ದೈಹಿಕ ಕಸರತ್ತಿನಲ್ಲಿ ತೊಡಗಿರುವ ಚೀನೀ ಪುಟಾಣಿಗಳ ನಡುವಿನ ಸಮನ್ವಯತೆ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ!
ಮಕ್ಕಳು ಬಾಲುಗಳನ್ನು ತಮ್ಮ ಎರಡು ಕೈಗಳಿಂದ ನೆಲಕ್ಕೆ ತಾಕಿಸಿ ಪುಟಿಸುವುದರ ಜೊತೆಗೆ ತಮ್ಮ ಕಾಲುಗಳಿಗೆ ಕಸರತ್ತು ನೀಡುತ್ತಾ ದೇಹಗಳನ್ನು ಪರಿಪಕ್ವವೆನಿಸುವ ಸಮನ್ವಯತೆಯೊಂದಿಗೆ ದೇಹಗಳನ್ನು ಮೂವ್ ಮಾಡುತ್ತಾರೆ.
ದೈಹಿಕ ಶಿಕ್ಷಣ ತರಬೇತಿಯಲ್ಲಿ ತೊಡಗಿರುವ ಚೀನಾದ ಚಿಕ್ಕ ಚಿಕ್ಕ ಮಕ್ಕಳ ಗುಂಪೊಂದು ಅಮೋಘವಾದ ಸಮನ್ವಯತೆಯೊಂದಿಗೆ ಕಸರತ್ತು ಮಾಡುತ್ತಿರುವುದನ್ನಿ ತೋರಿಸುವ ವಿಡಿಯೊವೊಂದು ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ ಮಾರಾಯ್ರೇ. ನಾರ್ವೇ (Norway) ದೇಶದ ರಾಜತಾಂತ್ರಿಕ ಎರಿಕ್ ಸೊಲ್ಹೀಮ್ (Eric Solheim) ಅವರು ಸೋಶಿಯಲ್ ಮಿಡಿಯಾನಲ್ಲಿ ಶೇರ್ ಮಾಡಿರುವ ವಿಡಿಯೋನಲ್ಲಿ ಚೀನಿ ಮಕ್ಕಳ (Chinese toddlers) ಗುಂಪು ದೈಹಿಕ ಕಸರತ್ತಿನಲ್ಲಿ ತಮ್ಮ ಅಸಾಧಾರಾಣ ಸಾಮರ್ಥ್ಯ ಪ್ರದರ್ಶಿಸುತ್ತಿರುವುದನ್ನು ನೋಡಬಹುದು.
ಬಯಲು ಪ್ರದೇಶವೊಂದರಲ್ಲಿ ಕುಳಿತಿರುವ 5-6 ವರ್ಷ ಪ್ರಾಯದವರಾಗಿರಬಹುದಾದ ಮಕ್ಕಳು ತಮ್ಮ ಕೈಯಲ್ಲಿರುವ ಬಾಸ್ಕೆಟ್ ಬಾಲುಗಳನ್ನು ಪುಟಿಸುತ್ತಾ ಅದ್ಭುತವೆನಿಸುವ ಸಂಯೋಜನೆಯೊಂದಿಗೆ ಚಲಿಸುತ್ತಾರೆ. ಮನಸ್ಸಿಗೆ ಮುದ ನೀಡುವ ವಿಡಿಯೋವನ್ನು ಶೇರ್ ಮಾಡುತ್ತಾ, ಸೊಲ್ಹೀಮ್ ಅವರು, ‘ವ್ಹಾವ್! ಕಿಂಡರ್ಗಾಟನ್ ಮಕ್ಕಳ ದೈಹಿಕ ಶಿಕ್ಷಣ,’ ಅಂತ ಬರೆದಿದ್ದಾರೆ.
WOW!Physical education class of kindergarten. ???@lsjngs
— Erik Solheim (@ErikSolheim) June 5, 2022
ವಿಡಿಯೋವನ್ನು ನೋಡಿ ಮಾರಾಯ್ರೇ. ಮಕ್ಕಳು ಬಾಲುಗಳನ್ನು ತಮ್ಮ ಎರಡು ಕೈಗಳಿಂದ ನೆಲಕ್ಕೆ ತಾಕಿಸಿ ಪುಟಿಸುವುದರ ಜೊತೆಗೆ ತಮ್ಮ ಕಾಲುಗಳಿಗೆ ಕಸರತ್ತು ನೀಡುತ್ತಾ ದೇಹಗಳನ್ನು ಪರಿಪಕ್ವವೆನಿಸುವ ಸಮನ್ವಯತೆಯೊಂದಿಗೆ ದೇಹಗಳನ್ನು ಮೂವ್ ಮಾಡುತ್ತಾರೆ. ಹಾಗೆಯೇ, ಕಾಲುಗಳನ್ನು ಒಂದು ಪಕ್ಕದಿಂದ ಮತ್ತೊಂದು ಪಕ್ಕಕ್ಕೆ ತಿರುಗಿಸುತ್ತಾ ಬಾಸ್ಕೆಟ್ ಬಾಲ್ ಗಳನ್ನು ಪುಟಿಸುವುದು ಮುಂದುವರಿಸುತ್ತಾರೆ. 15 ಸೆಕೆಂಡುಗಳ ವಿಡಿಯೋದ ಅಂತಿಮ ಭಾಗದಲ್ಲಿ ಅವರು ಚೆಂಡುಗಳನ್ನ ಪುಟಿಸುತ್ತಲೇ ಎರಡೂ ಕಾಲುಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದಾಗಿನಿಂದ ಸಂಚಲನ ಸೃಷ್ಟಿಸಿದೆ. ಟ್ವಿಟ್ಟರ್ ಬಳಕೆದಾರರು ಅದನ್ನು ನೋಡಿ ವಿಸ್ಮಯಗೊಂಡಿದ್ದಾರೆ. ಒಬ್ಬ ಬಳಕೆದಾರ ಈ ಮಕ್ಕಳನ್ನು ‘ಪುಟಾಣಿ ನಿಂಜಾ’ಗಳೆಂದು ಕರೆದರೆ ಮತ್ತೊಬ್ಬರು ‘ಅಪ್ಪಟ ಮತ್ತು ಶ್ರೀಮಂತ ಪ್ರತಿಭೆಯ’ ಮಕ್ಕಳು ಎಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.