ಸಿಂಹ, ಚಿರತೆ, ಹುಲಿಗಳನ್ನು ಬಿಗ್ ಕ್ಯಾಟ್ಸ್ (big cats) ಎಂದು ಕರೆಯುವ ಸಂಗತಿ ನಿಮಗೆ ಗೊತ್ತಿರಬಹುದು. ಅಂದರೆ, ದೊಡ್ಡ ದೊಡ್ಡ ಬೆಕ್ಕುಗಳು. ಹಳ್ಳಿಗಳಲ್ಲಿ, ಬೆಕ್ಕನ್ನು ಸಿಂಹದ ಚಿಕ್ಕಮ್ಮ ಎಂಬ ಕಥೆಯೂ (legend) ಪ್ರಚಲಿತವಾಗಿದೆ. ಬೆಕ್ಕು ಸಿಂಹಕ್ಕೆ ಬದುಕಿನ ಎಲ್ಲ ವಿದ್ಯೆಗಳನ್ನು ಕಲಿಸಿತಂತೆ. ಹೀಗಿರುವಾಗ ಒಂದು ದಿನ ಸಿಂಹ ಬೆಕ್ಕಿನ ಮೇಲೆ ದಾಳಿ ಮಾಡಿದಾಗ ಅದು ಮರವೇರಿ ಕುಳಿತು ಬಿಡುತ್ತದೆ. ಆದರೆ ಸಿಂಹಕ್ಕೆ ಮರವೇರಲು ಬಾರದು. ಮರವನ್ನು ಹತ್ತಿದ ನಂತರ ಬೆಕ್ಕು ಸಿಂಹಕ್ಕೆ ಹೇಳುತ್ತದೆ, ‘ಮಗಾ, ನಾನು ನಿನಗೆ ಮರ ಹತ್ತುವುದನ್ನೂ ಕಲಿಸಿದ್ದರೆ, ನೀನು ನನ್ನನ್ನು ಯಾವತ್ತೋ ಕೊಂದು ನನ್ನ ಸಂತಾನವನ್ನು ಅವನತಿಗೆ ದೂಡಿರುತ್ತಿದ್ದೆ’.
ಈ ಕತೆ ನೆನಪಾಗಿದ್ದು ಯಾಕೆಂದರೆ, ಇಲ್ಲೊಬ್ಬ ವ್ಯಕ್ತಿ ಸಿಂಹವನ್ನು ಬೆಕ್ಕಿನಂತೆ ಗೋಳು ಹೊಯ್ದುಕೊಳ್ಳುತ್ತಿದ್ದಾನೆ. ಕಾಡಿನ ರಾಜ ಯಕಶ್ಚಿತ್ ಒಬ್ಬ ವ್ಯಕ್ತಿಯ ಎದುರು ಬೆಕ್ಕಿನಂತಾಡುತ್ತಿದೆ!
No matter what the size, cats are cats…?? pic.twitter.com/qGSF81MeRj
— ?o̴g̴ (@Yoda4ever) June 5, 2022
ಈ ವೀಡಿಯೊವನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೋಡಿದವರು, ಈ ಅಪಾಯಕಾರಿ ಪ್ರಾಣಿಯ ಜೊತೆ ವ್ಯಕ್ತಿಯ ಹಾಗೆ ಆಟವಾಡುತ್ತಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ‘ಸಿಂಹದೊಂದಿಗೆ ಇಂಥ ಆಟವೇ?’ ಅಂತ ಒಬ್ಬರು ಉದ್ಗರಿಸಿದರೆ, ಮತ್ತೊಬ್ಬರು, ‘ಬೆಕ್ಕು ಕೂಡ ಅವರೊಂದಿಗೆ ಅದೇ ರೀತಿಯಲ್ಲಿ ಆಡುತ್ತದೆಯೇ,’ ಎಂದು ಕೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.