
Tigers: ನಿದ್ರೆ ಎನ್ನುವುದು ಸಕಲ ಜೀವಿಗಳಿಗೂ ಒಳ್ಳೆಯ ಔಷಧಿ ಮತ್ತು ಪರಿಹಾರ ಕೂಡ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋ ನೊಡಿ, ಹುಲಿಯ ಕುಟುಂಬವೊಂದು ಕಾಡಿನಲ್ಲಿ ಹಾಯಾಗಿ ನಿದ್ರೆ ಹೋಗಿದೆ. ಅದೆಷ್ಟು ದಣಿದಿದ್ದವೋ ಆಟವಾಡಿ ಬೇಟೆಯಾಡಿ ಅಂತೂ ಆರಾಮಾಗಿ ನಿದ್ರೆಯಲ್ಲಿ ಕಳೆದುಹೋಗಿವೆ. ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ರಮೇಶ ಪಾಂಡೆ Xನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿಗೆ ಈ ಹುಲಿಗಳು ನಿಶ್ಚಿಂತೆಯಿಂದ ನಿದ್ರೆ ಹೋಗಿರುವ ದೃಶ್ಯ ನೋಡಿದ ನೆಟ್ಟಿಗರು ಇದೊಂದು ದೃಶ್ಯಕಾವ್ಯ. ಸೆರೆಹಿಡಿದವರಿಗೆ ಧನ್ಯವಾದ ಎಂದಿದ್ದಾರೆ. ಅಚ್ಚರಿಯಂದ ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಕಾವಾಲಾ ಕಾವು; 53 ವರ್ಷದ ಮಹಿಳೆ ‘ಜೈಲರ್’ಗೆ ಹೆಜ್ಜೆ ಹಾಕಿದಾಗ
ಸೆ.9 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಇದೀಗ 15,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ಹುಲಿಯಮ್ಮನಿಗೆ ಮಕ್ಕಳನ್ನು ನೋಡಿಕೊಂಡು ಬಹಳ ಸುಸ್ತಾಗಿರಬೇಕು, ಮಕ್ಕಳೊಂದಿಗೆ ನಿದ್ರೆಗೆ ಹೋಗಿದ್ದಾಳೆ. ಆದರೂ ಸಂಪೂರ್ಣವಾಗಿ ಆಕೆ ನಿದ್ರೆಗೆ ಹೋಗಲಾರಳು, ಮಕ್ಕಳನ್ನು ಕಾಯಬೇಕಲ್ಲ ಎಂದಿದ್ದಾರೆ ಕೆಲವರು.
ಇವರೆಲ್ಲರನ್ನೂ ನೋಡಲು ಬಹಳ ಸಂತೋಷವೆನ್ನಿಸುತ್ತಿದೆ ಎಂದು ಒಬ್ಬರು. ಇದು ನಿಜಕ್ಕೂ ಬಹಳ ಸುಂದರವಾದ ದೃಶ್ಯ ಎಂದು ಇನ್ನೊಬ್ಬರು. ಅದ್ಭುತ, ಇಂತ ವಿಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಎಂದು ಮತ್ತೊಬ್ಬರು. ಈ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ : Viral Optical Illusion: ಉದುರಿದ ಎಲೆಗಳ ನಡುವೆ ಅಡಗಿರುವ 4 ಸೇಬುಗಳನ್ನು ಗುರುತಿಸುವಿರಾ?
ಸುಮಾರು 500 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 70 ಜನರು ರೀಪೋಸ್ಟ್ ಮಾಡಿದ್ದಾರೆ. ಇದು ನನ್ನ ಭಾನುವಾರವನ್ನು ಸುಂದರಗೊಳಿಸಿತು. ಇದನ್ನು ಸೆರೆಹಿಡಿದವರಿಗೆ ಧನ್ಯವಾದ. ಇದೊಂದು ದೃಶ್ಯಕಾವ್ಯ ಎಂದಿದ್ದಾರೆ ಅನೇಕರು. ಅಮ್ಮ ನಿರುಮ್ಮಳವಾಗಿ ನಿದ್ರೆ ಮಾಡಲು ಆಗುವುದೇ ಇಲ್ಲವಲ್ಲ ಯಾವತ್ತೂ? ಎಂದಿದ್ದಾರೆ ಒಬ್ಬರು. ಆ ಪುಟಾಣಿ ಹುಲಿಮರಿಗಳನ್ನು ಎತ್ತಿಕೊಂಡು ಬರಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ