ಯಾವುದೇ ಪ್ರಾಣಿಯ ಮರಿಯಾದರೂ ಸರಿ, ಆ ಪುಟ್ಟ ಪುಟ್ಟ ಮುಗ್ಧ ಜೀವಿಗಳು ಯಾವಾಗಲೂ ತುಂಟಾಟವಾಡುತ್ತಾ ಇರುತ್ತವೆ. ಇವುಗಳ ತುಂಟಾಟ ನೋಡುವುದೇ ಒಂದು ಮಜಾ. ಮೂಕ ಪ್ರಾಣಿಗಳ ಮುಗ್ಧತೆಯ ಆಟ, ಓಟ ಮನಸ್ಸಿಗೆ ಒಂದು ರೀತಿಯ ಮುದ ನೀಡುತ್ತದೆ. ಅದರಲ್ಲೂ ಈ ಮುದ್ದಾದ ಮರಿ ಆನೆಗಳ ತುಂಟಾಟವನ್ನು ನೋಡುವುದೇ ಒಂದು ಚೆಂದ. ಸದ್ಯ ಅಂತಹದ್ದೊಂದು ಮುದ್ದಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮರಿ ಆನೆಯೊಂದು ಅಮ್ಮಾ ಎಲ್ಲಿದ್ದೀಯಾ ಎನ್ನುತ್ತಾ, ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ತನ್ನ ತಾಯಿಯ ಬಳಿ ಓಡಿ ಹೋಗಿದೆ. ಈ ಮುದ್ದಾದ ದೃಶ್ಯ ನೋಡುಗರ ಮನ ಸೆಳೆದಿದೆ.
ಈ ದೃಶ್ಯವನ್ನು ಕೀನ್ಯಾದ ಅಂಬೋಸೆಲಿ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಛಾಯಗ್ರಾಹಕ ಫಿಲಿಪ್ ಅವರು ಸೆರೆ ಹಿಡಿದಿದ್ದಾರೆ. ಮತ್ತು ಈ ವಿಡಿಯೋವನ್ನು ಅವರು (@sightingsbyphil) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಎಮ್ಮೆಗಳ ಕೊಟ್ಟಿಗೆಗೆ AC ಹಾಕಿಸಿದ ರೈತ; ವಿಡಿಯೋ ವೈರಲ್
ವೈರಲ್ ವಿಡಿಯೋದಲ್ಲಿ ಮರಿ ಆನೆಯೊಂದು ಅಮ್ಮಾ ಎಲ್ಲಿದ್ದೀಯಾ, ನಾನ್ ಬರ್ತಿದ್ದೀನಿ ಎನ್ನುತ್ತಾ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ತಾಯಿಯ ಬಳಿ ಕಂದಮ್ಮ ಖುಷಿಯಿಂದ ಓಡೋಡಿ ಬರುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಏಪ್ರಿಲ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಐದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಪುಟಾಣಿ ಆನೆಯ ಮುದ್ದಾದ ವಿಡಿಯೋವನ್ನು ಕಂಡು ನೆಟ್ಟಿಗರಂತೂ ಫುಲ್ ಖುಷ್ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ