ಹುಲಿಮರಿಯೊಂದಿಗೆ ಆಟವಾಡುತ್ತಿರುವ ಕೋತಿಮರಿ; ನೆಟ್ಟಿಗರ ಹೃದಯ ಬೆಚ್ಚಗೆ

Viral Video : ನಾನು ಯಾರು ಗೊತ್ತಲ್ಲ? ಅದೇ ನಾನು ಕೂಡ ಯಾರು ಗೊತ್ತಲ್ಲ? ‘ನಾನು’ ಎನ್ನುವುದು ಈ ಮರಿಗಳಲ್ಲಿ ಮೊಳೆಯದೇ ಇದ್ದಿದ್ದಕ್ಕೇ ಇವು ಹೀಗೆ ನಿರಾಯಾಸವಾಗಿ ಆಟವಾಡಿಕೊಂಡಿರುವುದು. ಅಪರೂಪದ ವಿಡಿಯೋ ನೋಡಿ.

ಹುಲಿಮರಿಯೊಂದಿಗೆ ಆಟವಾಡುತ್ತಿರುವ ಕೋತಿಮರಿ; ನೆಟ್ಟಿಗರ ಹೃದಯ ಬೆಚ್ಚಗೆ
ಹುಲಿಮರಿಯೊಂದಿಗೆ ಆಟವಾಡುತ್ತಿರುವ ಕೋತಿಮರಿ
Updated By: ಶ್ರೀದೇವಿ ಕಳಸದ

Updated on: Dec 05, 2022 | 2:44 PM

Viral Video : ಮನುಷ್ಯರಿಗಿಂತ ಜಾಸ್ತಿ ಪ್ರಾಣಿಗಳು ಆಟದಲ್ಲಿ ತಲ್ಲೀನವಾಗುತ್ತವೆ. ಅದರಲ್ಲೂ ಅನ್ಯವರ್ಗದ ಪ್ರಾಣಿಗಳೊಂದಿಗೆ ಹೀಗೆ ಸಲೀಸಾಗಿ ಆಟವಾಡುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮರಿಕೋತಿಯೊಂದು ಹುಲಿಮರಿಯೊಂದಿಗೆ ಆಟವಾಡುತ್ತಿದೆ. ಎಂಥ ತಮಾಷೆಯಾಗಿದೆಯಲ್ಲ ಈ ವಿಡಿಯೋ. ನಾನು ಹುಲಿ ಎಂಬ ಗರ್ವ ಅದಕ್ಕಿಲ್ಲ. ನಾನು ಕೋತಿ ಮರದ ಮೇಲೆಯೇ ಇರಬೇಕು ಎಂಬ ಪ್ರಜ್ಞೆ ಅದಕ್ಕಿಲ್ಲ. ಆಟಕ್ಕೆ ಮಹತ್ವ ಬರುವುದು ಹೀಗೆ ಮೈಮರೆತಾಗಲೇ.

 

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 

ಇನ್​ಸ್ಟಾಗ್ರಾಂನ ಟೈಗರ್ಸ್​ ವಿಡಿಯೋ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 3,000 ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಎಂಥ ಮುದ್ದಾಗಿದೆ ಮರಿಗಳು ಪರಸ್ಪರ ಆಡುವುದು ಎಂದಿದ್ದಾರೆ ಒಬ್ಬರು. ಇದು ಬಹಳ ಅಪೂರ್ವ ಮತ್ತು ಅಮೂಲ್ಯವಾದ ವಿಡಿಯೋ ಎಂದಿದ್ದಾರೆ ಮತ್ತೊಬ್ಬರು. ಎಂಥ ಬೆಚ್ಚಗಿನ ಭಾವ ಕೊಡುತ್ತಿದೆ ಈ ವಿಡಿಯೋ, ಪದಗಳಲ್ಲಿ ಇದನ್ನು ವರ್ಣಿಸಲು ಸಾಧ್ಯವಿಲ್ಲ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ನೋಡಿ : ‘ಫ್ರೀಡಾ’ ಎಂಬ ಕಾಡುಹಂದಿಮರಿಯನ್ನು ದತ್ತು ತೆಗೆದುಕೊಂಡಿರುವ ಹಸುಗಳು

ಈ ಹಿಂದೆ ಗೋರಿಲ್ಲಾ ಮರಿಯೊಂದಿಗೆ ಹುಲಿಮರಿಗಳು ಆಡುತ್ತಿದ್ದ ವಿಡಿಯೋ ನೋಡಿದ್ದೀರಿ. ನಾಯಿಯೊಂದು ಬೆಕ್ಕಿಗೆ ಹಾಲು ಕುಡಿಸುವ ವಿಡಿಯೋ ನೋಡಿದ್ದೀರಿ. ಕೋತಿ ಬಾತುಕೋಳಿಗಳ ಮರಿಗಳನ್ನು ನೋಡಿಕೊಳ್ಳುವ ವಿಡಿಯೋ ನೋಡಿದ್ದೀರಿ. ಹೀಗೆ ಅನ್ಯವರ್ಗದ ಪ್ರಾಣಿಗಳು ಎಷ್ಟು ಸೌಹಾರ್ದದಿಂದ ಇರುತ್ತವೆಯಲ್ಲವೆ? ಆದರೆ ಮನುಷ್ಯ ಯಾಕೆ ಹೀಗೆ?

ಇಂಥ ವಿಡಿಯೋಗಳನ್ನು ನೋಡಿದಾಗ ಜಗದ ಜಂಜಡಗಳು ಕ್ಷಣಹೊತ್ತಾದರೂ ಮರೆಯುವುದು ಖಂಡಿತ ಹೌದು. ಸೂಕ್ಷ್ಮ ಸಂವೇದನೆಯುಳ್ಳ ವ್ಯಕ್ತಿಗಳಿಗೆ ಮನುಷ್ಯರಿಗಿಂತ ಪ್ರಾಣಿ ಪಕ್ಷಿ ನಿಸರ್ಗವೇ ಹೆಚ್ಚು ಮುದ ಕೊಡುತ್ತದೆ ಎನ್ನುವಲ್ಲಿ ಅತಿಶಯೋಕ್ತಿ ಏನೂ ಇಲ್ಲ. ಹೌದಲ್ಲವೆ?

ಏನಂತೀರಿ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ