‘ಗೇರ್ ಬದಲಾಯಿಸುವ ರೀತಿಗೆ ಫಿದಾ ಆದೆ’ ಪಾಕಿಸ್ತಾನಿ ಡ್ರೈವರ್​ನನ್ನು ಮದುವೆಯಾದ 17ರ ಹುಡುಗಿ

| Updated By: ಶ್ರೀದೇವಿ ಕಳಸದ

Updated on: Nov 05, 2022 | 2:20 PM

Marriage : ಹೋಗಿದ್ದು ಕಾರು ಕಲಿಯಲು. ಆಗಿದ್ದು ಮದುವೆ. ನೀನು ಶ್ರೀಮಂತರ ಒಬ್ಬಳೇ ಮಗಳು, ನಾನೊಬ್ಬ ಸಾಮಾನ್ಯವಾದ ಡ್ರೈವರ್ ಹಾಗಾಗಿ ಬೇಡ ಎನ್ನುತ್ತಾನೆ ಹುಡುಗ. ಹುಡುಗಿ ಕೇಳುವುದಿಲ್ಲ. ಆಸಕ್ತಿಕರವಾದ ಇವರಿಬ್ಬರ ಈ ಸಂದರ್ಶನ ನೋಡಿ.   

‘ಗೇರ್ ಬದಲಾಯಿಸುವ ರೀತಿಗೆ ಫಿದಾ ಆದೆ’ ಪಾಕಿಸ್ತಾನಿ ಡ್ರೈವರ್​ನನ್ನು ಮದುವೆಯಾದ 17ರ ಹುಡುಗಿ
This Pakistan teen fell in love with her drivers gear changing style So she married him
Follow us on

Viral : ಯಾರ್ಯಾರು ಯಾವೆಲ್ಲ ಕಾರಣಗಳಿಗೆ ಮನಸೋಲುತ್ತಾರೆ ಎನ್ನುವುದಕ್ಕೆ ಒಂದಿಷ್ಟು ಸಾಮಾನ್ಯ ಕಾರಣಗಳು ಎಲ್ಲರಿಗೂ ಗೊತ್ತಿರುವಂಥವೇ. ಆದರೆ ಇದು!? ಸ್ವಲ್ಪ ತಮಾಷೆ ಎನ್ನಿಸಿದರೂ ವಾಸ್ತವದಲ್ಲಿ ನಿಜ. ಪಾಕಿಸ್ತಾನದ ಈ ಹುಡುಗಿಗೆ ಇನ್ನೂ 17. ಕಾರ್ ಕಲಿಯಲೆಂದು ಹೋಗಿದ್ದಾಳೆ. ಆದರೆ 21 ವರ್ಷದ ಡ್ರೈವರ್​ಗೆ ಮನಸೋತಿದ್ದಾಳೆ. ಇವರು ಗೇರ್ ಬದಲಾಯಿಸುವ ರೀತಿ ಬಹಳ ಇಷ್ಟವಾಯಿತು. ಹಾಗಾಗಿ ಇವರೂ ಇಷ್ಟವಾದರು ಎಂದಿದ್ದಾಳೆ ಈ ಹುಡುಗಿ.  ನಿರೂಪಕನೊಂದಿಗೆ ತೆರೆದ ಮನಸ್ಸಿನಿಂದ ಈ ಜೋಡಿ ಮಾತಾಡಿದ್ದು ಬಹಳ ಆಸಕ್ತಿಕರವಾಗಿದೆ.

ಡೈಲಿ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನವಿದು. ತಮ್ಮ ಪ್ರೇಮ ಹೇಗೆ ಶುರುವಾಯಿತು ಎನ್ನುವುದನ್ನು ಈ ದಂಪತಿ ಇಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಹೆಸರು ಖತೀಜಾ. ಮಗಳಿಗೆ ಡ್ರೈವಿಂಗ್ ಕಲಿಸಿಕೊಡಲು ಈತನನ್ನು ನೇಮಿಸುತ್ತಾರೆ ಈಕೆಯ ತಂದೆ. ಆದರೆ ಈ ಹುಡುಗಿ ಡ್ರೈವರ್​ನೆಡೆ ಆಕರ್ಷಿತಳಾಗಿಬಿಡುತ್ತಾಳೆ. ಒಂದು ದಿನ ಪ್ರೇಮ ನಿವೇದನೆಯನ್ನೂ ಮಾಡಿಕೊಳ್ಳುತ್ತಾಳೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ದಿನವೂ ಕಾರಿನ ಗೇರು ಹಾಕುವ ಇವರ ಕೈಯನ್ನೇ ಗಮನಿಸುತ್ತಿದ್ದೆ. ಆ ಸ್ಟೈಲ್​ಗೆ ಮಾರುಹೋಗಿ ಕೈ ಹಿಡಿಯಬೇಕು ಅನ್ನಿಸುತ್ತಿತ್ತು. ಹೀಗೆ ಶಾಶ್ವತವಾಗಿ ಕೈ ಹಿಡಿದುಬಿಟ್ಟೆ! ಆದರೆ ನಾನು ಡ್ರೈವಿಂಗ್ ಕಲಿಯಲೇ ಇಲ್ಲ’ ಎನ್ನುತ್ತಾಳೆ.

ಆದರೆ ಈಕೆ ಪ್ರೇಮನಿವೇದನೆ ಮಾಡಿಕೊಂಡಾಗ ಹುಡುಗ ಗಡಗಡ ನಡುಗಿ ಹೋಗಿದ್ದು ನಿಜ. ‘ಬೇಡ ಬೇಡ. ನನ್ನ ಬಗ್ಗೆ ಅಂಕಲ್​ ಏನು ತಿಳಿದುಕೊಳ್ಳುತ್ತಾರೆ? ನಾನು ಸಾಮಾನ್ಯವಾದ ಡ್ರೈವರ್, ನೀನು ಶ್ರೀಮಂತರ ಒಬ್ಬಳೇ ಮಗಳು’ ಎನ್ನುತ್ತಾನೆ.

ಆದರೂ ಆಕೆ ಕೇಳುವುದಿಲ್ಲ. ತಂದೆಗೆ ತನ್ನ ಪ್ರೇಮದ ಬಗ್ಗೆ ಹೇಳುತ್ತಾಳೆ. ಅವರು ಒಪ್ಪದಾದಾಗ ಊಟ, ತಿಂಡಿ, ನಿದ್ದೆ ನೀರಡಿಕೆ ಎಲ್ಲ ಬಿಟ್ಟು ಅತ್ತು ಹಟ ಮಾಡುತ್ತಾಳೆ. ಇತ್ತ ಹುಡುಗ, ಅವಳ ತಂದೆ ಒಪ್ಪದಿದ್ದರೆ ಏನು ಗತಿ? ಮೊದಲ ಸಲ ನನಗೆ ಹುಡುಗಿಯೊಬ್ಬಳು ಪ್ರೊಪೋಸ್ ಮಾಡಿದ್ದಾಳೆ. ಈಗ ಅವರು ಒಪ್ಪದಿದ್ದರೆ ನನ್ನ ಕೆಲಸವೂ ಹೋಗುತ್ತದೆ. ಹುಡುಗಿಯೂ ಹೋಗುತ್ತಾಳೆ ಎಂದು ಚಿಂತಿತನಾಗುತ್ತಾನೆ.

ಹುಡುಗನಿಗೆ ಇರುವುದು ಬರೀ ರೂ. 20,000. ಬಹುಶಃ ಇದು ನೀವು ಗೋಲ್​ಗಪ್ಪೆ ತಿನ್ನಲೂ ಸಾಕಾಗುವುದಿಲ್ಲವೇನೋ ಎಂದು ನಿರೂಪಕ ತಮಾಷೆ ಮಾಡುತ್ತಾನೆ. ಆಗ ಆಕೆ, ‘ಮೊದಲ ಸಲ ಇವರನ್ನು ನೋಡಿದಾಗ, ಡ್ರೈವರ್​ನಂತೆ ಅನ್ನಿಸಲೇ ಇಲ್ಲ. ಇವರ ವ್ಯಕ್ತಿತ್ವ ಡ್ರೈವರ್​ಗೆ ಮಾತ್ರ ಸೀಮಿತವಾಗಿಲ್ಲ ಎನ್ನಿಸಿತು. ಈವತ್ತು ಡ್ರೈವರ್ ಇರಬಹುದು. ನಾಳೆ ಪ್ರಯತ್ನಪಟ್ಟರೆ ಬದುಕು ಬದಲಾಗುತ್ತದೆ, ಆ ವಿಶ್ವಾಸ ನನಗಿದೆ. ಜೀವನದಲ್ಲಿ ಹಣ ಬರುತ್ತದೆ ಹೋಗುತ್ತದೆ. ಅದು ಮುಖ್ಯವಲ್ಲ ಪ್ರೀತಿ ಮುಖ್ಯ. ಈಗಾಗಲೇ ನಮಗಾಗಿ ನನ್ನ ತಂದೆ ದೊಡ್ಡ ಕಾರನ್ನೂ ಉಡುಗೊರೆಯಾಗಿ ನೀಡಿದ್ಧಾರೆ’ ಎನ್ನುತ್ತಾಳೆ.

ನಿಮಗೆ ಇಷ್ಟವಾದ ಹಾಡು ಯಾವುದು ಎಂದು ನಿರೂಪಕ ಕೇಳಿದಾಗ, 1973 ರಲ್ಲಿ ತೆರೆಕಂಡ ಬಾಬಿ ಸಿನೆಮಾದ ಹಾಡನ್ನು ಹಾಡುತ್ತಾಳೆ. ‘ಹಮ್ ತುಮ್ ಏಕ್ ಕಮರೇ ಮೇ ಬಂದ ಹೋ ಔರ್ ಚಾವೀ ಖೋ ಜಾಯೆ’

ಏನಂತೀರಿ ನೀವು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:20 pm, Sat, 5 November 22