Viral Video : ವ್ಯಾನಿನಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿದ ಯುವಕರು, ಇದು ಸೆಖೆಗೆ ಒಳ್ಳೆಯದು
ಸುಡು ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಕೆಲವೆಡೆ ವರುಣ ಕೃಪೆ ತೋರಿಸಿದ್ದಾನೆ. ಆದರೆ ಕೆಲವರಂತು ಈ ಸೆಕೆಯಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಐಡಿಯಾಗಳನ್ನು ಮಾಡುತ್ತಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಯುವಕರು ಹಳೆಯ ಪಿಕಪ್ ವ್ಯಾನ್‌ನ ಹಿಂಭಾಗದಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಿಸಿ ಪೂಲ್ ಪಾರ್ಟಿ ಮಾಡುತ್ತಿದ್ದಾರೆ. ಯುವಕರ ಈ ಜುಗಾಡ್ ಐಡಿಯಾಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.
ನಮ್ಮಲ್ಲಿ ಹೊಸ ಹೊಸ ಪ್ರತಿಭೆಗಳು ತಮ್ಮ ವಿಭಿನ್ನವಾದ ಐಡಿಯಾದ ಮೂಲಕವೇ ಸುದ್ದಿಯಾಗುತ್ತಿರುತ್ತಾರೆ. ವಿಭಿನ್ನ ಶೈಲಿಯ ದೇಸಿ ಉಪಾಯಗಳ ಮೂಲಕ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವವರಿಗೇನು ಕೊರತೆಯಿಲ್ಲ. ಸದ್ಯಕ್ಕೆ ಬಿಸಿಲಿನ ಝಳವು ಜೋರಾಗಿದೆ. ಬಿಸಿಲಿನಿಂದ ಮುಕ್ತಿ ಪಡೆಯಲು ಎಲ್ಲರೂ ಒಂದಷ್ಟು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಮನೆಗೆ ಎಸಿ ಅಳವಡಿಸಿದರೆ, ಕೆಲವರು ಕೂಲರ್ ಅಳವಡಿಸಿಕೊಳ್ಳುತ್ತಾರೆ.
ಆದರೆ ಇಲ್ಲೊಂದು ಕಡೆ ಮೂವರು ಸ್ನೇಹಿತರು ಸೇರಿ ವ್ಯಾನ್ ನಲ್ಲಿ ಈಜುಕೊಳವನ್ನು ನಿರ್ಮಿಸಿಕೊಂಡಿದ್ದಾರೆ. ಹಳೆಯ ಪಿಕಪ್ ವ್ಯಾನ್‌ನ ಹಿಂಭಾಗದಲ್ಲಿ ಮೂವರು ಸ್ನೇಹಿತರು ಟಾರ್ಪಾಲಿನ್ ಹಾಕಿ, ನೀರು ತುಂಬಿಸಿ ಈಜು ಕೊಳ ಮಾಡಿಕೊಂಡಿರುವುದನ್ನು ಕಾಣಬಹುದು. ಅದಲ್ಲದೇ ಮಧ್ಯದಲ್ಲಿ ಕೊಡೆ ಹಾಗೂ ಟೇಬಲ್ ಇರಿಸಿಕೊಂಡು, ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೂವರು ಯುವಕರು ಪೂಲ್ ಪಾರ್ಟಿಯನ್ನು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Only Boys can create own happiness anywhere 😅😂
Enjoy summer 🌞🏖️ pic.twitter.com/U46qLlSTRB
— 𝐃𝐞𝐬𝐢 𝐏𝐚𝐧𝐝𝐚 🐼 (@The90sPanda) April 17, 2024
ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ X (ಹಿಂದಿನ Twitter) ನಲ್ಲಿ @The90sPanda ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ‘ಹುಡುಗರು ಮಾತ್ರ ಎಲ್ಲಿಯಾದರೂ ಸರಿಯೇ ತಮ್ಮದೇ ಆದ ಸಂತೋಷವನ್ನು ಸೃಷ್ಟಿಸಬಲ್ಲರು’ ಎಂದು ವೀಡಿಯೊಗೆ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ 30 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿಯ ಮೆಚ್ಚುಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ