ಮಗಳಿಗೆ ಕಿಡ್ನಿ ಕೊಟ್ಟಿದ್ದಕ್ಕಾಗಿ ಧನ್ಯವಾದ; ದಾನಿಯ ಹೆಸರನ್ನು ಕಾರಿನ ಹಿಂದೆ ಪ್ರದರ್ಶಿಸಿ ಧನ್ಯತೆ ಅರ್ಪಿಸಿದ ತಂದೆ

| Updated By: ಶ್ರೀದೇವಿ ಕಳಸದ

Updated on: Nov 16, 2022 | 12:32 PM

Kidney Donor : ಅಪರಿಚಿತರೊಬ್ಬರು ತನ್ನ ಮಗಳಿಗೆ ಕಿಡ್ನಿ ದಾನ ಮಾಡಿದಾಗ ಅವರಿಗೆ ಹೇಗೆ ಕೃತಜ್ಞತೆ ಅರ್ಪಿಸಬೇಕು? ತಂದೆಯೊಬ್ಬರ ಈ ಆಪ್ತ ಮತ್ತು ವಿಶೇಷ ರೀತಿ ಎಷ್ಟೊಂದು ಹೃದಯಸ್ಪರ್ಶಿಯಾಗಿದೆ ನೋಡಿ.

ಮಗಳಿಗೆ ಕಿಡ್ನಿ ಕೊಟ್ಟಿದ್ದಕ್ಕಾಗಿ ಧನ್ಯವಾದ; ದಾನಿಯ ಹೆಸರನ್ನು ಕಾರಿನ ಹಿಂದೆ ಪ್ರದರ್ಶಿಸಿ ಧನ್ಯತೆ ಅರ್ಪಿಸಿದ ತಂದೆ
This person's gesture to thank daughter's kidney donor is wholesome
Follow us on

Viral Video : ಸಹಾಯ ಎನ್ನುವುದು ಯಾವಾಗಲೂ ಸ್ವತಹಿತವನ್ನು ಒಳಗೊಂಡಿರುವುದೇ ಇಲ್ಲ. ಪರರ ಹಿತದಲ್ಲಿಯೇ ಸುಖ ಕಾಣುವ ಸಮಾಧಾನಚಿತ್ತ ಮನಸ್ಥಿತಿ ಅದು. ಇಲ್ಲೊಬ್ಬ ತಂದೆ ತನ್ನ ಮಗಳಿಗೆ ಕಿಡ್ನಿ ಅವಶ್ಯಕತೆ ಇದೆ ಎಂದು ತನ್ನ ಕಾರಿನ ಹಿಂದೆ ಸ್ಟಿಕರ್ ಹಾಕಿದ್ದನೆನ್ನಿಸುತ್ತದೆ. ಇದನ್ನು ಗಮನಿಸಿದ ಯಾರೋ ಒಬ್ಬರು ತಮ್ಮ ಕಿಡ್ನಿ ದಾನ ಮಾಡಿದ್ಧಾರೆ. ಆನಂತರ ಅವರಿಗೆ ಕೃತಜ್ಞತೆ ತಿಳಿಸಲು ಮತ್ತೊಂದು ಸ್ಟಿಕರ್​ ಮೂಲಕ ಅವರ ಹೆಸರನ್ನು ಕಾರಿನ ಹಿಂದೆ ಅಂಟಿಸಿದ್ದಾನೆ ಈ ತಂದೆ. ಹೃದಯಸ್ಪರ್ಶಿಯಾದ ಈ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ.

ಸಹಾಯವನ್ನು ಎಲ್ಲರೂ ಮಾಡಲಿಚ್ಛಿಸುತ್ತಾರೆ. ಆದರೆ ಅಪರಿಚಿತರಿಗೆ? ಅಪರಿಚಿತರಗೆ ಸಹಾಯ ಮಾಡಬೇಕೆಂದರೆ ಅತ್ಯಂತ ನಿಸ್ವಾರ್ಥ ಮನಸ್ಥಿತಿ ಇರಬೇಕು. ಕರುಣೆ ದಯೆಯಿಂದ ಕೂಡಿರಬೇಕು. ಅಂಥ ವ್ಯಕ್ತಿಯೇ ಈ ತಂದೆಮಗಳಿಗೆ ಸಿಕ್ಕಹಾಗಿದೆ. ಈ ಅಪ್ರತಿಮ ಸಹಾಯವನ್ನು ನೆನೆಯುವುದು ಹೇಗೆ ಎಂದು ಯೋಚಿಸಿದ ತಂದೆ ಹೀಗೆ ಕಾರಿನ ಹಿಂದೆ ದಾನಿಯ ಹೆಸರನ್ನು ಸ್ಟಿಕರ್ ಮೂಲಕ ಅಂಟಿಸಿದ್ದಾರೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

@DudespostingWs ಟ್ವಿಟರ್​ನಲ್ಲಿ ಹಂಚಿಕೊಂಡ ನಂತರ ಇದು ವೈರಲ್ ಆಗುತ್ತಿದೆ. ಎರಡು ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 202 ಜನರು ಪ್ರತಿಕ್ರಿಯಿಸಿದ್ದಾರೆ. ಅತ್ಯಂತ ಶ್ಲಾಘನೀಯವಿದು. ಅಪರಿಚಿತರಿಗೆ ಹೀಗೆ ಸಹಾಯ ಮಾಡುವ ನಿರ್ಧಾರ ಮಾಡುವುದು ತುಂಬಾ ಕಷ್ಟದ್ದು ಎಂದಿದ್ಧಾರೆ ಒಬ್ಬರು. ತನ್ನ ಒಂದು ಅಂಗವನ್ನೇ ಯಾರಿಗೋ ದಾನ ಮಾಡುವುದೆಂದರೆ ಇದಕ್ಕಿಂತ ಶ್ರೇಷ್ಠ ಮಾನವೀಯತೆ ಇನ್ನೊಂದಿಲ್ಲ ಎಂದಿದ್ದಾರೆ ಮತ್ತೊಬ್ಬರು. ತನ್ನ ಕಿಡ್ನಿಯನ್ನು ದಾನ ಮಾಡಿದ ಈ ವ್ಯಕ್ತಿಯ ವಯಸ್ಸು ಕೇವಲ 20 ಎಂದು ಹೇಳಿದ್ಧಾರೆ ಮಗದೊಬ್ಬರು. ನನಗೆ ನನ್ನ ತಾಯಿಯೇ ಕಿಡ್ನಿ ದಾನ ಮಾಡಿದ್ದಾರೆ. ಈಗ ಈ ವಿಷಯ ಇನ್ನೂ ಹೃದಯಕ್ಕೆ ಹತ್ತಿರವಾಗಿದೆ ಎಂದಿದ್ದಾರೆ ಹೀಗೇ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:32 pm, Wed, 16 November 22