಕ್ಕಳು ಕೂಡ ಇದ್ದು ಹೇಗೋ ಜೀವನ ನಡೆಯುತ್ತಿತ್ತು. ಲಾರಿ ಓಡಿಸಿಕೊಂಡಿದ್ದ ಜಾವೇದ್ ಕೆಲ ದಿನಗಳಿಂದ ಹಣಕ್ಕಾಗಿ ಹೆಂಡತಿಯನ್ನ ಪೀಡಿಸಲಾರಂಭಿಸಿದ್ದ. 10 ದಿನಗಳ ಹಿಂದೆ ಹೆಂಡತಿ ಜುವೇರಿಯಾ ತವರು ಮನೆಗೆ ಹೋಗಿದ್ದಳು. ಅಲ್ಲಿಗೆ ಹೋದ ಜಾವೇದ್ ಅಂದು ರಾತ್ರಿ ಕುಡಿದು ಹಣಕ್ಕಾಗಿ ಜಗಳ ಮಾಡಿದ್ದ, 20,000 ಹಣ ಬೇಕು ಅಂತಾ ಕೇಳಿದ್ದ. ಈಗ ಹಣವಿಲ್ಲ ಅಂತಾ ಹೇಳಿದ್ದಕ್ಕೆ ಅಂದು ರಾತ್ರಿಯೇ ಜಗಳವಾಡಿಕೊಂಡು ಹೆಂಡತಿಯನ್ನ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಹೀಗೆ ಬಂದ ಹತ್ತೇ ದಿನದಲ್ಲಿ ಮಗಳು ಸಾವನ್ನಪ್ಪಿದ್ದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ. ಗಂಡ ಜಾವೇದ್ ಮತ್ತು ಆತನ ತಂದೆ ಸೇರಿಕೊಂಡು ಮಗಳನ್ನ ಹೊಡೆದು ಕೊಂದಿದ್ದಾರೆ ಅಂತಾ ಜುವೇರಿಯಾ ಕುಟುಂಬಸ್ಥರು ಆರೋಪ ಮಾಡ್ತಿದ್ದು ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದಾರೆ.

ಇಲ್ಲಿ ಜಾವೇದ್ ಡ್ರೈವರ್ ಅಂದಾಗಲೇ ಜುವೇರಿಯಾ ದೊಡ್ಡಪ್ಪ ಅಂದು ಮದುವೆಗೆ ವಿರೋಧ ಮಾಡಿದ್ದರು. ಆದ್ರೇ ಎರಡು ಎಕರೆ ಜಮೀನಿದೆ ಅನ್ನೋ ಕಾರಣಕ್ಕೆ ಜುವೇರಿಯಾ ತಂದೆ ಮನೆಯವರ ವಿರೋಧದ ನಡುವೆ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಮೇಲೆ ಕುಡಿದು ಬಂದು ಆಗಾಗ ಹೆಂಡತಿ ಜತೆಗೆ ಗಲಾಟೆ ಮಾಡಿಕೊಳ್ತಿದ್ದ. ಮೊನ್ನೆ ಊರಿಂದ ಬಂದ ಬಳಿಕ ಗಂಡನ ಕಿರುಕುಳ ಜಾಸ್ತಿಯಾಗಿದೆ. ಮೊನ್ನೆ ರಾತ್ರಿ ಆಸ್ಪತ್ರೆಯಿಂದ ಜಾವೇದ್ ಪೋನ್ ಕರೆ ಮಾಡಿ ನಿಮ್ಮ ಮಗಳಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರು; ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು, ಮಾಲೀಕ ಸೇರಿ ಇಬ್ಬರಿಗೆ ಗಾಯ

ಓಡೋಡಿ ಬಂದು ನೋಡುವಷ್ಟರಲ್ಲಿ ವೈದ್ಯರು ಸಾವನ್ನಪ್ಪಿದ್ದಾಳೆ ಅಂತಾ ಹೇಳಿದ್ದಾರೆ. ಶಾಕ್ ಆದ ಜುವೇರಿಯಾ ಕುಟುಂಬಸ್ಥರು ಶವದ ಬಳಿ ಹೋಗಿ ನೋಡಿ ಕತ್ತಿನ ಬಳಿ ಹಾಗೂ ಹೊಟ್ಟೆ ಭಾಗದ ಬಳಿ ಕಪ್ಪು ಕಲೆಗಳು ಮೂಡಿದ್ದನ್ನ ಗಮನಿಸಿದ್ದಾರೆ. ಇದು ಸಹಜ ಸಾವು ಅಲ್ಲ, ಬದಲಿಗೆ ಗಂಡ ಮತ್ತು ಮಾವ ಹೊಡೆದು ಕೊಲೆ ಮಾಡಿದ್ದಾರೆ ಅಂತಾ ಸಂಶಯ ಬಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಅಷ್ಟೊತ್ತಿಗಾಗಲೇ ಗಂಡ ಜಾವೇದ್ ಮತ್ತು ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಇತ್ತ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಇನ್ನೊಂದು ಕಡೆ ಮರಣೋತ್ತರ ಪರೀಕ್ಷೆ ವರದಿ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಒಟ್ಟಿನಲ್ಲಿ ಎರಡು ಮಕ್ಕಳ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಕರೆದ ಗಂಡ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿವೆ. ಇನ್ನೊಂದು ಕಡೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದು ನಿಜಕ್ಕೂ ಕೊಲೆ ಮಾಡಿದ್ರಾ ಅಥವಾ ಗಂಡನ ಕಿರುಕುಳಕ್ಕೆ ಹೆಂಡತಿಯೇ ಆತ್ಮಹತ್ಯೆ ಮಾಡಿಕೊಂಡ್ಲಾ ಅನ್ನೋ ಆಯಾಮದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಆದ್ರೇ ಅಮ್ಮನ ಕಳೆದುಕೊಂಡ ಮಕ್ಕಳು ಮಾತ್ರ ಅನಾಥವಾಗಿದ್ದು ವಿಪರ್ಯಾಸದ ಸಂಗತಿ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:22 pm, Thu, 14 March 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ