ಗೂಗಲ್ನ ಮಾಜಿ ಎಂಡಿ ಕ್ಯಾಬ್ ಡ್ರೈವರ್ಗೆ ಹಣ ಪಾವತಿಸಲು ಮರೆತಾಗ…
Cab Driver : ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದಾನೆ. ಆದರೆ ನಾವು ಸ್ಥಳೀಯ ನಿವಾಸಿಗಳಲ್ಲ ಎಂದು ಅವನಿಗೆ ಗೊತ್ತಿತ್ತು, ಹಾಗೆಯೇ ಹಣ ಎಷ್ಟು ಎಂದು ಕೇಳಿದರೂ ಅವನು ಹೇಳಲೇ ಇಲ್ಲ. ನಂತರ...
Viral Video : ಗೂಗಲ್ನ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ದೆಹಲಿ ವಿಮಾನ ನಿಲ್ದಾಣಕ್ಕೆ ಕ್ಯಾಬ್ನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಕ್ಯಾಬ್ ಡ್ರೈವರ್ಗೆ ಹಣ ಪಾವತಿಸುವುದನ್ನೇ ಮರೆತಿದ್ದಾರೆ. ಇದ್ದಕ್ಕಿದ್ದಂತೆ ನೆನಪಾಗಿ ಹೇಗೆ ಹಣ ಪಾವತಿಸುವುದು ಎಂದು ವಾಪಸ್ ಡ್ರೈವರ್ಗೆ ಫೋನ್ ಮಾಡಿ ಕೇಳಿದಾಗ, ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದಾನೆ. ಆದರೆ ನಾವು ಸ್ಥಳೀಯ ನಿವಾಸಿಗಳಲ್ಲ ಎಂದು ಅವನಿಗೆ ಗೊತ್ತಿತ್ತು, ಹಾಗೆಯೇ ಹಣ ಎಷ್ಟು ಎಂದು ಕೇಳಿದರೂ ಅವನು ಹೇಳಲೇ ಇಲ್ಲ. ಆದರೂ ನನಗೆ ಸುಮ್ಮನಿರಲಾಗಲಿಲ್ಲ, ಒಂದಿಷ್ಟು ಹಣ ಪಾವತಿಸಿದೆ. ಈ ಘಟನೆಯಿಂದ ಅರಿವಿಗೆ ಬಂದಿದ್ದೇನೆಂದರೆ ಇನ್ನೂ ವಿನಮ್ರತೆ, ವಿನಯಶೀಲತೆ ಜೀವಂತವಾಗಿದೆ ಎನ್ನುವುದು ಎಂದು ಟ್ವೀಟ್ ಮಾಡಿದ್ದಾರೆ ಪರ್ಮಿಂದರ್ ಸಿಂಗ್.
The soft spoken cab driver dropped us at Delhi airport. We walked off without paying. Desperately called to ask how to pay & he replied, ‘Koi baat nahi, phir kabhi aa jayenge’. Won’t even tell the amount. He knew we don’t live here. We eventually paid him & learnt decency exists.
ಇದನ್ನೂ ಓದಿ— Parminder Singh (@parrysingh) December 3, 2022
ಇದೇ ಟ್ವೀಟಿನ ಥ್ರೆಡ್ನಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರೈವರ್ನ ವಿವರಗಳನ್ನು ಅನುಮತಿ ಇಲ್ಲದೆ ಹಂಚಿಕೊಳ್ಳಲಾರೆ. ಆದರೆ ದೆಹಲಿ ಸುತ್ತಮುತ್ತ ನೀವು ಒಳ್ಳೆಯ ಕ್ಯಾಬ್ ಡ್ರೈವರ್ನನ್ನು ಹುಡುಕುತ್ತಿದ್ದರೆ ದಯವಿಟ್ಟು ನನಗೆ ಮೆಸೇಜ್ ಮಾಡಿ ಎಂದಿದ್ದಾರೆ.
ಎರಡು ದಿನಗಳ ಹಿಂದೆ ಹಂಚಿಕೊಂಡ ಈ ಪೋಸ್ಟ್ ಅನ್ನು ಸುಮಾರು 950 ಜನರು ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ‘ಭಾರತದಲ್ಲಿ ಪ್ರಯಾಣಿಸುವಾಗ ಅನೇಕ ಪ್ರಯಾಣಿಕರು ಉತ್ತಮವಾದ ಮತ್ತು ಕೆಟ್ಟ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಂಥ ರೂಢಿಗತವಾದ ಅನುಭವಗಳನ್ನು ಮುರಿದು ಯೋಚಿಸುವಂತೆ ಕೂಡಿತ್ತು ಈ ಅನುಭವ’ ಎಂದಿದ್ದಾರೆ ಎಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ನವೀನ್ ಮಹೇಶ್ವರಿ.
ಇದನ್ನೂ ಓದಿ : ಪ್ರಯಾಣಿಕರೊಂದಿಗೆ ಸಂಸ್ಕೃತದಲ್ಲಿ ಮಾತನಾಡುವ ಕ್ಯಾಬ್ ಡ್ರೈವರ್, ವಿಡಿಯೋ ವೈರಲ್
ದೆಹಲಿಯಲ್ಲಿ ಕ್ಯಾಬ್ ಡ್ರೈವರ್ಗಳು ಹೇಗೆ ಸುಲಿಗೆ ಮಾಡುತ್ತಾರೆ ಎಂದು ಅನುಭವಿಸಿದವರಿಗೇ ಗೊತ್ತು. ಧನ್ಯವಾದ ನಾನು ನಿಮಗೆ ಮೆಸೇಜ್ ಮಾಡಿ ಆ ಡ್ರೈವರ್ ನಂಬರ್ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ಸರಳ ಮನಸಿನವರು ನಿಜಕ್ಕೂ ಘನತೆಯುಳ್ಳ ಮನುಷ್ಯರು ಎಂದಿದ್ದಾರೆ ಇನ್ನೊಬ್ಬರು.
ನಿಮ್ಮ ಅಭಿಪ್ರಾಯವೇನು ಈ ವಿಷಯವಾಗಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:26 pm, Mon, 5 December 22